ಮೈಸೂರು: ನಗರದ ಅಗ್ರಹಾರದಲ್ಲಿರುವ ಉತ್ತರಾದಿ ಮಠದಲ್ಲಿ 33 ದಿನಗಳ ಅಧಿಕ ಮಾಸೋತ್ಸವ ಪ್ರಯುಕ್ತ ಮೈಸೂರು ದಿಗ್ವಿಜಯಕ್ಕೆ ಆಗಮಿಸಿದ ಸತ್ಯಾತ್ಮತೀರ್ಥ ಸ್ವಾಮೀಜಿ ಅವರನ್ನು ಗುರುವಾರ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.

ಸತ್ಯಪ್ರಮೋದತೀರ್ಥ ಸ್ವಾಮೀಜಿಗಳ ಭಾವಚಿತ್ರಕ್ಕೆ ಸತ್ಯಾತ್ಮತೀರ್ಥ ಸ್ವಾಮೀಜಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ನಗರದ ಮಹಾರಾಜ ಕಾಲೇಜು ಮೈದಾನದಿಂದ ಉತ್ತರಾದಿ ಮಠದವರೆಗೆ ನಡೆದ ಪಲ್ಲಕ್ಕಿ ಸಮೇತ ಮೆರವಣಿಗೆಯಲ್ಲಿ ನಾದಸ್ವರ, ವೀರಗಾಸೆ ಕುಣಿತ, ಚಂಡೆ ನಗಾರಿ, ಡೊಳ್ಳು ಕುಣಿತ, ಬೊಂಬೆ ವೇಷ, ಕಂಸಾಳೆ, ಉಡುಪಿಯ ಬಾಣ ಬಿರುಸು, ಚೆನ್ನೈನ ಚಿತ್ತಾರದ ಆನೆ ಹಾಗೂ ವಿವಿಧ ಭಜನಾ ಮಂಡಳಿಗಳು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.

ಜೂನ್ 15ರವರೆಗೆ ಅಧಿಕ ಮಾಸೋತ್ಸವವನ್ನು ಉತ್ತರಾದಿ ಮಠದಲ್ಲಿ ಆಯೋಜಿಸಿದ್ದು, ಪ್ರತಿನಿತ್ಯ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದೆ.

ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮುಖಂಡರಾದ ಕೆ.ಆರ್.ಸತ್ಯನಾರಾಯಣ, ಡಿ.ಟಿ.ಪ್ರಕಾಶ್, ಕೆ.ರಘುರಾಂ ವಾಜಪೇಯಿ, ಮಹೇಶ್ ಕಾಮತ್, ಎಸ್.ಭುಜಂಗ, ಅನಂತ್ ನಾಗರಾಜ್, ಎಸ್.ಬಿ.ವಾಸುದೇವಮೂರ್ತಿ, ಎನ್.ಎಂ.ನವೀನ್ ಕುಮಾರ್, ರಘುವೀರ್ ಸಾಂಗ್ಲಿ, ಪ್ರವೀಣ್ ಕುಮಾರ್, ಉತ್ತರಾದಿ ಮಠದ ವ್ಯವಸ್ಥಾಪಕ ಅನಿರುದ್ಧಾಚಾರ್ಯ ಪಾಂಡುರಂಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-39-1017854888

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.