ಹಾವೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಸವರಾಜ ಎಸ್. ಬೊಮ್ಮಾಯಿ ಅಭಿಮಾನಿ ಬಳಗದ ವತಿಯಿಂದ ರಾಷ್ಟ್ರ ಮಟ್ಟದ ಆಹ್ವಾನಿತ ‘ಸವಣೂರು ಕಬಡ್ಡಿ ಉತ್ಸವ–2023’ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಸವಣೂರು ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಾರ್ಚ್ 24ರಿಂದ ಮಾರ್ಚ್ 26ರವರೆಗೆ ಆಯೋಜಿಸಲಾಗಿದೆ.
ಪುರುಷರ ವಿಭಾಗದಲ್ಲಿ ವಿಜೇತರಾದವರಿಗೆ ₹5 ಲಕ್ಷ (ಪ್ರಥಮ), ₹3 ಲಕ್ಷ (ದ್ವಿತೀಯ), ₹2 ಲಕ್ಷ (ತೃತೀಯ) ಬಹುಮಾನ ನೀಡಲಾಗುವುದು. ಮಹಿಳೆಯರ ವಿಭಾಗದಲ್ಲಿ ₹3 ಲಕ್ಷ (ಪ್ರಥಮ), ₹2 ಲಕ್ಷ (ದ್ವಿತೀಯ), ₹1.50 ಲಕ್ಷ (ತೃತೀಯ) ನಗದು ಬಹುಮಾನ ನೀಡಲಾಗುವುದು.
ಬೆಸ್ಟ್ ರೈಡರ್‌ಗೆ ₹25 ಸಾವಿರ, ಬೆಸ್ಟ್ ಕ್ಯಾಚರ್‌ಗೆ ₹25 ಸಾವಿರ, ಬೆಸ್ಟ್ ಆಲ್ ರೌಂಡರ್‌ಗೆ ₹35 ಸಾವಿರ ನಗದು ಬಹುಮಾನವನ್ನು ಪುರುಷ ಮತ್ತು ಮಹಿಳಾ ವಿಭಾಗದ ವಿಜೇತರಿಗೆ ಪ್ರತ್ಯೇಕವಾಗಿ ನೀಡಲಾಗುವುದು.
ಮಾರ್ಚ್ 24ರಂದು ಸಂಜೆ 5.30ಕ್ಕೆ ಪಂದ್ಯಾವಳಿ ಆರಂಭಗೊಳ್ಳಲಿದೆ. ಮಾರ್ಚ್ 25 ಮತ್ತು 26ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ಪಂದ್ಯಗಳು ನಡೆಯಲಿವೆ.
‘ಪ್ರೊ–ಕಬಡ್ಡಿ ಮತ್ತು ಅಂತರರಾಷ್ಟ್ರೀಯ ಕಬಡ್ಡಿ ಮಿನುಗು ತಾರೆಗಳು ಹೊನಲು ಬೆಳಕಿನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಸ್ಪರ್ಧೆಗೆ ಹಾವೇರಿ ಜಿಲ್ಲಾಡಳಿತ ಮತ್ತು ಕ್ರೀಡಾ ಇಲಾಖೆ ವತಿಯಿಂದ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ’ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.