ತಿ.ನರಸೀಪುರ: ‘ಕೆಎಸ್ಐಸಿ ಸರ್ಕಾರಿ ಕಾರ್ಖಾನೆಯಾಗಿದ್ದು, ಅದನ್ನು ಮುಚ್ಚುವ ಪ್ರಶ್ನೆಯೇ ಇಲ್ಲ’ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಪಟ್ಟಣದ ತಿರುಮಕೂಡಲಿಗೆ ಕಾರ್ಯಕ್ರಮ ನಿಮಿತ್ತ ಮಂಗಳವಾರ ಸಂಜೆ ಆಗಮಿಸಿದ್ದ ವೇಳೆ ಕೆಎಸ್ಐಸಿ ಕ್ರೀಡಾಂಗಣ ವಿವಾದ ಕುರಿತ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

‘ತಾಲ್ಲೂಕಿನ ಜನತೆಗೆ, ಕ್ರೀಡಾಪಟುಗಳಿಗೆ ಅನುಕೂಲವಾಗಲೆಂದು ಕ್ರೀಡಾಂಗಣ ಮಾಡಲು ಹೊರಟಿದ್ದೆವು. ಇದಕ್ಕಾಗಿ ನಾವು ಕೆಎಸ್ಐಸಿಯನ್ನು ಮುಚ್ಚುತ್ತೇವೆ ಎಂದು ಹೇಳಿಲ್ಲ. ಸರ್ಕಾರಿ ಕಾರ್ಖಾನೆಯಾಗಿರುವ ಕೆಎಸ್ಐಸಿ ತಾಲ್ಲೂಕಿನ ಜನರಿಗೆ ಉದ್ಯೋಗ ಕೊಟ್ಟಿದೆ. ಇದನ್ನು ಮುಚ್ಚಿದರೆ ಜನರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಇದನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಸುಮ್ಮನೆ ಸುಳ್ಳುವದಂತಿ ಹರಡುತ್ತಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಕ್ರೀಡಾಂಗಣಕ್ಕೆ ಸೂಕ್ತ ಜಾಗ ಎಂದು ತಜ್ಞರು ವರದಿ ಕೊಟ್ಟ ಮೇಲೆಯೇ ಈ ಸ್ಥಳವನ್ನು ಗುರುತಿಸಲಾಗಿದೆ. ಆದರೂ ಏನಾದರೂ ಗೊಂದಲಗಳು ಇದ್ದರೆ ಬಗೆಹರಿಸಿ ವಿರೋಧಿಸುವವರ ಮನವೊಲಿಸಿ ಕ್ರೀಡಾಂಗಣ ಮಾಡೋಣ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.