ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರೋತ್ಸವ– ದೇಶಭಕ್ತರು!

Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ನಡೆದಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ ಬಂದೆ. ಪ್ರದರ್ಶನದ ಆರಂಭದಲ್ಲಿ ರಾಷ್ಟ್ರಗೀತೆ ನುಡಿಸುವುದು, ಎಲ್ಲರೂ ಎದ್ದುನಿಲ್ಲುವುದು ಅನೂಚಾನವಾಗಿ ನಡೆದಿದೆ. ‘ಸುಪ್ರೀಂ ಕೋರ್ಟ್‌ ಸೂಚನೆಯ ಪ್ರಕಾರ ಎದ್ದು ನಿಂತೇ ಗೌರವ ನೀಡಬೇಕು’ ಎಂದು ಯಾರೂ ಯಾರಿಗೂ ಬಲವಂತಪಡಿಸಬೇಕಿಲ್ಲ.

ಚಿತ್ರೋತ್ಸವದಲ್ಲಿ ಆರಂಭದ ದಿನಗಳಲ್ಲಿ ಇಲ್ಲದ ಕ್ರಮವೊಂದು ಒಂದೆರಡು ದಿನಗಳಿಂದ ಆರಂಭವಾಗಿದೆ. ಕೆಲವು ‘ಸ್ವಯಂಘೋಷಿತ ದೇಶಭಕ್ತರು’ ಪ್ರದರ್ಶನಕ್ಕೆ
ನುಸುಳಿಕೊಂಡು ರಾಷ್ಟ್ರಗೀತೆ ಮುಗಿದ ಕೂಡಲೆ ‘ಬೋಲೋ ಭಾರತ್ ಮಾತಾ ಕಿ’ ಎನ್ನುವುದೂ ಜನ ಸಹಜವಾಗಿ ಅದಕ್ಕೆ ‘ಜೈ’ ಎಂದು ದನಿಗೂಡಿಸುವುದೂ ನಡೆದಿದೆ. ಇದು ಸಂಘಟಕರ ಗಮನಕ್ಕೆ ಬಂದಿದೆಯೋ ಇಲ್ಲವೋ ಕಾಣೆ.

ಇಂಥ ವರ್ತನೆ ತಪ್ಪಲ್ಲದೆ ಇರಬಹುದು, ಆದರೆ‌ ಅಪೇಕ್ಷಣೀಯವೇನಲ್ಲ. ಎದ್ದು ನಿಲ್ಲದೆ, ಜೈಕಾರ ಹಾಕದೆ ಹಾಗೇ ಇದ್ದೂ ದೇಶಭಕ್ತರಾಗಿ ಇರಬಹುದು. ದೇಶಭಕ್ತಿ ಎಂಬುದು ಅಂತರಂಗದ ಸಂಗತಿಯೇ ವಿನಾ ಪ್ರದರ್ಶನದ ವಸ್ತುವಲ್ಲ. ಚಿತ್ರೋತ್ಸವದ ಅಜೆಂಡಾದಲ್ಲಿ ಇರಲಾರದ ಈ ಬೆಳವಣಿಗೆಯನ್ನು ಸಂಘಟಕರು ಗಮನಿಸಬೇಕು. ಇಲ್ಲದಿದ್ದರೆ ಒಂದೆರಡು ವರ್ಷಗಳ ನಂತರ ಇದೂ ಒಂದು ಅಲಿಖಿತ ನಿಯಮದಂತೆ ಸೇರಿಬಿಡಬಹುದು ‘ರೂಢಿ– ಸಂಪ್ರದಾಯ’ದ ಹೆಸರಿನಲ್ಲಿ.

-ರೋಹಿತ್ ಅಗಸರಹಳ್ಳಿ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT