ಮೈಸೂರು: ಬೋಗಾದಿ ರಸ್ತೆಯಲ್ಲಿರುವ ಕೆ.ಹೆಮ್ಮನಹಳ್ಳಿ ‘ಚಿಕ್ಕ ಕೆರೆ’ಯು ಕಟ್ಟಡ ತ್ಯಾಜ್ಯ ಸುರಿವ ತಾಣವಾಗಿ ಬದಲಾಗಿದೆ. ಕೆರೆಗೆ ಹೊಂದಿಕೊಂಡಂತೆ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ಮನೆ ಅಡಿಪಾಯದ ಹಾಕಲು ತೆಗೆದ ಮಣ್ಣು ಇಲ್ಲಿ ಬಂದು ಬೀಳುತ್ತಿದೆ!

ಕೆರೆಯ ಒಡಲು 9 ಎಕರೆ ವಿಸ್ತಾರವಾಗಿದ್ದು, ಏರಿ ಮೇಲೆಯೇ ಬೋಗಾದಿ– ಗದ್ದಿಗೆ ರಸ್ತೆಯಿದೆ. 2008ರಲ್ಲಿ 1 ಎಕರೆ ಭೂಮಿಯನ್ನು ಉಪ್ಪಾರ ಸಮುದಾಯದ ಸ್ಮಶಾನಕ್ಕೆ ನೀಡಲಾಗಿದೆ.

ಕೆರೆಯ ಏರಿಯಲ್ಲಿ ರಸ್ತೆ ಕಾಮಗಾರಿ ಹಾಗೂ ಪೈಪ್ಲೇನ್ ಕೆಲಸಗಳೂ ನಡೆಯುತ್ತಿವೆ. ವಿಜಯನಗರ 4ನೇ ಹಂತ, ಬೋಗಾದಿ ಕಡೆ ಮನೆ ನವೀಕರಿಸುವವರು ಕಟ್ಟಡ ತ್ಯಾಜ್ಯ ಸುರಿಯಲು ಈ ಕೆರೆಯನ್ನೇ ಆಯ್ದುಕೊಂಡಿದ್ದಾರೆ. ಲಾರಿಯಲ್ಲಿ ಸುಲಭವಾಗಿ ತಂದು ಸುರಿದರೂ ಇಲ್ಲಿ ಕೇಳುವವರು ಯಾರೂ ಇಲ್ಲ.

‘ಚಿಕ್ಕಕೆರೆ’ಯ ಉತ್ತರ ಹಾಗೂ ಪೂರ್ವ ಭಾಗದಲ್ಲಿ ಕೋಳಿ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ ಹಾಕಲಾಗುತ್ತಿದ್ದು, ಗ್ರಾಮದ ಕಸ, ಪ್ಲಾಸ್ಟಿಕ್ ತ್ಯಾಜ್ಯ ಸೇರುತ್ತಿದೆ. ಕೋಳಿಫಾರಂಗಳೂ ಕೆರೆಯ ಒಡಲಿನ ಹತ್ತಿರದಲ್ಲೇ ಇವೆ.

ಪ್ರವಾಹದ ನೀರು: ಮಾದಗಳ್ಳಿ ದೊಡ್ಡಕೆರೆ ಹಾಗೂ ಹುಯಿಲಾಳು ಕೆರೆ ತುಂಬಿದಾಗ ಕೋಡಿ ನೀರು ಈ ಚಿಕ್ಕಕೆರೆಗೆ ಹರಿಯುತ್ತದೆ. ‘ಪೂರ್ಣಯ್ಯ ನಾಲೆ’ ರಾಜಕಾಲುವೆ ಮೇಲೆ ರಸ್ತೆ ನಿರ್ಮಾಣ ಮಾಡಿರುವುದರಿಂದ ಪ್ರವಾಹದ ನೀರೆಲ್ಲ ಈ ಕೆರೆ ಸೇರಿ ತುಂಬುತ್ತಿದೆ.

ಕೆರೆ ಏರಿ ಪಕ್ಕದಲ್ಲಿಯೇ ಹೊಸ ಬಡಾವಣೆ ನಿರ್ಮಾಣವಾಗಿದೆ. ನೈಸರ್ಗಿಕವಾಗಿದ್ದ ಹಸಿರು ವಲಯ ಇಲ್ಲವಾಗಿದೆ. ಕೆರೆಯ ಸುತ್ತಲಿನ ಅರ್ಧ ಭಾಗ ರಸ್ತೆಗಳೇ ಇರುವುದರಿಂದ ಹೆಚ್ಚು ಜೀವ ವೈವಿಧ್ಯ ಕಾಣಲಾಗದು. ನೀರು ಹಕ್ಕಿಗಳು ಮಾತ್ರವೇ ಇವೆ. ಕೆರೆ ತುಂಬಿದರೆ ಮೂಗಯ್ಯನಹುಂಡಿ ಕೆರೆಗೆ ನೀರು ಹರಿಯುತ್ತದೆ.

ಕೆರೆ ಜಾಲ ಉಳಿಸುವುದು ಅಗತ್ಯ: ‘ಕೆರೆಗಳ ಜಾಲದಲ್ಲಿ ದೊಡ್ಡ ಕೆರೆಗಳಷ್ಟೇ ಚಿಕ್ಕ ಕೆರೆಗಳಿಗೂ ಮಹತ್ವವಿದೆ. ಅಂತರ್ಜಲ ಹೆಚ್ಚಿಸಲು ಅಗತ್ಯವಿದ್ದ ಕಡೆ ಪುಟ್ಟ ಕೆರೆಗಳನ್ನು ಹಿರಿಯರು ನಿರ್ಮಿಸಿದ್ದಾರೆ. ಹಳ್ಳಿಗಳಲ್ಲಿ ಬಾವಿಗಳು, ಕಟ್ಟೆಗಳು ನೀರಿನ ಮೂಲವಾಗಿದ್ದವು. ದೊಡ್ಡ ನದಿ ಪಾತ್ರವಿಲ್ಲದ ಮೈಸೂರು ತಾಲ್ಲೂಕಿನಲ್ಲಿ ಕಟ್ಟಿದ ಪ್ರತಿ ಕೆರೆಗಳೂ ಜನ– ಜಾನುವಾರಿನ ಜೀವನಾಡಿಯಾಗಿದ್ದವು’ ಎಂದು ಪರಿಸರ ತಜ್ಞ ಯು.ಎನ್.ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆ ಜಾಲಗಳ ರಾಜ ಕಾಲುವೆಗಳನ್ನು ಉಳಿಸಿಕೊಳ್ಳಬೇಕು. ಬಡಾವಣೆಗಳು ಬೆಳೆದಂತೆ ರಾಜಕಾಲುವೆಗಳನ್ನೇ ಚರಂಡಿ ಕಾಲುವೆಯನ್ನಾಗಿ ಮಾಡಿಕೊಂಡರೆ ಕೆರೆಯ ಪಾತ್ರವೇ ಕಲುಷಿತವಾಗುತ್ತದೆ. ಕುಕ್ಕರಹಳ್ಳಿ, ಲಿಂಗಾಂಬುಧಿ, ಹೆಬ್ಬಾಳ ಕೆರೆಗಳಂತೆ ಹುಯಿಲಾಳು, ಮಾದಗಳ್ಳಿ, ಹೆಮ್ಮನಹಳ್ಳಿ ಕೆರೆಗಳು ಚರಂಡಿ ನೀರು ಸೇರದಂತೆ ಈಗಲೇ ಎಚ್ಚರ ವಹಿಸಬೇಕಿದೆ. ಕೆರೆ– ಕಾಲುವೆ ಒತ್ತುವರಿ ತೆರವುಗೊಳಿಸಿದರೆ ಮಾತ್ರ ಜಾಲವನ್ನು ಉಳಿಸಿಕೊಳ್ಳಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.