ರಾಮನಗರ: ಕಾಂಗ್ರೆಸ್‌ನಿಂದ ಯಾರೂ ಬಂಡಾಯವಾಗಿ ನಿಲ್ಲಲ್ಲ - ಸಯ್ಯದ್‌ ಜಿಯಾವುಲ್ಲಾ

7
'ಇಕ್ಬಾಲ್‌ ಹುಸೇನ್, ಲಿಂಗಪ್ಪ ಮನವೊಲಿಕೆ ಯತ್ನ' ಭರವಸೆ

ರಾಮನಗರ: ಕಾಂಗ್ರೆಸ್‌ನಿಂದ ಯಾರೂ ಬಂಡಾಯವಾಗಿ ನಿಲ್ಲಲ್ಲ - ಸಯ್ಯದ್‌ ಜಿಯಾವುಲ್ಲಾ

Published:
Updated:
Deccan Herald

ರಾಮನಗರ: ‘ಉಪ ಚುನಾವಣೆಯಲ್ಲಿ ಯಾವುದೇ ಕಾಂಗ್ರೆಸ್ ಅಭ್ಯರ್ಥಿ ಬಂಡಾಯವಾಗಿ ನಿಲ್ಲುವುದಿಲ್ಲ. ಈ ಬಗ್ಗೆ ಇಕ್ಬಾಲ್ ಹುಸೇನ್‌ ಹಾಗೂ ಸಿ.ಎಂ. ಲಿಂಗಪ್ಪ ಅವರ ಮನವೊಲಿಕೆ ಯತ್ನವನ್ನೂ ಮಾಡಲಿದ್ದೇವೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್‌ ಜಿಯಾವುಲ್ಲಾ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಇಕ್ಬಾಲ್‌ ಅವರಿಗೆ ಟಿಕೆಟ್‌ ನೀಡುವಂತೆ ಕೆಲವು ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಪಕ್ಷದಿಂದ ಅಭ್ಯರ್ಥಿ ಹಾಕಬೇಕು ಎನ್ನುವುದು ಅವರ ಆಗ್ರಹವಾಗಿದೆಯೇ ಹೊರತು ಯಾರೂ ಬಂಡಾಯವಾಗಿ ನಿಲ್ಲುತ್ತೇನೆ ಎಂದು ಹೇಳಿಲ್ಲ. ರಾಮನಗರ ಉಪ ಚುನಾವಣೆ ವಿಚಾರದಲ್ಲಿ ಕೆಪಿಸಿಸಿ ಈಗಾಗಲೇ ಮೈತ್ರಿಗೆ ನಿರ್ಧರಿಸಿದೆ. ಪಕ್ಷವು ಯಾರ ಪರವಾಗಿ ಹೇಳುತ್ತದೆಯೋ ಅವರ ಪರ ಪ್ರಚಾರಕ್ಕೆ ಸಿದ್ಧರಿದ್ದೇವೆ. ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜ್ಯದಲ್ಲಿ ಮೈತ್ರಿ ಅನಿವಾರ್ಯವಾಗಿತ್ತು. ಈ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ ಎಂದರು.

ಸ್ಥಳೀಯ ಕಾಂಗ್ರೆಸ್ ಮುಖಂಡರು ಜೊತೆಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !