ಮೈಸೂರು: ‘ವಾಣಿವಿಲಾಸ ಮೊಹಲ್ಲಾದ ಕುವೆಂಪು ಬಾಳಿದ ಮನೆ ‘ಉದಯರವಿ’ ಅನ್ನು ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರವು ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕು. ಮರಣೋತ್ತರ ಭಾರತ ರತ್ನ ಶೀಘ್ರದಲ್ಲಿ ಘೋಷಣೆ ಆಗಲಿದ್ದು, ಅಷ್ಟರೊಳಗೆ ಸ್ಮಾರಕ ನಿರ್ಮಾಣವಾಗಲಿ’ ಎಂಬ ಆಗ್ರಹಗಳು ಮೊಳಗಿದವು.

ವಿಜಯನಗಗರದ ಕನ್ನಡ ಸಾಹಿತ್ಯ ಭವನದಲ್ಲಿ ‘ಉದಯರವಿ ಕುವೆಂಪು ಸ್ಮಾರಕ ಹೋರಾಟ ಸಮಿತಿ’ಯು ಬುಧವಾರ ಆಯೋಜಿಸಿದ್ದ ಚಿಂತಕರ ಚಿಂತನಾ ಸಭೆಯಲ್ಲಿ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸುವ, ನಿರ್ಧಾರ ಕೈಗೊಳ್ಳಲು 3 ತಿಂಗಳ ಗಡುವು ನೀಡಲು ತೀರ್ಮಾನಿಸಲಾಯಿತು. ಅನುಷ್ಠಾನಗೊಳ್ಳದಿದ್ದರೆ ಬೃಹತ್ ಹೋರಾಟ ನಡೆಸಲು ಮುಖಂಡರು ನಿರ್ಧರಿಸಿದರು.

ಲೇಖಕ ಪ್ರೊ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ‘ಕುಪ್ಪಳಿ ಕುವೆಂಪು ಅವರ ಜನ್ಮಭೂಮಿಯಾದರೆ ಮೈಸೂರು ಕರ್ಮಭೂಮಿ. ರಾಜ್ಯ ಸರ್ಕಾರಕ್ಕೆ ಅವರ ಮನೆಯನ್ನು ಸ್ಮಾರಕವಾಗಿಸುವ ಇಚ್ಛಾಶಕ್ತಿ ಇಲ್ಲವಾಗಿದೆ. ಹೀಗಾಗಿ ಹೋರಾಟ ನಡೆಸುವುದು ಅನಿವಾರ್ಯ’ ಎಂದರು.

ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾ ಶಂಕರ್ ಪಾಟೀಲ, ‘ಕುವೆಂಪು ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಸಡ್ಡೆ ಮಾಡುತ್ತಿವೆ. ಧಾರವಾಡದಲ್ಲಿ ಬೇಂದ್ರೆ ಮನೆ ಅಭಿವೃದ್ಧಿ ಪಡಿಸಲಾಗಿದೆ. ಕುವೆಂಪು ಮನೆ ಬಗ್ಗೆ ತಾತ್ಸಾರವೇಕೆ? ಕುವೆಂಪು ಅವರನ್ನು ಜಾತಿಗೆ ಸೀಮಿತ ಮಾಡಬಾರದು’ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ, ‘ಸ್ಮಾರಕ ನಿರ್ಮಿಸುವ ಕಾರ್ಯಕ್ಕೆ ಸರ್ಕಾರದ ಅನಾಸಕ್ತಿ ಸಲ್ಲ. ಇದು ಕನ್ನಡಿಗರು ಸಹಿಸಿಕೊಳ್ಳಲಾರದ ಬೆಳವಣಿಗೆ’ ಎಂದರೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ‘ಕುವೆಂಪು ಮನೆ ಕನ್ನಡಿಗರಿಗೆ ದೇವರ ಮನೆ. ಸ್ಮಾರಕ ಮಾಡಿ ಎಂದು ಹೋರಾಟ ಮಾಡಬೇಕಿರುವುದು ವಿಪರ್ಯಾಸ’ ಎಂದರು.

ಯುವ ಕನ್ನಡಿಗರ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ನೆಲ ರಾಮ್ ಪ್ರಸಾದ್, ಕರ್ನಾಟಕ ಕ್ರಾಂತಿ ರಂಗ ಅಧ್ಯಕ್ಷ ಮಂಚೇಗೌಡ, ಕಾಂಗ್ರೆಸ್ ಮುಖಂಡ ವೆಂಕಟೇಶ್, ಕರ್ನಾಟಕ ನವ ನಿರ್ಮಾಣ್ ಪಕ್ಷದ ಪಾಟೀಲ್, ಎಎಪಿ ಜಿಲ್ಲಾಧ್ಯಕ್ಷ ರಂಗಯ್ಯ, ಬೆಳ್ಳಾಳ ಬೆಟ್ಟೇಗೌಡ, ಅದಮ್ಯ ಚಂದ್ರು, ವಿದ್ಯಾಸಾಗರ್, ಅರವಿಂದ ಶರ್ಮ ಪಾಲ್ಗೊಂಡಿದ್ದರು.

ಕಲಾಪದಲ್ಲಿ ಹರೀಶ್ಗೌಡ ಪ್ರಶ್ನೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದ ವಿಧಾನಸಭ ಕಲಾಪದಲ್ಲಿ ಶಾಸಕ ಕೆ.ಹರೀಶ್ಗೌಡ ಅವರು ಉದಯರವಿ ಸ್ಮಾರಕ ಮತ್ತು ವಸ್ತುಸಂಗ್ರಹಾಲಯವಾಗಿ ಅಭಿವೃದ್ಧಿ ಪಡಿಸಲು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ ‘ಕುವೆಂಪು ಮಗಳು ತಾರಿಣಿ ಚಿದಾನಂದ ಅವರು ಸ್ಮಾರಕವಾಗಿ ಸಂರಕ್ಷಸಿ ಸರ್ಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಜ.13ರಂದು ಉದಯರವಿಯಲ್ಲಿ ಅವರನ್ನು ಭೇಟಿಯಾಗಿ ಸಿ.ಎಂ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿರುವೆ. ಅದರಂತೆ ಕ್ರಮವಹಿಸುವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.