ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ಅನ್‌ಲೀಷ್-22’ ಸಮ್ಮೇಳನ ನಾಳೆ

Last Updated 2 ಡಿಸೆಂಬರ್ 2022, 13:55 IST
ಅಕ್ಷರ ಗಾತ್ರ

ಮೈಸೂರು: ವಿಶ್ವಸಂಸ್ಥೆಯ ಸುಸ್ಥಿರ ಬೆಳವಣಿಗೆ ಗುರಿಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶದ ‘ಅನ್‌ಲೀಷ್-22’ (ಇನ್ನೊವೇಷನ್ ಲ್ಯಾಬ್ ಫಾರ್‌ ಸಸ್ಟೆನೆಬಲ್ ಡೆವಲಪ್‌ಮೆಂಟ್)ಅಂತರರಾಷ್ಟ್ರೀಯ ಸಮ್ಮೇಳನ ಇಲ್ಲಿನ ಇನ್ಫೊಸಿಸ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ವಾರದವರೆಗೆ ಹಮ್ಮಿಕೊಂಡಿರುವ ಸಮ್ಮೇಳನದ ಉದ್ಘಾಟನಾ ಸಮಾರಂಭ ಡಿ.3ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ. ಗ್ರೀನ್‌ಲ್ಯಾಂಡ್ ಪ್ರಧಾನ ಮಂತ್ರಿ ಮ್ಯೂಟೆ ಬೌರುಪ್ ಎಜೆಡೆ ವಿಡಿಯೊ ಸಂದೇಶ ನೀಡಲಿದ್ದಾರೆ. ಐಟಿ–ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾಷಣ ಮಾಡಲಿದ್ದಾರೆ. ಅನ್‌ಲೀಷ್ ಅಧ್ಯಕ್ಷ ಪ್ರೊ.ಫ್ಲೆಮಿಂಗ್, ಇನ್ಫೊಸಿಸ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸುಮಿತ್ ವೀರಮಣಿ, ಐಟಿ–ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಅಟಲ್ ಇನ್ನೊವೇಷನ್‌ ಅಭಿಯಾನದ ನಿರ್ದೇಶಕ ಡಾ.ಚಿಂತನ್ ವೈಷ್ಣವ್, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಳ್ಳಲಿದ್ದಾರೆ.

ಪ್ರಪಂಚದ 101 ರಾಷ್ಟ್ರಗಳ 993 ತಂತ್ರಜ್ಞರು ಭಾಗವಹಿಸಲಿದ್ದಾರೆ. ಈ ಪೈಕಿ, 515 ಮಂದಿ ವಿದೇಶದವರು. 478 ಜನ ಭಾರತೀಯರು. ಇವರಲ್ಲಿ ಬೆಂಗಳೂರಿನ 90 ಮಂದಿ ಇದ್ದಾರೆ.

‘ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ, ಶುದ್ಧ ನೀರು ಹಾಗೂ ನೈರ್ಮಲ್ಯ, ಸುಲಭ ದರದ ಸ್ವಚ್ಛ ಇಂಧನ, ಹವಾಮಾನ ವೈಪರೀತ್ಯ ಇವು ಚರ್ಚೆಯಾಗಲಿರುವ ಮುಖ್ಯ ವಿಷಯಗಳಾಗಿವೆ. ಪಾಲ್ಗೊಳ್ಳುವ ಅಭ್ಯರ್ಥಿಗಳನ್ನು ಗುಂಪುಗಳನ್ನಾಗಿ ವಿಂಗಡಿಸಿ ಸುಸ್ಥಿರ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಂದಿಟ್ಟು ಸಮರ್ಥ ಪರಿಹಾರಗಳನ್ನು ಕಂಡುಹಿಡಿಯುವ ಸವಾಲು ನೀಡಲಾಗುತ್ತದೆ. ವಾರದ ಕೊನೆಯ ವೇಳೆಗೆ ಪರಿಹಾರದ ಕಾರ್ಯ ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸಬೇಕಾಗುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT