ತಿ.ನರಸೀಪುರ: ಯುಗಾದಿ ಅಂಗವಾಗಿ ವಿವಿಧೆಡೆಗಳಿಂದ ಬಂದಿದ್ದ ಸಾವಿರಾರು ಜನರು ಪಟ್ಟಣದ ತ್ರಿವೇಣಿ ಸಂಗಮದಲ್ಲಿ ಗುರುವಾರ ಪುಣ್ಯಸ್ನಾನ ಮಾಡಿದರು.

ಪ್ರತಿ ವರ್ಷ ಯುಗಾದಿಯ ದಿವಸ ತಾಲ್ಲೂಕು ಮಾತ್ರವಲ್ಲದೆ ನೆರೆಹೊರೆಯ ಜಿಲ್ಲೆಗಳಿಂದ ಹಾಗೂ ಮೈಸೂರು ಜಿಲ್ಲೆಯ ಕೆ.ಆರ್ .ನಗರ ತಾಲ್ಲೂಕಿನ ಕಪ್ಪಡಿಗೆ ತೆರಳಿದ್ದ ಭಕ್ತರು ಯುಗಾದಿಯ ಹಿಂದಿನ ದಿನ ಮಳ್ಳವಳ್ಳಿ ತಾಲ್ಲೂಕಿನ ಬೊಪ್ಪೇಗೌಡನಪುರದ ಧರೆಗೆ ದೊಡ್ಡವರ (ಮಂಟೆಸ್ವಾಮಿ) ಗದ್ದಿಗೆಯ ಮಠಕ್ಕೆ ತೆರಳಿ ರಾತ್ರಿ ಪಟ್ಟಣಕ್ಕೆ ಬಂದು ವಾಸ್ತವ್ಯ ಹೂಡಿ ಯುಗಾದಿಯ ಮುಂಜಾನೆ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಬಳಿಕ ಗ್ರಾಮಗಳಿಗೆ ತೆರಳುವುದು ವಾಡಿಕೆ.

ಅದರಂತೆ ಬುಧವಾರ ತಾಲ್ಲೂಕಿನ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ, ಬೈರವೇಶ್ವರ, ಮಲ್ಲಪ್ಪನವರ ನೀಲಗಾರರು (ಗುಡ್ಡಪ್ಪನವರು) ಬೊಪ್ಪೇಗೌಡನ ಪುರದ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿ ಸಮೀಪದ ಸರಗೂರು ಮಹದೇಶ್ವರ ಸ್ವಾಮಿಯ ದರ್ಶನ ಪಡೆದು ಪಟ್ಟಣಕ್ಕೆ ಬಂದು ವಾಸ್ತವ್ಯ ಹೂಡಿದ್ದರು. ಗುರುವಾರ ಮುಂಜಾನೆಯಿಂದಲೇ ಅಗಸ್ತ್ಯೇಶ್ವರ, ಕಪಿಲಾ ದಂಡೆಯ ಗುಂಜಾನರಸಿಂಹಸ್ವಾಮಿ, ಕಾವೇರಿ ದಂಡೆಯ ಭಿಕ್ಷೇಶ್ವರ ಸ್ನಾನ ಘಟ್ಟಗಳಲ್ಲಿ ಪುಣ್ಯಸ್ನಾನ ಮಾಡಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ದೇವರ ಕೂಟಗಳು ತ್ರಿವೇಣಿ ಸಂಗಮದಲ್ಲಿ ದೇವರ ಪರಿಕರಗಳನ್ನು ಸ್ವಚ್ಛಗೊಳಿಸಿ ಬಳಿಕ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮೂಲಕ ಸ್ವಗ್ರಾಮಕ್ಕೆ ತೆರಳಿದರು.

ಇದಲ್ಲದೆ ತಾಲೂಕಿನ ಇನ್ನೂ ಹಲವಾರು ಗ್ರಾಮಗಳಿಂದ ಆಗಮಿಸಿದ್ದ ದೇವರ ಕೂಟಗಳು ಸಂಗಮದಲ್ಲಿ ಪೂಜೆ ಸಲ್ಲಿಸಿದವು. ಭಕ್ತರು ತಮ್ಮ ತಮ್ಮ ಕುಲದೇವರಿಗೆ ಪೂಜೆ ಸಲ್ಲಿಸಿದರು. ಉರಿಬಿಸಿನಲ್ಲಿ ನಡೆದು ಸಾಗುತ್ತಿದ್ದ ಜನರಿಗೆ ಅಲ್ಲಲ್ಲಿ ಸಂಘ ಸಂಸ್ಥೆಗಳು, ವರ್ತಕರು ನೀರು ಮಜ್ಜಿಗೆ ಪಾನಕ ವಿತರಿಸಿದರು.

ಹಿಂದೂಗಳಿಗೆ ನೂತನ ವರ್ಷ ಎಂದೇ ಕರೆಯಲಾದ ಯುಗಾದಿಯ ದಿವಸ ಪಟ್ಟಣದ ಎಲ್ಲಾ ದೇಗುಲಗಳಲ್ಲೂ ವಿಶೇಷ ಪೂಜೆಗಳು ಜರುಗಿದವು. ಹೊಸ ವರ್ಷದ ಹಿನ್ನೆಲೆಯಲ್ಲಿ ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ದೇಗುಲ ಗಳಲ್ಲಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-38-284465960

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.