ಮೈಸೂರು: ‘ಇಲ್ಲಿನ ಮಂಡಕಳ್ಳಿಯಲ್ಲಿರುವ ವಿಮಾನನಿಲ್ದಾಣದ ರನ್ವೇ ವಿಸ್ತರಣೆಗೆ ಎದುರಾಗಿರುವ ತಾಂತ್ರಿಕ ತೊಡಕುಗಳನ್ನು ಕೂಡಲೇ ಬಗೆಹರಿಸಬೇಕು. ಸಂಬಂಧಿಸಿದ ಇಲಾಖೆಗಳವರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೂಚಿಸಿದರು.

ವಿಮಾನನಿಲ್ದಾಣದ ಸಮುದಾಯ ಭವನದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೆಐಎಡಿಬಿಯವರು ಜಾಗದ ಸಮಸ್ಯೆ ಪರಿಹರಿಸದಿದ್ದರೆ ವಿಮಾನನಿಲ್ದಾಣ ವಿಸ್ತರಣಾ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿರುವ ರಚನೆಗಳು ಹಾಗೂ ಮರಗಳಿಗೆ ಪರಿಹಾರದ ಮೌಲ್ಯಮಾಪನ ಮತ್ತು ವಿತರಣೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಇದು ಪೂರ್ಣಗೊಂಡರೆ, ಮುಂದಿನ ಅಭಿವೃದ್ಧಿ ಕಾರ್ಯಕ್ಕಾಗಿ ಭೂಮಿಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರ (ಎಎಐ)ಕ್ಕೆ ಸಾಧ್ಯವಾದಷ್ಟು ಬೇಗ ಹಸ್ತಾಂತರಿಸಬಹುದಾಗಿದೆ’ ಎಂದರು.

₹ 612 ಕೋಟಿ...

‘ರನ್ವೇ ವಿಸ್ತರಣೆ ಪ್ರಕ್ರಿಯೆಗೆಂದು ಕೈಗೊಳ್ಳಬೇಕಾದ ಕಾಮಗಾರಿಯ ಬಗ್ಗೆ ಎನ್ಎಚ್ಎಐನಿಂದ ಕರಡು ಡಿಪಿಆರ್ 2025ರ ಡಿ. 15ರಂದು ಸಲ್ಲಿಕೆಯಾಗಿದೆ. 520 ಮೀಟರ್ ಸುರಂಗ (ಭೂಗತ ಬಾಕ್ಸ್ ಸುರಂಗ), ಮೂರು ಕಾಲುವೆ ಬಾಕ್ಸ್ ಸುರಂಗಗಳು ಮತ್ತು ಕೆಪಿಟಿಸಿಎಲ್ ಯುಟಿಲಿಟಿ ಡಕ್ಟ್ ಸೇರಿದಂತೆ 3.5 ಕಿ.ಮೀ. ಮಾರ್ಗ ತಿರುವನ್ನು ₹ 612 ಕೋಟಿ (2018ರ ಅಂದಾಜಿಗಿಂತ ₹ 102 ಕೋಟಿ ಹೆಚ್ಚಾಗಿದೆ) ಪರಿಷ್ಕೃತ ವೆಚ್ಚದಲ್ಲಿ ಪ್ರಸ್ತಾಪಿಸಲಾಗಿದೆ. 2023ರ ಹಿಂದಿನ ಭೂಸ್ವಾಧೀನ ಸೇರಿದಂತೆ ಹೆಚ್ಚುವರಿ ವೆಚ್ಚವನ್ನು ಎನ್ಎಚ್ಎಐ ಭರಿಸಬೇಕೆಂದು ಪ್ರಾಧಿಕಾರ ಕೋರಿದೆ. ಇದನ್ನು ನವದೆಹಲಿಯ ಎನ್ಎಚ್ಎಐ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

‘ಸುರಕ್ಷತೆ ಕಾರಣದಿಂದ 12 ಸುರಂಗ ಪ್ರವೇಶ/ನಿರ್ಗಮನ ಬಿಂದುಗಳನ್ನು ನಿರ್ವಹಿಸಲು ತಜ್ಞರ ಸಮಿತಿ ರಚನೆಗೆ ಶಿಫಾರಸು ಮಾಡಲಾಗಿದೆ. ಏ.7ರಂದು ರಾಜ್ಯ ಪೊಲೀಸ್ ಒಪ್ಪಿಗೆಯನ್ನೂ ಕೋರಲಾಗಿದೆ. ಭೂಸ್ವಾಧೀನ, ರಚನೆಗಳು ಮತ್ತು ಮರಗಳಿಗೆ ಪರಿಹಾರ, ವಿದ್ಯುತ್ ಮಾರ್ಗಗಳ ತಿರುವು, ಹೆದ್ದಾರಿ ಮತ್ತು ಕಾಲುವೆ ಸ್ಥಳಾಂತರ ಮೊದಲಾದ ಕೆಲಸ ತ್ವರಿತಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಹೆಚ್ಚಿನ ನಗರಗಳಿಗೆ...

‘ರನ್ವೇ ವಿಸ್ತರಣೆಗೊಂಡರೆ ಇಲ್ಲಿಗೆ ಹೆಚ್ಚಿನ ವಿಮಾನಗಳ ಕಾರ್ಯಾಚರಣೆ ಕಲ್ಪಿಸಬಹುದಾಗಿದೆ. ಪ್ರಮುಖ ನಗರಗಳಿಗೆ ಸಂಪರ್ಕ ದೊರೆಯಲಿದೆ’ ಎಂದು ಹೇಳಿದರು.

‘ಈಗಿನ ರನ್ವೇ 1,740 ಮೀಟರ್ x 30 ಮೀಟರ್ ಅಳತೆ ಹೊಂದಿದ್ದು, ಎಟಿಆರ್–72 ವಿಮಾನಗಳಿಗೆ ಸೂಕ್ತವಾಗಿದೆ. ಇದನ್ನು 2,300 ಮೀಟರ್ x 45 ಮೀಟರ್ಗೆ ವಿಸ್ತರಿಸಿದರೆ ದೊಡ್ಡ ಏರ್ಬಸ್ ಎ-320 ಮತ್ತು ಬೋಯಿಂಗ್ 737 ಮಾದರಿಯ ವಿಮಾನಗಳ ಕಾರ್ಯಾಚರಣೆಗಳಿಗೆ ಅವಕಾಶ ದೊರೆಯುತ್ತದೆ. ಇದಕ್ಕೆ 240 ಎಕರೆ ಭೂಮಿ ಬೇಕಾಗುತ್ತದೆ. ಅದರಲ್ಲಿ 206 ಎಕರೆಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದೆ ಮತ್ತು ಭೂಮಾಲೀಕರಿಗೆ ಪರಿಹಾರವನ್ನು ಸಂಪೂರ್ಣವಾಗಿ ವಿತರಿಸಲಾಗಿದೆ. ಉಳಿದ 34 ಎಕರೆಗಳು ಸರ್ಕಾರಿ ಭೂಮಿಯಾಗಿದೆ. ನಿಲ್ದಾಣದ ಉತ್ತರ ಭಾಗದಲ್ಲಿ 7 ಎಕರೆಯಲ್ಲಿ ರಚಿಸಲಾದ ಕಂದಾಯ ಬಡಾವಣೆಗೆ ಸೇರಿದ ಜಾಗದ ಸಮಸ್ಯೆ ನಿವಾರಿಸಬೇಕಿ’ ಎಂದು ವಿಮಾನನಿಲ್ದಾಣದ ನಿರ್ದೇಶಕಿ ಪಿ.ವಿ. ಉಷಾಕುಮಾರಿ ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ಡಿಸಿಪಿ ಹರ್ಷ ಪ್ರಿಯಂವದ, ವಿಮಾನನಿಲ್ದಾಣ ಸಲಹಾ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.