ಮೈಸೂರು: ‘ಅತಿಯಾದರೆ ಅಮೃತವೂ ವಿಷವಾಗುತ್ತದೆ. ಹಾಗೆಯೇ ಮಕ್ಕಳು ಮೊಬೈಲ್ ಫೋನ್ ಅತಿಯಾಗಿ ಬಳಸಿದರೆ, ಅದು ಗೀಳಾಗಿ ಬದುಕು ಹಾಳಾಗುತ್ತದೆ. ಹೀಗಾಗಿ, ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಲೇಖಕಿ ಯಶೋಧಾ ರಾಮಕೃಷ್ಣ ಸಲಹೆ ನೀಡಿದರು.

ಇಲ್ಲಿನ ವಿಜಯನಗರ 3ನೇ ಹಂತದಲ್ಲಿರುವ ವಿ.ಕೆ. ಪಬ್ಲಿಕ್ ಸ್ಕೂಲ್ನಲ್ಲಿ ಅದಮ್ಯ ರಂಗಶಾಲೆಯಿಂದ ಶನಿವಾರ ನಡೆದ ‘ವಿಶ್ವ ಪುಸ್ತಕ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಾಹಿತ್ಯ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.

‘ಮೊಬೈಲ್ ಫೋನ್ನಿಂದ ಮಕ್ಕಳು ದೂರವಿದ್ದಷ್ಟೂ ಒಳ್ಳೆಯದು. ಇದರಿಂದ ಅಪಾರ ಸಮಯ ಉಳಿತಾಯ ಆಗುತ್ತದೆ. ಆ ಸಮಯವನ್ನು ಪುಸ್ತಕ ಓದಲು, ಆಡಲು, ಸ್ನೇಹಿತರೊಂದಿಗೆ ಬೆರೆಯಲು ಬಳಸಬಹುದು’ ಎಂದು ತಿಳಿಸಿದರು.

‘ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೂ ಕನ್ನಡ ಮರೆಯಬಾರದು. ಗ್ರಾಮೀಣ ಕ್ರೀಡೆಗಳ ಸೊಗಡು ಸವಿಯಬೇಕು. ವಿದ್ಯೆಯ ಜೊತೆ ವಿನಯ ಮತ್ತು ವಿವೇಕ ಪಡೆದು ಸಮಾಜಕ್ಕೆ ಮಾದರಿ ಆಗಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ, ‘ಕನ್ನಡದಲ್ಲಿ ಮಕ್ಕಳಿಗಾಗಿ ಕವಿಗಳು ಕತೆ, ಕಾವ್ಯ, ನಾಟಕ, ಜೀವನಚರಿತ್ರೆಗಳು ಸಾಕಷ್ಟು ರಚನೆಯಾಗಿವೆ. ಅಂಥ ಪುಸ್ತಕಗಳನ್ನು ಓದಿದರೆ ಜ್ಞಾನ, ಅನುಭವ, ರಂಜನೆ ಲಭಿಸುತ್ತದೆ’ ಎಂದು ಹೇಳಿದರು.

ವಿ.ಕೆ. ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಮೆಹರಿನ್ ತಾಜ್, ನಿವೃತ್ತ ಎಂಜಿನಿಯರ್ ರಾಮಕೃಷ್ಣ, ಕವಿ ಜಿ. ರವೀಂದ್ರ ಕುಮಾರ್, ರಂಗಕರ್ಮಿಗಳಾದ ವಿನೋದ್ ಮೈಸೂರು ಮತ್ತು ಲೋಕನಾಥ್ ಸೋಗುಂ ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.