ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೀವನ ವಿಕಸನಕ್ಕೆ ಗುರುವಿನ ಮಾರ್ಗದರ್ಶನ ಅಗತ್ಯ: ಬಿಇಒ ರವಿಪ್ರಸನ್ನ

Published : 5 ಸೆಪ್ಟೆಂಬರ್ 2024, 14:21 IST
Last Updated : 5 ಸೆಪ್ಟೆಂಬರ್ 2024, 14:21 IST
ಫಾಲೋ ಮಾಡಿ
Comments

ಪಿರಿಯಾಪಟ್ಟಣ: ಪ್ರತಿಯೊಬ್ಬರ ಜೀವನ ವಿಕಸನಗೊಳ್ಳಬೇಕಾದರೆ ಶಿಕ್ಷಕ ಎಂಬ ಗುರುವಿನ ಮಾರ್ಗದರ್ಶನ ಅತ್ಯಗತ್ಯ ಎಂದು ಬಿಇಒ ರವಿಪ್ರಸನ್ನ ತಿಳಿಸಿದರು.

ತಾಲ್ಲೂಕಿನ ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ಎಸ್‌ಡಿಎಂಸಿ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಮೂರ್ತದಿಂದ ಮೂರ್ತದ ಕಡೆಗೆ ಕೊಂಡೊಯ್ಯುವ ಶಕ್ತಿಯನ್ನ ಶಿಕ್ಷಕ ಎಂಬ ಮಹಾನ್ ಗುರು ಹೊಂದಿದ್ದು, ಈ ಶಕ್ತಿ ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಉತ್ತಮ ಮಾರ್ಗವನ್ನು ತೋರಿಸುವ ಕೆಲಸವನ್ನು ಮಾಡುತ್ತದೆ. ಉತ್ತಮ ಸಮಾಜ ನಿರ್ಮಾಣ ಮಾಡಲು ಶಿಕ್ಷಕರಿಗೆ ಮಾತ್ರ ಸಾಧ್ಯ, ಅವರನ್ನು ಪ್ರತಿಯೊಬ್ಬರು ಗೌರವಿಸುವುದು ಎಲ್ಲರ ಕರ್ತವ್ಯ ವಾಗಿದೆ ಎಂದು ತಿಳಿಸಿದರು.

ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರ್.ಎಸ್. ದೊಡ್ಡಣ್ಣ ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣ ಹಾಗೂ ಸಾವಿತ್ರಿ ಬಾಯಿಫುಲೆ ಅವರು ಶಿಕ್ಷಣಕ್ಕೆ ನೀಡಿದ ಮಹತ್ತರ ಕೊಡುಗೆಗಳನ್ನು ಪ್ರತಿಯೊಬ್ಬರು ತಿಳಿಯಬೇಕು. ಮಾನವೀಯ ಮೌಲ್ಯಗಳ ಜೊತೆಗೆ ಜೀವನದ ನಿಜವಾದ ಅರ್ಥವನ್ನು ಪ್ರತಿಯೊಬ್ಬರಲ್ಲೂ ಮೂಡಿಸುವ ಹಾಗೂ ಬೆಳೆಸುವ ಕರ್ತವ್ಯ ಶಿಕ್ಷಕ ವೃತ್ತಿಗಿದೆ ಎಂದರು.

ಪ್ರಾಂಶುಪಾಲ ಲಕ್ಷ್ಮಿಕಾಂತ್ ಮಾತನಾಡಿ, ಶಿಕ್ಷಕ ಜ್ಞಾನ ಪ್ರತಿಭೆಯನ್ನು ಬೆಳೆಸುವಾತ ಎಂದರು. ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಶಿಕ್ಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.

ಎಸ್‌ಡಿಎಂಸಿ ಉಪಾಧ್ಯಕ್ಷ ಆರ್.ವಿ. ವಿಶ್ವನಾಥ್, ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರಾದ ರಮೇಶ್ ಮೂರ್ತಿ, ಕುಮಾರ್, ಆರ್.ಎಸ್.ಮಹೇಶ್, ಸ್ವಾಮಿ, ಸುರೇಶ್, ಆರ್.ಟಿ.ಸತೀಶ್, ಗ್ರಾ.ಪಂ. ಸದಸ್ಯೆ ಶಿವಕುಮಾರಿ, ಉಪ ಪ್ರಾಂಶುಪಾಲ ಸುರೇಶ್, ಮುಖ್ಯ ಶಿಕ್ಷಕಿ ಲಿಲ್ಲಿ ಮೇರಿ, ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರುಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT