ಮೈಸೂರು: ಇಲ್ಲಿನ ಸರಸ್ವತಿಪುರಂನ ಮಹಾಬೋಧಿ ಶಾಲೆಯಲ್ಲಿ ಬೆಂಗಳೂರಿನ ಕೇಂದ್ರ ಪ್ರತಿನಿಧಿ ಪ್ರಜಾಪ್ರಭುತ್ವ ಸಂಸ್ಥೆ ಸಹಯೋಗದಲ್ಲಿ ಯುವ ಸಂಸತ್ ಆಯೋಜಿಸಿ, ಕಲಾಪಗಳನ್ನು ನಡೆಸಲಾಯಿತು.

ಸಂಸತ್ತಿನ ಕಾರ್ಯವೈಖರಿಯನ್ನು ಸಮರ್ಥವಾಗಿ ಪ್ರದರ್ಶಿಸಿದ ವಿದ್ಯಾರ್ಥಿ ಸಂಸದರು ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡರು. ಪ್ರಶ್ನೋತ್ತರ, ಚರ್ಚೆಗಳಲ್ಲಿ ಭಾಗಿಯಾಗಿ ಸದನದ ಅನುಭವವನ್ನು ಪಡೆದರು. ಪ್ರಜಾಪ್ರಭುತ್ವದಲ್ಲಿ ಯುವ ಧ್ವನಿಯ ಅಗತ್ಯವನ್ನು ಎತ್ತಿ ತೋರಿದರು.

ಯುವ ಮನಸ್ಸುಗಳಿಗೆ ವಿಮರ್ಶಾತ್ಮಕವಾಗಿ ಚಿಂತಿಸುವ, ಪ್ರಶ್ನಿಸುವ ಹಾಗೂ ನಾಗರಿಕ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಅವಕಾಶ ನೀಡಿದಾಗ ಪ್ರಜಾಪ್ರಭುತ್ವವು ವಿಕಸನಗೊಳ್ಳುತ್ತದೆ. ಯುವ ಸಂಸತ್ ಆಯೋಜನೆ ಇದಕ್ಕೆ ಪೂರಕವಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ವಿದ್ಯಾರ್ಥಿಗಳಿಗೆ ಬೆಂಗಳೂರಿನ ವಿಧಾನಸೌಧದಲ್ಲಿ
ಸಂಸತ್ ಮಾರ್ಗದರ್ಶಕ ಜೆ.ಜ್ಞಾನಶೇಖರ್, ಸಂಯೋಜಕ ಟಿ.ಗೋಪಿ ಅವರ ಮಾರ್ಗದರ್ಶನದಲ್ಲಿ ತರಬೇತಿ ನೀಡಲಾಗಿತ್ತು.

ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸಂಸತ್ತಿನ ವಿಧಾನಗಳು, ಮಾಧ್ಯಮ ನೈತಿಕತೆ, ಸಾರ್ವಜನಿಕ ಭಾಷಣ ಕೌಶಲಗಳು ಮತ್ತು ಪ್ರಜಾಪ್ರಭುತ್ವದ ಜವಾಬ್ದಾರಿಗಳ ಕುರಿತು ದೃಢವಾದ ಅರಿವು ಮೂಡಿಸುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸ ವೃದ್ಧಿಗೆ ಸಹಕಾರಿಯಾಯಿತು ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.