ತಿ.ನರಸೀಪುರ: ‘25 ವರ್ಷಗಳಿಂದ ಉಚಿತ ಆರೋಗ್ಯ ಶಿಬಿರ ನಡೆಸುತ್ತಾ ಬಂದಿದ್ದು, ಹಲವು ಚಿಕಿತ್ಸಾ ಪದ್ಧತಿ ಮೂಲಕ ಜನರಿಗೆ ಅಗತ್ಯ ಸಹಕಾರ ನೀಡುತ್ತಿದ್ದೇವೆ’ ಎಂದು ಹಸ್ತಿಕೇರಿ ಮಠದ ಸಿದ್ಧಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ತಲಕಾಡು ಹಸ್ತಿಕೇರಿ ಮಠದಲ್ಲಿ ಮಠದ ವಿಕಾಸ ವೇದಿಕೆ ಟ್ರಸ್ಟ್, ಬೆಂಗಳೂರಿನ ಪತಂಜಲಿ ಇಂಟರ್ನ್ಯಾಷನಲ್ ಯೋಗಾಶ್ರಮ, ಸಮೃದ್ಧಿ ಪಾಲಿಕ್ಲಿನಿಕ್ ಡಯಾಗ್ನೋಸ್ಟಿಕ್ ಮೈಸೂರು ಮತ್ತು ತಲಕಾಡು ಶಾಖೆಗಳ ಸಹಯೋಗದಲ್ಲಿ ಶುಕ್ರವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಯೋಗ, ಪ್ರಾಕೃತಿಕ, ವಿಷ ಚಿಕಿತ್ಸೆ, ಸಮನ್ವಯ, ಸ್ವಮೂತ್ರ ಚಿಕಿತ್ಸೆ ವಿಧಾನಗಳ ಮೂಲಕ ಹಿಂದಿನ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಡ ರೋಗಿಗಳಿಗೂ ಸಹಕಾರಿಯಾಗಿದೆ ಎಂದು ತಿಳಿಸಿದರು.

ಪತಂಜಲಿ ಯೋಗಾಶ್ರಮದ ಪ್ರಕಾಶ್ ಯೋಗಿ ಮಾತನಾಡಿ, ‘ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಯೋಗ ಶಿಬಿರಗಳನ್ನು ಅಯೋಜಿಸಿ ಲಕ್ಷಾಂತರ ಜನರಿಗೆ ಯೋಗದ ಮಹತ್ವ ಸಾರಿದ್ದೇವೆ’ ಎಂದರು.

ಡಾ. ನವೀನ್, ಡಾ. ಸೈವಾಲಿನ್, ನಿಂಗರಾಜು, ಯೋಗೇಶ್, ಕಪಿಲ್ ರಾವ್, ಪಿ.ಜಿ. ಪಾಂಡುರಂಗ ಶೆಟ್ರು, ಮಲ್ಲಣ್ಣ, ಮಹೇಶ್, ಯಜಮಾನ ಚೆನ್ನಬಸವಣ್ಣ, ಪಾಪಣ್ಣ, ಮಹದೇವಪ್ಪ, ಪಂಚಾಯಿತಿ ಮಾಜಿ ಸದಸ್ಯ ನಾಗರಾಜು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-38-335734948

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.