ಮೈಸೂರು: ‘ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗೃಹ
ಬಳಕೆಯ ಅನಿಲ ಸಿಲಿಂಡರ್ಗೆ ₹ 60
ಮತ್ತು ವಾಣಿಜ್ಯ ಬಳಕೆಯ ಸಿಲಿಂಡ
ರ್ಗೆ ₹ 114 ಹೆಚ್ಚಿಸಿ
ರುವ ಕ್ರಮ ಖಂಡ
ನೀಯ’ ಎಂದು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ರವಿ ತಿಳಿಸಿದ್ದಾರೆ.

‘ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಸುತ್ತಿದ್ದಾಗ, ಅದರ
ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿ
ಸಲಿಲ್ಲವೇಕೆ? ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಅಮೆರಿಕ ಹಾಕಿದ ಒತ್ತಡಕ್ಕೆ ಮಣಿದಿರುವುದು ಯಾರ ಹಿತಾಸಕ್ತಿಗಾಗಿ? ಇನ್ನು 50 ದಿನಗಳಿಗೆ ಬೇಕಾದಷ್ಟು ಕಚ್ಚಾತೈಲ ಇದೆ ಎಂಬ ವರದಿ ಇರುವಾಗ ಹಳೆಯ ದರದಲ್ಲಿ ಖರೀದಿಸಿದುದರ ಬೆಲೆ ಈಗಲೇ ಏರಿಸಿರುವುದು ಏಕೆ? ಎಂದು ಕೇಳಿದ್ದಾರೆ.

‘ಈಗಾಗಲೇ ಜನರ ಜೀವನ ವೆಚ್ಚ ಅತಿಯಾಗಿದೆ. ಅದಕ್ಕೆ ತಕ್ಕಂತೆ ವೇತನ ಹೆಚ್ಚಳ ಅಥವಾ ಉದ್ಯೋಗ ಸೃಷ್ಟಿ ಆಗಿಲ್ಲ. ದುಡಿಯುವ ಜನ ಸಾಲ ಮಾಡಿಯೇ ಬದುಕಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ, ಇಂಧನ ದರ ಹೆಚ್ಚಳ ಇನ್ನಷ್ಟು ಹಣದುಬ್ಬರಕ್ಕೆ ಕಾರಣವಾಗಲಿದೆ ಎಂಬ ಕನಿಷ್ಠ ತಿಳಿವಳಿಕೆ ಈ ಸರ್ಕಾರಕ್ಕೆ ಇರಬೇಕಿತ್ತು. ಕೇಂದ್ರ ಸರ್ಕಾರದ ಈ ಅಮಾನವೀಯ ಧೋರಣೆಯನ್ನು ಪಕ್ಷ ಕಟುವಾಗಿ ವಿರೋಧಿಸುತ್ತದೆ’ ಎಂದು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.