ಮೈಸೂರು: ‘ತಂಬಾಕು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು, ಹರಾಜು ಪ್ರಕ್ರಿಯೆಯ ವಿಧಾನದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಪ್ರಸಕ್ತ ಋತುವಿನ ಸಮಗ್ರ ಅವಲೋಕನ ನಡೆಸಬೇಕು. ರೈತರು ಎದುರಿಸುತ್ತಿರುವ ಸವಾಲುಗಳಿಗೆ ದೀರ್ಘಾವಧಿಯ ರಚನಾತ್ಮಕ ಪರಿಹಾರ ಒದಗಿಸಲು ತುರ್ತಾಗಿ ಸ್ಪಂದಿಸಬೇಕು. ಏಕಸ್ವಾಮ್ಯ ತಪ್ಪಿಸಬೇಕು’ ಎಂಬಿತ್ಯಾದಿ ವಿಷಯಗಳ ಕುರಿತು ಸಚಿವರ ಗಮನಸೆಳೆಯಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಹರಾಜು ಪ್ರಕ್ರಿಯೆಯಲ್ಲಿ ವಿದೇಶಿ ಖರೀದಿದಾರರ ವ್ಯಾಪಕ ಭಾಗವಹಿಸುವಿಕೆ ಅನುಮತಿಸುವ ಪ್ರಾಮುಖ್ಯತೆ ಬಗ್ಗೆ ಗಮನಸೆಳೆಯಲಾಗಿದೆ. ಹೊಸ ಯೋಜನೆಗಳಿಗೆ ಚಿಂತನೆ ಅಗತ್ಯವಿದೆ. ರೈತರಿಗೆ ಪಾರದರ್ಶಕತೆ, ನ್ಯಾಯಯುತ ಬೆಲೆ ಆವಿಷ್ಕಾರ ಮತ್ತು ಸಂಗ್ರಹಣೆಯಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಹರಾಜು ಕಾರ್ಯವಿಧಾನಗಳಲ್ಲಿ ಸುಧಾರಣೆಗಳಿಗೆ ಆದ್ಯತೆ ನೀಡಬೇಕು ಎಂದು ಮನವರಿಕೆ ಮಾಡಿಕೊಡಲಾಗಿದೆ’ ಎಂದು ವಿವರಿಸಿದ್ದಾರೆ.

‘ಅಕ್ರಮ ಸಿಗರೇಟ್ ಹೆಚ್ಚಳ ಆಗುತ್ತಿರುವುದು ಕಳವಳಕಾರಿ. ರೈತರು ಮತ್ತು ಕಾನೂನುಬದ್ಧ ಉದ್ಯಮದ ಪಾಲುದಾರರನ್ನು ರಕ್ಷಿಸಲು ಕಠಿಣ ನಿಯಂತ್ರಣ ಹಾಗೂ ಸುಧಾರಣಾ ಯೋಜನೆಗಳನ್ನು ಜಾರಿಗೊಳಿಸುವಿಕೆ ಅನಿವಾರ್ಯತೆ ಬಗ್ಗೆ ಮಾಹಿತಿ ನೀಡಲಾಗಿದೆ. ರೈತರ ಜೀವನೋಪಾಯ ರಕ್ಷಿಸುವುದು, ಸ್ಥಿರ ಆದಾಯವನ್ನು ಖಚಿತಪಡಿಸಬೇಕು ಎಂದು ಕೋರಲಾಗಿದೆ’ ಎಂದು ತಿಳಿಸಿದ್ದಾರೆ.

‘2015ರಲ್ಲಿ ಸಾಲ ಮನ್ನಾ ಖಾತರಿಪಡಿಸಿದ ಬಗ್ಗೆ, ಕೊಡಗು ಕಾಫಿ ಸಹಕಾರಿ ಸಂಘ ಮತ್ತು ಕಾಫಿ ಮಂಡಳಿಯ ನಡುವೆ ದೀರ್ಘಕಾಲದಿಂದ ಬಾಕಿ ಇರುವ ಸಮಸ್ಯೆಯನ್ನು ಚರ್ಚಿಸಲಾಗಿದೆ. ನ್ಯಾಯಾಲಯದ ನಿರ್ದೇಶನ ಇರುವುದರಿಂದ ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಇದರಿಂದ ಸಣ್ಣ ಬೆಳೆಗಾರರು ‘ಕೊಡಗು ಕಾಫಿ ಬ್ರ್ಯಾಂಡ್’ ಅನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗಲು ಅನುಕೂಲ ಆಗುತ್ತದೆ. ಈ ಸಹಕಾರಿ ಸಂಸ್ಥೆಯನ್ನು ಬೆಂಬಲಿಸಲು ಸಕಾಲಿಕ ಕ್ರಮ ಕೈಗೊಳ್ಳಬೇಕು ಎಂದೂ ಕೋರಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.