ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: 14 ತಳಿಯ 40 ಶ್ವಾನ ಪ್ರದರ್ಶನ

ವಿಶ್ವ ಶ್ವಾನ ದಿನಾಚರಣೆ; ಲಿಯೊ ಶ್ವಾನಕ್ಕೆ ಪ್ರಥಮ ಬಹುಮಾನ
Published 26 ಆಗಸ್ಟ್ 2023, 14:19 IST
Last Updated 26 ಆಗಸ್ಟ್ 2023, 14:19 IST
ಅಕ್ಷರ ಗಾತ್ರ

ಹುಣಸೂರು: ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ರೋಟರಿ ಹುಣಸೂರು ವಿಶ್ವ ಶ್ವಾನ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನದಲ್ಲಿ 14 ತಳಿಯ 40 ಶ್ವಾನಗಳು ಪಾಲ್ಗೊಂಡು ಗಮನ ಸೆಳೆದವು.

ಗ್ರೇಡ್ ಡೆನ್ ತಳಿಯ ‘ಲಿಯೊ’ ಶ್ವಾನಕ್ಕೆ ಪ್ರಥಮ ಬಹುಮಾನ ದೊರೆಯಿತು. ಜರ್ಮನ್ ಶಫರ್ಡ್ ತಳಿಗೆ ದ್ವಿತೀಯ ಬಹುಮಾನ, ಗ್ರೇ ಹೆಸರಿನ ಗ್ರೇಡ್ ಡೆನ್ ತಳಿಗೆ ತೃತೀಯ ಬಹುಮಾನ ಲಭಿಸಿತು. ಈ ಶ್ವಾನಗಳ ಮಾಲೀಕರಿಗೆ ರೋಟರಿ ಹುಣಸೂರು ಅಧ್ಯಕ್ಷ ಚೆನ್ನಕೇಶವ್ ಬಹುಮಾನ ವಿತರಿಸಿದರು. ಭಾಗವಹಿಸಿದ್ದ ಇತರೆ ಶ್ವಾನಗಳ ಮಾಲೀಕರಿಗೆ ಪ್ರಶಂಸನಾ ಪತ್ರ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಶುವೈದ್ಯಾಧಿಕಾರಿ ಚೆನ್ನಬಸಪ್ಪ, ‘ಮಾನವನ ನಂಬಿಕೆಗೆ ಅರ್ಹವಾದ ಹಾಗೂ ನಿಷ್ಠಾವಂತ ಸಾಕುಪ್ರಾಣಿಗಳಲ್ಲಿ ಶ್ವಾನ ಅಗ್ರಸ್ಥಾನ ಪಡೆದಿದೆ. ವಿಶ್ವ ಶ್ವಾನ ದಿನಾಚರಣೆ ಮೂಲಕ ಬೀದಿನಾಯಿಗಳ ಸಂರಕ್ಷಣೆ ಮತ್ತು ಅಪಘಾತಗಳಲ್ಲಿ ಗಾಯಗೊಂಡ ನಾಯಿಗಳ ರಕ್ಷಣೆ ಜಾಗೃತಿ ಮೂಡಿಸಬೇಕಿದೆ. ನಾಯಿಗಳ ಮೇಲೆ ನಡೆಯುವ ದೌರ್ಜನ್ಯವನ್ನು ನಿಯಂತ್ರಿಸುವ ತುರ್ತು ಇದೆ. ಶ್ವಾನ ಪ್ರಿಯರು ಬೀದಿ ನಾಯಿಗಳನ್ನು ರಕ್ಷಿಸುವ ದಿಕ್ಕಿನಲ್ಲಿ ಹಲವು ಸ್ವಯಂ ಸೇವಾ ಸಂಘದೊಂದಿಗೆ ಕೈ ಜೋಡಿಸಿ ಆಹಾರ ತಿಂಡಿ ತಿನಿಸು ನೀಡುವ ಕಾಯಕದಲ್ಲಿ ತೊಡಗಿರುವುದು ಶ್ಲಾಘನೀಯ’ ಎಂದರು.

‘2004ರಲ್ಲಿ ಪ್ರಾಣಿ ಕಲ್ಯಾಣ ಕಾರ್ಯಕರ್ತೆ ಮತ್ತು ಲೇಖಕಿ ಕೋಲಿನ್ ಪೈಜ್ ಅವರು ಅಂತರರಾಷ್ಟ್ರೀಯ ಶ್ವಾನ ದಿನವನ್ನಾಗಿ ಆಚರಿಸಿದ್ದರು. ಕೋಲಿನ್ ಪೈಜ್ ಶೆಲ್ಟ್ ಹೆಸರಿನ ಶ್ವಾನವನ್ನು ದತ್ತು ಪಡೆದು ಶ್ವಾನ ದಿನಕ್ಕೆ ಚಾಲನೆ ನೀಡಿದ್ದರಿಂದ ಆ.26 ವಿಶ್ವದಾದ್ಯಂತ ಶ್ವಾನ ದಿನವನ್ನು ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ವಾನ ಪ್ರಿಯ ಬಸವರಾಜ್, ಟಿಬೆಟ್ ಕ್ಯಾಂಪ್ ನಿವಾಸಿ ದೋರ್ಜೆ, ಕಾರ್ಯದರ್ಶಿ ಪ್ರಸನ್ನ, ಸದಸ್ಯರಾದ ರಾಜಶೇಖರ್, ಆನಂದ್, ಗಿರೀಶ್, ಶಾಮ್, ಸತೀಶ್ ಇದ್ದರು.

ಜರ್ಮನ್ ಶಫರ್ಡ್ ತಳಿಗೆ ದ್ವಿತೀಯ ಬಹುಮಾನ ಗ್ರೇ ಹೆಸರಿನ ಗ್ರೇಡ್ ಡೆನ್ ತಳಿಗೆ ತೃತೀಯ ಸ್ಥಾನ ಶ್ವಾನಗಳ ಮಾಲೀಕರಿಗೆ ಪ್ರಶಂಸನಾ ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT