ತಿ.ನರಸೀಪುರ: ಆನ್ಲೈನ್ ಮೂಲಕ ಅನಧಿಕೃತ ಔಷಧಿ ಮಾರಾಟ ಹಾಗೂ ಮನೆಗೆ ಔಷಧಿ ವಿತರಣೆ ಸೇವೆಯನ್ನು ನಿಯಂತ್ರಿಸುವಂತೆ ಪಟ್ಟಣದ ಔಷಧ ವ್ಯಾಪಾರಿಗಳು ಬುಧವಾರ ತಹಶೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇಲ್ಲಿನ ಮೆಡಿಕಲ್ ಶಾಪ್ ಮಾಲೀಕ ಕುಮಾರ್ ಮಾತನಾಡಿ, ಹತ್ತಾರು ವರ್ಷಗಳಿಂದ ಪರವಾನಗಿ ಪಡೆದು ಔಷಧಿ ಅಂಗಡಿ ನಡೆಸುತ್ತಿದ್ದು, ಗ್ರಾಹಕರಿಗೆ ನಿಯಮಾನುಸಾರ ಔಷಧಿಗಳನ್ನು ಪೂರೈಸುತ್ತಿದ್ದೇವೆ.ಸಾರ್ವಜನಿಕರಿಗೆ ತೊಂದರೆಯಾಗದಂತೆ , ನಮ್ಮ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ ತಾಲ್ಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ವಿವಿಧ ಆನ್ಲೈನ್ ವೇದಿಕೆಗಳು ಹಾಗೂ ಅಪ್ಲಿಕೇಶನ್ಗಳ ಮೂಲಕ ವೈದ್ಯರ ಸರಿಯಾದ ಚೀಟಿ ಪರಿಶೀಲನೆ ಇಲ್ಲದೆ ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಹೆಚ್ಚಾಗುತ್ತಿದೆ. ಪರಿಣಾಮವಾಗಿ ನಿಯಮ ಬಾಹಿರ ಔಷಧಿ ಮಾರಾಟ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ನಕಲಿ ಅಥವಾ ಅವಧಿ ಮೀರಿದ ಔಷಧಿಗಳು ಜನರಿಗೆ ತಲುಪುವ ಅಪಾಯವಿದೆ. ವೈದ್ಯರ ಸಲಹೆ ಇಲ್ಲದೆ ಔಷಧಿ ಬಳಕೆ ಹೆಚ್ಚಾಗಿ ಸಾರ್ವಜನಿಕ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಪರವಾನಗಿ ಪಡೆದ ಸ್ಥಳೀಯ ಔಷಧಿ ಅಂಗಡಿಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಸರ್ಕಾರದ ಔಷಧಿ ಮಾರಾಟ ನಿಯಮಾವಳಿಗಳ ಉಲ್ಲಂಘನೆ ನಡೆಯುತ್ತಿರುವ ಅನುಮಾನ ಇದೆ’ ಎಂದು ವ್ಯಾಪಾರಸ್ಥರು ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ಧಾರೆ.

ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಆನ್ಲೈನ್ ಔಷಧಿ ವಿತರಣೆಯ ಕಾನೂನು ಬದ್ಧತೆ ಪರಿಶೀಲಿಸಬೇಕು, ಔಷಧಿ ಮತ್ತು ಸೌಂದರ್ಯ ವರ್ಧಕ ವಸ್ತುಗಳ ಕಾಯ್ದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ವೈದ್ಯರ ಚೀಟಿ ಇಲ್ಲದೆ ಔಷಧಿ ವಿತರಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಔಷಧಿ ವ್ಯಾಪಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಸಾರ್ವಜನಿಕರ ಆರೋಗ್ಯಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಮೆಡಿಕಲ್ಸ್ ವ್ಯಾಪಾರಿಗಳಾದ ಆಸೀಫ್, ಮಂಜು, ಮಧು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-38-856625870

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.