ತಿ.ನರಸೀಪುರ: ರೈತರ ಕುಂದುಕೊರತೆ ಸಭೆಗೆ ಒಂದು ರೈತ ಸಂಘಟನೆಯನ್ನು ಮಾತ್ರ ಆಹ್ವಾನಿಸಿದ್ದು, ಉಳಿದ ಸಂಘಟನೆಗಳನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿ ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಸದಸ್ಯರು ಪುರಸಭೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪುರಸಭೆ ಸಭಾಂಗಣದಲ್ಲಿ ತಹಶೀಲ್ದಾರ್ ಟಿ.ಜೆ. ಸುರೇಶಾಚಾರ್ ಅಧ್ಯಕ್ಷತೆಯಲ್ಲಿ ರೈತರ ಸಭೆ ನಡೆಯುತ್ತಿದ್ದನ್ನು ತಿಳಿದ ಕಬ್ಬು ಬೆಳೆಗಾರರ ಸದಸ್ಯರು ಸಭೆಗೆ ತಮಗೆ ಮಾಹಿತಿ ನೀಡದೇ ಸಭೆ ನಡೆಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ‘ಸಭೆ ಮಾಡಲು ಆ ರೈತ ಸಂಘಟನೆಯವರು ಮನವಿ ನೀಡಿದ್ದ ಹಿನ್ನೆಲೆಯಲ್ಲಿ ಸಭೆ ನಡೆಸಲಾಗುತ್ತಿದೆ. ರೈತರ ಕುಂದುಕೊರತೆ ಸಭೆ ಕರೆದಿಲ್ಲ. ಅಧಿಕಾರಿಗಳ ಸಭೆ ಕರೆದಿದ್ದೇನೆ. ಇಲ್ಲಿರುವವರು ರೈತರಲ್ಲವೇ’ ಎಂದು ಪ್ರಶ್ನಿಸಿದರು.

ತಹಶೀಲ್ದಾರ್ ಅವರು ಮತ್ತೊಮ್ಮೆ ಸಭೆ ಕರೆಯುವುದಾಗಿ ತಿಳಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕುರುಬೂರು ಸಿದ್ದೇಶ್, ‘ತಹಶೀಲ್ದಾರ್ ಅವರು ಒಂದು ಸಂಘಟನೆಗೆ ಸೀಮಿತವಾಗಿ ಸಭೆ ಮಾಡುತ್ತಿದ್ದಾರೆ. ಅವರ ಈ ನಡೆ ರೈತ ಸಮುದಾಯದ ಬಗ್ಗೆ ತಾಲ್ಲೂಕು ಆಡಳಿತಕ್ಕೆ ರೈತರ ಬಗ್ಗೆ ಇರುವ ಅಸಡ್ಡೆಗೆ ಸಾಕ್ಷಿ’ ಎಂದು ಆರೋಪಿಸಿದರು.

‘ತಹಶೀಲ್ದಾರ್ ಹೇಳುವುದು ಒಂದು. ಇಲ್ಲಿ ಆಗಿರುವುದು ಇನ್ನೊಂದು. ಕುಂದುಕೊರತೆ ಸಭೆ ಅಲ್ಲದಿದ್ದರೆ, ಅಧಿಕಾರಿಗಳು ಸಹಿ ಮಾಡುವ ಪತ್ರದಲ್ಲಿ ರೈತರ ಕುಂದು ಕೊರತೆ ಸಭೆ ಎಂದು ನಮೂದಾಗಿದೆಯಲ್ಲ ಎಂದು ಆಕ್ಷೇಪಿಸಿ, ತಾಲ್ಲೂಕು ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಶೀಘ್ರ ಕುಂದುಕೊರತೆ ಸಭೆ ನಡೆಸದಿದ್ದರೆ ತೀವ್ರ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಕಿರಗಸೂರು ಪ್ರಸಾದ್ ನಾಯಕ, ಕುರುಬೂರು ಗೌರಿಶಂಕರ, ಟೌನ್ ಅಧ್ಯಕ್ಷ ಅಪ್ಪಣ್ಣ,ಹ್ಯಾಕ ನೂರು ರಾಜೇಶ್, ಯೋಗೇಶ್, ಕೆ.ಜಿ. ಗುರುಸ್ವಾಮಿ, ಕಿರಗಸೂರು ಸುರೇಶ, ಸಂತೋಷ, ತರಕಾರಿ ಲಿಂಗರಾಜು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-38-444961127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.