ಮೈಸೂರು: ಈಗಿನ ಎಐ (ಕೃತಕ ಬುದ್ಧಿಮತ್ತೆ) ಬಳಸಿಕೊಂಡು ಯೋಜಿತವಾಗಿ ಅಭ್ಯಾಸ ಮಾಡಿದ್ದರಿಂದ ರ್ಯಾಂಕ್ ಸುಧಾರಿಸಿಕೊಳ್ಳಲು ಸಾಧ್ಯವಾಯಿತು. ಯುಪಿಎಸ್ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರು ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಲು ಅವಕಾಶವಿದೆ.

– ಯುಪಿಎಸ್ಸಿ ಪರೀಕ್ಷೆಯಲ್ಲಿ 525ನೇ ರ್ಯಾಂಕ್ ಪಡೆದಿರುವ ಇಲ್ಲಿನ ಸಿದ್ಧಾರ್ಥನಗರದ ಕೆ.ಎಲ್. ಸೂರಜ್ ಅವರ ಅನುಭವದ ನುಡಿ ಇದು.

ಹೋದ ಬಾರಿ ಈ ಪರೀಕ್ಷೆ ಎದುರಿಸಿದ್ದ ಅವರು, 713ನೇ ರ್ಯಾಂಕ್ ಗಳಿಸಿದ್ದರು. ಈಗ, ಸ್ಥಾನವನ್ನು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸುಧಾರಿಸಿಕೊಂಡಿದ್ದಾರೆ.

29 ವರ್ಷ ವಯಸ್ಸಿನ ಅವರು ಕೊಡಗು ಜಿಲ್ಲೆ ವಿರಾಜಪೇಟೆಯವರು. ತಂದೆ ಕೆ.ಬಿ. ಲಿಂಗರಾಜ್ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಮೈಸೂರಿನಲ್ಲಿ ನೆಲೆಸಿದ್ದಾರೆ.

ಮೈಸೂರಿನ ಜೆಎಸ್ಎಸ್ ಶಾಲೆಯಲ್ಲಿ ಪ್ರಾಥಮಿಕ ಶಾಲೆ. ಹಳಿಕೆಯಲ್ಲಿ 8ರಿಂದ 10ನೇ ತರಗತಿ, ಮೈಸೂರಿನ ವಿದ್ಯಾವರ್ಧಕ ಗೋಲ್ಡನ್ ಜ್ಯುಬಿಲಿ ಕಾಲೇಜಿನಲ್ಲಿ ಪಿಯುಸಿ ಓದಿದ್ದ ಸೂರಜ್, ಎಸ್ಜೆಸಿಇ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಕರ್ನಾಟಕ ಕೇಡರ್ನಲ್ಲೇ ಐಪಿಎಸ್ ಆಗಿ ಆಯ್ಕೆಯಾಗಿದ್ದು, ಹೈದರಾಬಾದ್ನ ಎನ್ಪಿಎನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

‘ರ್ಯಾಂಕ್ ವೃದ್ಧಿಗೆಂದು ಮತ್ತೊಮ್ಮೆ ಪರೀಕ್ಷೆ ತೆಗೆದುಕೊಂಡಿದ್ದೆ. ಈಗ 200ಕ್ಕೂ ಜಾಸ್ತಿ ಸ್ಥಾನ ಸುಧಾರಿಸಿದೆ. ಐಎಎಸ್ ಸಿಕ್ಕರೆ ಖುಷಿ. ಇಲ್ಲದಿದ್ದರೆ ಕರ್ನಾಟಕ ಕೇಡರ್ನಲ್ಲೇ ಐಪಿಎಸ್ ಸಿಕ್ಕಿರುವುದರಿಂದ ಅದರಲ್ಲೇ ಮುಂದುವರಿಯುತ್ತೇನೆ. 3ನೇ ಪ್ರಯತ್ನದಲ್ಲಿ ಐಪಿಎಸ್ ಆಗಿತ್ತು. ಈಗ 4ನೇ ಪ್ರಯತ್ನದಲ್ಲಿ ಸುಧಾರಿಸಿದೆ’ ಎಂದು ಸೂರಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಪರೀಕ್ಷೆ ತೆಗೆದುಕೊಳ್ಳಲು ರಜೆ ದೊರೆಯುವ ಅವಕಾಶ ಬಳಸಿಕೊಂಡಿದ್ದೆ. ಇದು ನನಗೆ ಕೊನೆಯ ಅವಕಾಶವಾಗಿತ್ತು. 10 ತಿಂಗಳು ರಜೆ ಪಡೆದು ಓದಿದ್ದೆ. ಸ್ವಯಂ ಓದಿಕೊಳ್ಳುತ್ತಿದ್ದೆ. ಐಚ್ಛಿಕ ವಿಷಯವಾದ ಆಂಥ್ರೊಪಾಲಜಿಗೆ ಮಾತ್ರ ಟ್ಯೂಷನ್ (ದೆಹಲಿಯ ಲೆವೆಲ್ ಅಪ್ನಲ್ಲಿ ಆಲ್ಲೈನ್ನಲ್ಲಿ) ತೆಗೆದುಕೊಂಡಿದ್ದೆ’ ಎಂದು ಹೇಳಿದರು.

‘ಯುಪಿಎಸ್ಸಿ ಪರೀಕ್ಷೆಯಲ್ಲಿ ಎಲ್ಲವೂ ನಿರೀಕ್ಷಿಸಿದಂತೆ ಇರುವುದಿಲ್ಲ. ಪ್ರಯತ್ನವನ್ನು ಉತ್ತಮವಾಗಿ ಮಾಡಬೇಕು. ಜೊತೆಗೆ ಕಠಿಣ ಪರಿಶ್ರಮ ಅತ್ಯಗತ್ಯ’ ಎಂದು ಸಲಹೆ ನೀಡಿದರು.

‘ಪ್ರಸ್ತುತ ಎಐ ಬಳಕಗೆ ಬಹಳ ಅವಕಾಶವಿದೆ. ಆನ್ಲೈನ್ನಲ್ಲೇ ಟ್ಯೂಷನ್ ತೆಗೆದುಕೊಳ್ಳಬಹುದು. ಅಧ್ಯಯನ ಯೋಜನೆ (ಸ್ಟಡಿ ಪ್ಲಾನ್) ಮಾಡುವುದು, ಸಂಪನ್ಮೂಲದ ಪಟ್ಟಿ ಸಿದ್ಧಪಡಿಸುವುದು, ಅಣಕು ಪ್ರಶ್ನೆಗಳನ್ನು ಪಡೆಯುವುದು ಮೊದಲಾದವುಗಳಿಗೆ ಎಐ ಬಳಸಿದೆ. ಸಾಂಪ್ರದಾಯಿಕ ಟ್ಯೂಷನ್ಗಿಂತ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ದಿನಪತ್ರಿಕೆ ಓದಬೇಕು’ ಎನ್ನುತ್ತಾರೆ ಅವರು.

‘ನಾನು ಇಂಗ್ಲಿಷ್ನಲ್ಲಿ ಪರೀಕ್ಷೆ ಎದುರಿಸಿದೆ. ಕನ್ನಡದಲ್ಲಿ ಪರೀಕ್ಷೆ ತೆಗೆದುಕೊಂಡವರು ‘ಪ್ರಜಾವಾಣಿ’ಯನ್ನು ಕಡ್ಡಾಯವಾಗಿ ಓದುವುದನ್ನು ನೋಡಿದ್ದೇನೆ. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆದು ಅಭ್ಯಾಸ ಮಾಡುವುದು, ಪುನರ್ಮನನ ಹಾಗೂ ಅಣಕು ಪರೀಕ್ಷೆ ತೆಗೆದುಕೊಳ್ಳುವುದು ಯುಪಿಎಸ್ಸಿ ಪರೀಕ್ಷೆಯಲ್ಲಿ ಮಹತ್ವದ್ದಾಗಿದೆ. ಇದನ್ನು ಪ್ರಾಮಾಣಿಕವಾಗಿ ಪಾಲಿಸಿದರೆ ಯಶಸ್ಸು ದೊರೆಯುತ್ತದೆ’ ಎಂಬ ಅನುಭವನದ ಮಾತು ಅವರದು.
.ಯುಪಿಎಸ್ಸಿ ಸಿವಿಲ್ ಸರ್ವಿಸ್ ರಿಸಲ್ಟ್: ಚಿಕ್ಕೋಡಿಯ ಕಿರಣ ಕಮತೆ ರಾಜ್ಯಕ್ಕೆ ಪ್ರಥಮ.ಯುಪಿಎಸ್ಸಿ 2025ರ ರಿಸಲ್ಟ್: ರಾಜಸ್ಥಾನದ ಅನುಜ್ ಅಗ್ನಿಹೋತ್ರಿಗೆ ಮೊದಲ ರ್ಯಾಂಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.