ಜೊಂಪನಹಳ್ಳಿ (ಮೈಸೂರು ಜಿಲ್ಲೆ): ಖ್ಯಾತ ಕೈಗಡಿಯಾರ ತಯಾರಿಕಾ ಕಂಪನಿ ಟೈಟನ್ ತನ್ನ ‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್)ಯಲ್ಲಿ ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಜೊಂಪನಹಳ್ಳಿಯನ್ನು, ‘ಪ್ರತಿ ಮನೆಹಂತದಲ್ಲೂ ಜೈವಿಕ ಅನಿಲ ಶಕ್ತಿ ಹೊಂದಿರುವ ತಾಲ್ಲೂಕಿನ ಮೊಟ್ಟ ಮೊದಲ ಗ್ರಾಮ’ ಎಂದು ಘೋಷಿಸುವ ಪಣ ತೊಟ್ಟಿದ್ದು, ಅನುಷ್ಠಾನಕ್ಕೂ ಕ್ರಮ ಕೈಗೊಂಡಿದೆ.

ಗ್ರಾಮದಲ್ಲಿ 146 ಮನೆಗಳಿದ್ದು, 108 ಮನೆಗಳಲ್ಲಿ ಅಡುಗೆ ಅನಿಲ ಸಿಲಿಂಡರ್ (ಎಲ್ಪಿಜಿ) ಬಳಸಲಾಗುತ್ತಿದೆ. ಸದ್ಯ 38 ಮನೆಗಳಿಗೆ ಜೈವಿಕ ಅನಿಲ ಘಟಕ ಅಳವಡಿಸಲಾಗಿದೆ. ಕೆಲವರು ಅದರಲ್ಲೇ ಅಡುಗೆಯನ್ನೂ ಮಾಡುತ್ತಿದ್ದಾರೆ. ಎಲ್ಪಿಜಿ ಮೇಲಿನ ಅವಲಂಬನೆ ತಪ್ಪಿಸುವುದು ಹಾಗೂ ಹಸಿರು ಗ್ರಾಮವನ್ನಾಗಿಸುವ ಗುರಿ ಇದೆ.

ಕಾರ್ಯನಿರ್ವಹಣೆ ವೀಕ್ಷಣೆ:

ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಕೆ. ವೆಂಕಟರಾಮನ್ ಶುಕ್ರವಾರ ಈ ಘಟಕಗಳ ಕಾರ್ಯನಿರ್ವಹಣೆಯನ್ನು ವೀಕ್ಷಿಸಿದರು. ಮಲ್ಲಿಗಮ್ಮ ಅವರು ಅದರಲ್ಲೇ ಸಿದ್ಧಪಡಿಸಿದ ಚಹಾ ಸವಿದರು. ‘ಅತ್ಯಂತ ಹಿಂದುಳಿದ ತಾಲ್ಲೂಕಿನ ಹಳ್ಳಿಯ ಜನ ಪರಿಸರಕ್ಕೆ ಪೂರಕವಾದ ಸುಸ್ಥಿರ ಅಭಿವೃದ್ಧಿಯೆಡೆಗೆ ಹೆಜ್ಜೆ ಇಡುತ್ತಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಟೈಟನ್ ‘ಲೀಪ್ (ಲರ್ನ್–ಅಪ್ಲೈ–ಪ್ರೋಗ್ರೆಸ್) ಅಡಿ ಘಟಕಗಳನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ (ಎಸ್ವಿವೈಎಂ) ಸ್ಥಾಪಿಸಿದೆ. ನವೀಕರಿಸಬಹುದಾದ ಇಂಧನದ ಪರಿಣಾಮಕಾರಿ ಬಳಕೆ ಹಾಗೂ ‘ಜೈವಿಕ ಅನಿಲ ಬಳಸಿ ಪರಿಸರ ಉಳಿಸಿ’ ಎಂಬ ಜಾಗೃತಿಯನ್ನೂ ಮೂಡಿಸುತ್ತಿದೆ. ಘಟಕ ಸ್ಥಾಪಿಸಿಕೊಂಡವರಿಂದ ₹ 3,500 ವಂತಿಗೆಯನ್ನಷ್ಟೆ ಪಡೆದು, ಉಳಿದ ಖರ್ಚನ್ನು ಕಂಪನಿ ಭರಿಸಿದೆ. ನಿರ್ವಹಣೆ, ಬಳಕೆಯ ತರಬೇತಿಯನ್ನು ಎಸ್ವಿವೈಎಂನಿಂದ ಕೊಡಿಸಲಾಗಿದೆ.

ಹಲವು ಲಾಭ:

ಸುಸ್ಥಿರ ಗ್ರಾಮೀಣ ಅಭಿವೃದ್ಧಿಯ ಯೋಜನೆಯ ಭಾಗವಾಗಿ, ಸೆಪ್ಟೆಂಬರ್ನಲ್ಲಿ ಘಟಕಗಳ ಸ್ಥಾಪನೆಗೆ ಚಾಲನೆ ನೀಡಲಾಗಿತ್ತು. ಜೊಂಪನಹಳ್ಳಿ, ಬನವಾಡಿ ಹಾಗೂ ಇತರ ಗ್ರಾಮಗಳ ಒಟ್ಟು 200 ರೈತ ಕುಟುಂಬಗಳಿಗೆ ನೆರವು ದೊರಕಲಿದೆ. ಅಡುಗೆ ಅನಿಲದೊಂದಿಗೆ ಜೈವಿಕ ಗೊಬ್ಬರವೂ ದೊರೆಯುವುದರಿಂದ, ಸುಸ್ಥಿರ ಕೃಷಿ ಹಾಗೂ ಹೈನುಗಾರಿಕೆಗೆ ಬಲ ತುಂಬಲಿದೆ. ಹಣವೂ ಉಳಿತಾಯವಾಗಲಿದೆ ಎಂದು ಆಶಿಸಲಾಗಿದೆ.

‘ಘಟಕವನ್ನು ಕಂಪನಿಯವರೇ ಹಾಕಿಕೊಟ್ಟಿದ್ದು, ಸೋಮವಾರದಿಂದ ಇದನ್ನೇ ಬಳಸುತ್ತಿದ್ದೇವೆ. ನಿತ್ಯವೂ ಸಗಣಿಯನ್ನು ನೀರಿನಲ್ಲಿ ಬೆರೆಸಿ, ದೊರೆಯುವ ಜೈವಿಕ ಗೊಬ್ಬರವನ್ನು ಜಮೀನಿಗೆ ಬಳಸಬಹುದು. ತರಬೇತಿಯನ್ನೂ ಕೊಟ್ಟಿದ್ದಾರೆ’ ಎಂದು ಗೃಹಿಣಿ ಮಲ್ಲಿಗಮ್ಮ ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.