ಮೈಸೂರು: ‘ಪ್ರಸ್ತುತ 2022–23ನೇ ಸಾಲಿನಲ್ಲಿ ತಂಬಾಕು ಮಂಡಳಿಯು ರಾಜ್ಯದ ಹರಾಜು ಮಾರುಕಟ್ಟೆಯಲ್ಲಿ ನೋಂದಾಯಿತ ಬೆಳೆಗಾರರಿಂದ ಉತ್ಪಾದಿಸಿದ ಹೆಚ್ಚುವರಿ ಮತ್ತು ನೋಂದಾಯಿಸದ ಬೆಳೆಗಾರರಿಂದ ಉತ್ಪಾದಿಸಲಾದ ಅನಧಿಕೃತ ತಂಬಾಕು ಮಾರಾಟಕ್ಕೆ ಅವಕಾಶ ನೀಡಿದೆ’ ಎಂದು ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಎಂ.ಲಕ್ಷ್ಮಣರಾವ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ನೋಂದಾಯಿತ ಬೆಳೆಗಾರರು ಉತ್ಪಾದಿಸುವ ಹೆಚ್ಚುವರಿ ‘ಫ್ಲ್ಯೂ ಕ್ಯೂರ್ಡ್ ವರ್ಜೀನಿಯಾ’ (ಎಫ್ಸಿವಿ) ತಂಬಾಕನ್ನು ಮತ್ತು ನೋಂದಾಯಿಸದ ಬೆಳೆಗಾರರ ಅನಧಿಕೃತ ‘ಫ್ಲ್ಯೂ ಕ್ಯೂರ್ಡ್ ವರ್ಜೀನಿಯಾ’ ತಂಬಾಕನ್ನು ಸಾಮಾನ್ಯವಾಗಿ ಅನ್ವಯವಾಗುವ ಸೇವಾ ಶುಲ್ಕಗಳೊಂದಿಗೆ ತಂಬಾಕು ಮಂಡಳಿಯ ಹರಾಜು ಮಾರುಕಟ್ಟೆಯಲ್ಲಿ ಮಾರಲು ಪರಿಗಣಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸೂಚಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘2022–23ನೇ ಸಾಲಿನಲ್ಲಿ ಕರ್ನಾಟಕ ತಂಬಾಕು ಬೆಳೆ ಕಡಿಮೆ ಉತ್ಪಾದನೆಯನ್ನು ಪರಿಗಣಿಸಿ ಹೆಚ್ಚುವರಿ ಸೇವಾ ಶುಲ್ಕಗಳನ್ನು ಮನ್ನಾ ಮಾಡಲಾಗುವುದು’ ಎಂದು ಹೇಳಿದ್ದಾರೆ.

‘ರಾಜ್ಯದಲ್ಲಿ ಈ ವರ್ಷ 40,207 ರೈತರು 60,782 ಹೆಕ್ಟೇರ್ ಪ್ರದೇಶದಲ್ಲಿ ಎಫ್ಸಿವಿ ತಂಬಾಕು ಬೆಳೆದಿದ್ದಾರೆ. ಬೆಳೆಯ ಸಮಯದಲ್ಲಿ ಅಂದರೆ ಜೂನ್ ಮತ್ತು ಜುಲೈ ತಿಂಗಳಲ್ಲಿ ನಿರಂತರ ಮಳೆಯ ಕಾರಣದಿಂದ ತಂಬಾಕು ಮಂಡಳಿಯು ನಿಗದಿಪಡಿಸಿದ 100 ಮಿಲಿಯನ್ ಕೆ.ಜಿ. ಬೆಳೆ ಗಾತ್ರಕ್ಕೆ ಹೋಲಿಸಿದರೆ 59.78 ಮಿಲಿಯನ್ ಕೆ.ಜಿ. ಬೆಳೆಯನ್ನು ಮಾತ್ರ ಉತ್ಪಾದಿಸಲು ಸಮರ್ಥರಾಗಿದ್ದಾರೆ’ ಎಂದು ತಿಳಿಸಿದ್ದಾರೆ.

‘ವಾಣಿಜ್ಯ ಸಚಿವರಿಂದ ನಿರ್ಧಾರದಿಂದ, ಶೂನ್ಯ ದಂಡದ ಅಥವಾ ನೋಂದಾಯಿಸದ ಬೆಳೆಗಾರರಿಂದ ಅನಧಿಕೃತ ತಂಬಾಕು ಮಾರಾಟಕ್ಕೆ ಯಾವುದೇ ದಂಡವನ್ನು ವಿಧಿಸದಿರುವುದು ರಾಜ್ಯದ ರೈತರಿಗೆ ಈ ವರ್ಷದಲ್ಲಿ ಕಡಿಮೆ ಉತ್ಪಾದನೆಯಿಂದಾದ ನಷ್ಟದಿಂದ ಹೊರಬರಲು ಪ್ರಯೋಜನವಾಗುತ್ತದೆ. ತಂಬಾಕು ಮಂಡಳಿಯ ಪರಿಶ್ರಮದಿಂದ ಹೆಚ್ಚುವರಿ ಸೇವಾ ಶುಲ್ಕಗಳನ್ನು ಮನ್ನಾ ಮಾಡಲಾಗಿದೆ. ಇದು, ಎಫ್ಸಿವಿ ತಂಬಾಕು ಬೆಳೆಗಾರರಿಗೆ ಕಡಿಮೆ ಉತ್ಪಾದನೆಯಿಂದಾ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.