ಹಂಪಾಪುರ (ಮೈಸೂರು ಜಿಲ್ಲೆ): ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಇಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿದೆ.

ಹಂಪಾಪುರದ ಸಿದ್ದೇಗೌಡ ಮತ್ತು ಮೈಸೂರು ತಾಲ್ಲೂಕಿನ ಮದ್ದೂರು ಗ್ರಾಮದ ಮರಿಲಿಂಗ ಗಾಯಗೊಂಡವರು.

ಅವರು ರಸ್ತೆಯಲ್ಲಿ ವಾಯುವಿಹಾರದಲ್ಲಿದ್ದ ಸಂದರ್ಭ ಜಮೀನನ ಕಡೆಯಿಂದ ಬಂದ ಕಾಡಾನೆ ದಾಳಿ ನಡೆಸಿದೆ. ಸಿದ್ದೇಗೌಡ ಮತ್ತು ಮರಿಲಿಂಗ ಭಯಭೀತರಾಗಿ ಓಡಲು ಯತ್ನಿಸಿ, ಸಾಧ್ಯವಾಗದೇ ಕೆಳಗೆ ಬಿದ್ದಿದ್ದಾರೆ. ನಂತರ ಆನೆ ಸೊಂಡಲಿನಿಂದ ಅವರನ್ನು ತಳ್ಳಿ ಗಾಯಗೊಳಿಸಿದೆ ಎನ್ನಲಾಗಿದೆ. ಅವರ ಚೀರಾಟದ ಕಾರಣದಿಂದ ಆನೆ ಓಡಿದೆ ಎಂದು ತಿಳಿದುಬಂದಿದೆ.

ಗಾಯಗೊಂಡವರನ್ನು ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಪ್ರಾದೇಶಿಕ ಅರಣ್ಯಾಧಿಕಾರಿ ರವಿಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.