ಭಾನುವಾರ, ಫೆಬ್ರವರಿ 23, 2020
19 °C

‘ನಾಟಕ ಸಂಸ್ಕೃತಿಯ ಪ್ರತೀಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ನಾಟಕಕ್ಕೆ ಸಮಾಜವನ್ನು ತಿದ್ದುವ ಶಕ್ತಿ ಇದೆ. ಜನರನ್ನು ಸರಿದಾರಿಗೆ ಕರೆದೊಯ್ಯುವ ಕೆಲಸವನ್ನು ನಾಟಕಗಳು ಮಾಡುತ್ತಿವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರಲ್ಲಿ ಈಚೆಗೆ ಏರ್ಪಡಿಸಿದ್ದ ‘ಶಿವಸಂಚಾರ’ ನಾಟಕೋತ್ಸವದಲ್ಲಿ ಅವರು ಮಾತನಾಡಿದರು.

‘ನಾಟಕ ಪ್ರದರ್ಶನಗಳು ಜನರಿಗೆ ಮನರಂಜನೆ ಜೊತೆಗೆ ನಾಟಕ ಪರಂಪರೆಯನ್ನು ಪರಿಚಯಿಸುತ್ತವೆ. ಜನರನ್ನು ಸರಿದಾರಿಗೆ ತರುವಲ್ಲಿ ಸಹಕಾರಿಯಾಗಿವೆ. ನಾಟಕಗಳು ದೇಶದ ಪಾರಂಪರಿಕ ಹಾಗೂ ಸಂಸ್ಕೃತಿಯ ಪ್ರತೀಕವಾಗಿವೆ’ ಎಂದು ಹೇಳಿದರು.

ರಂಗಭೂಮಿ ಹಿರಿಯ ಕಲಾವಿದ ಎಸ್.ಎಂ.ಬೇಡಗಿ ಮಾತನಾಡಿ, ‘ನಾಟಕಕ್ಕೆ ಪ್ರೇಕ್ಷಕನೇ ಜೀವಾಳ. ಸಂಗೀತಕ್ಕೆ ಭಾಷೆ ಇಲ್ಲ, ಸಾಹಿತ್ಯಕ್ಕೆ ಸಾವಿಲ್ಲ, ಕಲಾವಿದರಿಗೆ ಜಾತಿ ಇಲ್ಲ. ಹೀಗಾಗಿ ರಂಗಕಲಾವಿದರಿಗೆ ಪ್ರೋತ್ಸಾಹವೇ ಪ್ರೇಕ್ಷಕ’ ಎಂದರು.

ಉದ್ಘಾಟನೆ ಬಳಿಕ ‘ಮೋಳಿಗೆ ಮಾರಾಯ್ಯ’ ನಾಟಕ ಪ್ರದರ್ಶನಗೊಂಡಿತು.

ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಸಂಗಮೇಶ ಬಾದಾಮಿ, ರಂಗಮೇಳ ಅಧ್ಯಕ್ಷ ಡಿ.ಎಚ್.ಕೋಲಾರ, ರಂಗಭೂಮಿ ನಟ ರವೀಂದ್ರ ಮೆಡೆಗಾರ, ರಂಗ ನಿರ್ದೇಶಕ ಮುತ್ತುರಾಜ ಸಂಕಣ್ಣವರ, ಯೋಗೆಂದ್ರ ಸಿಂಗ್, ಜಿ.ಎಸ್. ಕುಲಕರ್ಣಿ, ಸಿದ್ರಾಮಪ್ಪ ಬಿಜ್ಜರಗಿ, ಅಶೋಕ ಕಾಪ್ಸೆ ಇದ್ದರು.

ರಾಜಶೇಖರ ದೈವಾಡಿ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು