ನವದಶೀಯ ರಾಷ್ಟ್ರೀಯ ಸಂಗೀತೋತ್ಸವ ಜ.12ರಿಂದ

7

ನವದಶೀಯ ರಾಷ್ಟ್ರೀಯ ಸಂಗೀತೋತ್ಸವ ಜ.12ರಿಂದ

Published:
Updated:
Prajavani

ಸಾಗರ: ಇಲ್ಲಿನ ವೇದನಾದ ಪ್ರತಿಷ್ಠಾನ ಹಾಗೂ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮಹಾವಿದ್ಯಾಲಯವು ಗಾಂಧಿ ಮೈದಾನದಲ್ಲಿ ಜ.12ರಿಂದ 14ವರೆಗೆ ನವದಶೀಯ ರಾಷ್ಟ್ರೀಯ ಸಂಗೀತೋತ್ಸವವನ್ನು ಆಯೋಜಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿದ್ಯಾಲಯದ ಪ್ರಮುಖರಾದ ವಿದುಷಿ ವಸುಧಾ ಶರ್ಮ, ‘ಜ.12ರಂದು ಬೆಳಿಗ್ಗೆ 10.30ಕ್ಕೆ ಹಿಂದೂಪುರ ನರಹರಿ ಸದ್ಗುರು ಆಶ್ರಮದ ಶ್ರೀಸದ್ಗುರು ಮೂರ್ತಿ ಅವರು ಉತ್ಸವ ಉದ್ಘಾಟಿಸಲಿದ್ದಾರೆ’ ಎಂದರು.

ಅಂದು ಮಧ್ಯಾಹ್ನ 12ಕ್ಕೆ ಬೆಂಗಳೂರಿನ ಅನಿರುದ್ಧ ಭಾರ್ಗವ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತೋತ್ಸವ, ಸಂಜೆ 6ಕ್ಕೆ ವಿದ್ವಾನ್ ಮಾಧವ ಭಟ್ ಚೆನ್ನಿಗನ ತೋಟ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾತ್ರಿ 8.30ಕ್ಕೆ ವಿದುಷಿ ಮೇಘನಾ ಕುಲಕರ್ಣಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ ಎಂದು ತಿಳಿಸಿದರು.

13 ರಂದು ಬೆಳಿಗ್ಗೆ 8.30ರಿಂದ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ, 12ಕ್ಕೆ ಕಿತ್ತೂರಿನ ರಜತ್ ಕುಲಕರ್ಣಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸಂಜೆ 6ಕ್ಕೆ ಅಂಜಲಿ ಗಾಯಕ್ ವಾಡ್ ಅವರಿಂದ ಹಿಂದೂಸ್ತಾನಿ ಗಾಯನ, ರಾತ್ರಿ 9ಕ್ಕೆ ವಸುಧಾ ಶರ್ಮ ಅವರಿಂದ ಹಿಂದೂಸ್ತಾನಿ ಗಾಯನ ಆಯೋಜಿಸಲಾಗಿದೆ ಎಂದರು.

ಜ.14ರಂದು ಬೆಳಿಗ್ಗೆ 8.30ಕ್ಕೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ, 12.30ಕ್ಕೆ ಪಂಡಿತ್ ಮೋಹನ್ ಹೆಗಡೆ ಹುಣಸೆಕೊಪ್ಪ ಅವರಿಂದ ‘ಹಿಂದೂಸ್ತಾನಿ ಗಾಯಕಿ ಅಂಗಗಳು’ ಕುರಿತು ಪ್ರಾತ್ಯಕ್ಷಿಕೆ, ಸಂಜೆ 5ಕ್ಕೆ ಚೆನ್ನೈನ  ವಿದುಷಿ ಸಹನಾ ಸಾಮ್ರಾಜ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 7ಕ್ಕೆ ವಿದ್ಯಾರ್ಥಿಗಳಿಂದ ಲಯತರಂಗ, ರಾತ್ರಿ 9.30ಕ್ಕೆ ಪಂಡಿತ್ ಗಣಪತಿ ಭಟ್ ಹಾಸಣಗಿ ಹಾಗೂ ಪಂಡಿತ್ ಪರಮೇಶ್ವರ ಹೆಗಡೆ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಂಡಿತ್ ಮೋಹನ್ ಹೆಗಡೆ ಹುಣಸೆಕೊಪ್ಪ, ಐ.ವಿ.ಹೆಗಡೆ, ನರಸಿಂಹಮೂರ್ತಿ ಹಳೆ ಇಕ್ಕೇರಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !