ಮೈಸೂರು: ‘ಮಹಾನಗರ ಪಾಲಿಕೆಯಿಂದ ಮಹಿಳೆಯರು ಹಾಗೂ ಅಂಗವಿಕಲರಿಗೆ ಉದ್ಯೋಗ ಕಲ್ಪಿಸಿ ಆರ್ಥಿಕ ಮಟ್ಟ ಸುಧಾರಿಸುವ ಉದ್ದೇಶದಿಂದ ಮಾರ್ಚ್ 6ರಂದು ಬೆಳಿಗ್ಗೆ 9.30ಕ್ಕೆ ರಂಗಚಾರ್ಲು ಪುರಭವನದಲ್ಲಿ ‘ವಿಕಾಸಪಥದಲ್ಲಿ ಅಂಗವಿಕಲರ ಹಾಗೂ ಮಹಿಳೆಯರ ಹೆಜ್ಜೆ’ ಸೌರ ಬೆಂಬಲಿತ ಕಾರ್ಯಾಗಾರ ಹಾಗೂ ಜೀವನೋಪಯ ಪರಿಹಾರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ತಿಳಿಸಿದರು.

ಪಾಲಿಕೆ ಸಭಾಂಗಣದಲ್ಲಿ ಬುಧವಾರ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸೆಲ್ಕೋ ಫೌಂಡೇಷನ್ ಸಹಕಾರದಲ್ಲಿ ಆಯೋಜಿಸಲಾಗಿದೆ. ಸೌರಶಕ್ತಿ ಆಧಾರಿತ ವ್ಯವಸಾಯ ಯಂತ್ರ, ಪಶುಸಂಗೋಪನಾ ಯಂತ್ರ, ಕಿರು ಉದ್ಯಮ ಹಾಗೂ ಉತ್ಪನ್ನ ತಯಾರಿಕೆ ಯಂತ್ರಗಳನ್ನು ಬಳಸಿ ಸ್ವ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸಲು ಬೇಕಿರುವ ಕೌಶಲ ತರಬೇತಿ ನೀಡಲಾಗುವುದು’ ಎಂದು ತಿಳಿಸಿದರು.

‘ತರಬೇತಿ ಪಡೆದವರಿಗೆ ಸ್ವಉದ್ಯೋಗ ಕೈಗೊಳ್ಳಲು ಬೇಕಿರುವ ಆರ್ಥಿಕ ನೆರವನ್ನು ಬ್ಯಾಂಕ್ನಿಂದ ಕೊಡಿಸಲಾಗುವುದು. ಸಹಾಯಧನವೂ ಸಿಗಲಿದೆ. ನಂತರ ಅವರು ಜೀವನದಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಬಗ್ಗೆ ನಿಗಾ ವಹಿಸಿ ಇತರರಿಗೆ ತಿಳಿಸಬೇಕು. ಇದರಿಂದ ಮಹಿಳೆಯರು ಹಾಗೂ ಅಂಗವಿಕಲರು ಹೆಚ್ಚಿನ ಸಂಖ್ಯೆಯಲ್ಲಿ ಕೌಶಲ ಆಧಾರಿತ ತರಬೇತಿ ಪಡೆಯಲು ಮುಂದಾಗಲಿ’ ಎಂದರು.

ರೋಡ್ ಶೋ: ‘ಮಾರ್ಚ್ 8ರಂದು ಸ್ವಚ್ಛತಾ ರೋಡ್ ಶೋ ಅರಮನೆ ಆವರಣದಿಂದ ಓವೆಲ್ ಮೈದಾನದವರೆಗೆ ಹಮ್ಮಿಕೊಳ್ಳಲಾಗಿದೆ. ‘ಸ್ವಚ್ಛ ಮೈಸೂರು ನನ್ನಿಂದ ಪ್ರಾರಂಭ’ ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗಿದೆ. ಚಾಲನೆ ನೀಡಲು ಮುಖ್ಯಮಂತ್ರಿ ಅವರನ್ನು ಆಹ್ವಾನಿಸಲಾಗುವುದು. ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಸಂಘ–ಸಂಸ್ಥೆಗಳವರು ಭಾಗವಹಿಸಬೇಕು’ ಎಂದು ಕೋರಿದರು.

ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ‘ರೋಡ್ ಶೋನಲ್ಲಿ ವಿಟೇಂಜ್ ಕಾರ್, ಮಹಿಳಾ ಬೈಕ್ ರ್ಯಾಲಿ, ಸೈಕಲ್ ರ್ಯಾಲಿ ನಡೆಯಲಿದೆ. ಮೌಂಟೆಡ್ ಪೊಲೀಸ್ ತಂಡದಿಂದ ಕುದುರೆಗಳು, ಟಾಂಗಾಗಳು ಇನ್ನಿತರ ತಂಡಗಳು ಭಾಗವಹಿಸಲಿವೆ’ ಎಂದರು.

‘ಓವೆಲ್ ಮೈದಾನದಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ ವಸ್ತುಗಳಿಂದ ಉಪಯುಕ್ತ ವಸ್ತುಗಳ ತಯಾರಿಕೆ, ಇ–ವೇಸ್ಟ್, ಪ್ಲಾಸ್ಟಿಕ್, ಬಯೊಮೆಡಿಕಲ್ ತ್ಯಾಜ್ಯ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಆಯೋಜಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು’ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಉಪ ಆಯುಕ್ತೆ ವೀಣಾ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಕೆ.ಬಿ. ಲಿಂಗರಾಜು, ಕ್ಲೀನ್ ಫೌಂಡೇಷನ್ ಮೈಸೂರು ನಿರ್ದೇಶಕಿ ಲೀಲಾ ವೆಂಕಟೇಶ್, ಸೆಲ್ಕೋ ಫೌಂಡೇಷನ್ನ ಪ್ರಕಾಶ್ ಮೇಟಿ, ಪರಿಸರ ವಿಜ್ಞಾನ ಸಂಶೋಧಕ ಗೋಪಿಕಿರಣ್ ಎಚ್., ಜಿ.ಎಸ್.ಎಸ್. ಸಂಸ್ಥೆಯ ಶ್ರೀಹರಿ ದ್ವಾರಕನಾಥ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.