ಮೈಸೂರು: ‘ಸಿದ್ದರಾಮಯ್ಯ ಅವರೇ ಐದು ವರ್ಷವೂ ಮುಖ್ಯಮಂತ್ರಿ ಆಗಿರುತ್ತಾರೆ’ ಎಂದು ಪುತ್ರ, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಪುನರುಚ್ಚರಿಸಿದರು.

ಇಲ್ಲಿ ಬುಧವಾರ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಚಾರವನ್ನು ಖುದ್ದು ಮುಖ್ಯಮಂತ್ರಿಯವರೇ ವಿಧಾನಮಂಡಲ ಅಧಿವೇಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರೇ ಹೇಳಿರುವುದರಿಂದ ಬೇರೆ ಚರ್ಚೆಯೇ ಇಲ್ಲ. ಎರಡೂವರೆ ವರ್ಷದಿಂದಲೂ ನಾನು ಇದನ್ನೇ ಹೇಳುತ್ತಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ. ತಂದೆಯ ಮಾತೇ ನನ್ನದೂ’ ಎಂದು ಹೇಳಿದರು.

‘ಸಚಿವ ಸಂಪುಟ ಪುನರ್ರಚನೆ ಮಾಡುವಂತೆ ಕೇಳಲೆಂದು ಶಾಸಕರು ನವದೆಹಲಿಗೆ ಹೋಗಿದ್ದಾರೆ. ಶಾಸಕರು ಅಲ್ಲಿಗೆ ಹೋಗಿರುವುದಕ್ಕೂ ಹಾಗೂ ಉಪ ಚುನಾವಣೆ ಫಲಿತಾಂಶಕ್ಕೂ–ಸಿಎಂ ಸ್ಥಾನಕ್ಕೂ ಸಂಬಂಧವಿಲ್ಲ. ನಮ್ಮ ಸರ್ಕಾರ ಭದ್ರವಾಗಿದೆ. ಸಿಎಂ ಸ್ಥಾನವೂ ಭದ್ರವಾಗಿದೆ. ನಾನು ಎಷ್ಟು ಸಲ ಇದನ್ನು ಸ್ಪಷ್ಟಪಡಿಸಲಿ ಹೇಳಿ?’ ಎಂದು ಕೇಳಿದರು.

‘ಸರ್ಕಾರಕ್ಕೆ ಮೂರು ವರ್ಷ ಸಮೀಪಿಸುತ್ತಿದೆ. ಹೀಗಾಗಿ, ಸಂಪುಟ ಪುನರ್ರಚನೆಗೆ ಕೇಳುತ್ತಿದ್ದಾರೆ. ಇದನ್ನು ಮಾಡಬೇಕಾಗಿದ್ದು, ಯಾವಾಗ ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ತಂದೆ ಸಿಎಂ ಆಗಿರುವವರೆಗೂ ನಾನು ಆ ಸ್ಥಾನ ಕೇಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮುಖ್ಯಮಂತ್ರಿಯು ಪುತ್ರನನ್ನು ಹಣ ವಸೂಲಿಗೆ ಇಟ್ಟುಕೊಂಡಿದ್ದಾರೆ’ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಮೇಲಿನ ಆರೋಪಕ್ಕೆ ಒಂದೇ ಒಂದು ಸಾಕ್ಷಿ ಕೊಡಿ. ವರ್ಗಾವಣೆ ದಂಧೆ ಎನ್ನುತ್ತಾರೆ, ಅದಕ್ಕೆ ಸಾಕ್ಷಿ ಇದೆಯೇ? ಸಾಕ್ಷಿಯೇ ಇಲ್ಲದೆ ಎರಡೂವರೆ ವರ್ಷಗಳಿಂದ ನನ್ನ ವಿರುದ್ಧ ಕೇವಲ ಆರೋಪ ಮಾಡುತ್ತಿದ್ದಾರೆ. ಸಾಕ್ಷಿ ಕೊಟ್ಟು ಆರೋಪಿಸಿದರೆ ಬೆಲೆ’ ಎಂದರು.

‘ಕುಮಾರಸ್ವಾಮಿ ವಸೂಲಿ ಮಾಡುತ್ತಿದ್ದಾರೆ ಎಂಬ ನಾನೂ ಹೇಳಬಹುದಲ್ಲವೇ? ಸಾಕ್ಷಿಯೇ ಇಲ್ಲದೆ ಆರೋಪಿಸುವುದು ಸುಲಭ. ನಾನು ಆ ರೀತಿ ಮಾಡುವುದಿಲ್ಲ. ನಮ್ಮ ಸರ್ಕಾರ ಬಂದಾಗಿನಿಂದ ವಿರೋಧ ಪಕ್ಷದವರ ಕಣ್ಣಿಗೆ ನಾನೇ ಟಾರ್ಗೆಟ್. ಜನರಲ್ಲಿ ನನ್ನ ಮೇಲೆ ತಪ್ಪು ಅಭಿಪ್ರಾಯ ಮೂಡಿಸಲು ಈ ರೀತಿ ಸುಳ್ಳು ಹೇಳುತ್ತಿದ್ದಾರೆ’ ಎಂದು ಹೇಳಿದರು.

‘ತಂದೆ ನನ್ನನ್ನು ವಸೂಲಿಗಾಗಿ ನೇಮಿಸಿಕೊಂಡಿಲ್ಲ. ನಾನು ಯಾವತ್ತೂ ವಸೂಲಿ ಮಾಡಿಲ್ಲ. ತಂದೆಯ ಪರವಾಗಿ ವರುಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ನಮ್ಮದು ಕುಟುಂಬ ರಾಜಕಾರಣ ಅಲ್ಲ’ ಎಂದು ಪ್ರತಿಪಾದಿಸಿದ ಅವರು, ‘ತಂದೆಯ ರಾಜಕೀಯ ಜೀವನದ ಮುಂದುವರಿಕೆಯ ಭಾಗವಾಗಿ ನಾನು ಎಂಎಲ್ಸಿ ಆಗಿದ್ದೇನೆ. ಕ್ಷೇತ್ರದ ಜನರು ಹಾಗೂ ತಂದೆಯ ಅಭಿಮಾನಿಗಳ ರಕ್ಷಣೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ತಂದೆ ನನ್ನನ್ನೇನಾದರೂ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದಾರಾ? ಮಕ್ಕಳನ್ನೇ ಪಕ್ಷದ ಅಧ್ಯಕ್ಷರಾಗಿಸುವುದು, ಶಾಸಕ ಅಥವಾ ಸಂಸದರನ್ನಾಗಿ ಮಾಡುವುದು ಕುಟುಂಬ ರಾಜಕಾರಣ. ನಮ್ಮದು ಆ ರೀತಿಯಲ್ಲ’ ಎಂದು ವ್ಯಾಖ್ಯಾನಿಸಿದರು.

‘ಅಣ್ಣನ ಅಕಾಲಿಕ ಮರಣದ ಕಾರಣದಿಂದ ನಾನು ರಾಜಕೀಯಕ್ಕೆ ಬಂದೆ’ ಎಂದರು.

‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿರುವುದು ರಾಜಕೀಯ ಪ್ರೇರಿತ. ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಹೀಗೆ ಮಾಡಿದೆ’ ಎಂದು ದೂರಿದರು. ‘ಆ ಕೇಸ್ ನಿಲ್ಲುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.