ಕೃಷಿ ಮಾರಾಟ ಮಂಡಳಿ ಸದಸ್ಯರಾಗಿ ನೇಮಕ

7

ಕೃಷಿ ಮಾರಾಟ ಮಂಡಳಿ ಸದಸ್ಯರಾಗಿ ನೇಮಕ

Published:
Updated:
Prajavani

ರಾಮನಗರ: ರಾಜ್ಯ ಕೃಷಿ ಮಾರಾಟ ಮಂಡಳಿ ಸದಸ್ಯರಾಗಿ ರಾಮನಗರದ ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಇಲ್ಲಿನ ಎಪಿಎಂಸಿ ಕಚೇರಿಯಲ್ಲಿ ಸದಸ್ಯ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ದೊರೆಸ್ವಾಮಿ ಹಾಗೂ ಕನಕಪುರ ಎಪಿಎಂಸಿ ಅಧ್ಯಕ್ಷ ಶಿವರಾಜು ನಾಮಪತ್ರ ಸಲ್ಲಿಸಿದ್ದರು. ನಂತರ ಶಿವರಾಜು ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದರಿಂದ, ದೊರೆಸ್ವಾಮಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಬಸವಲಿಂಗಯ್ಯ ಘೋಷಿಸಿದರು.

20 ತಿಂಗಳ ಅವಧಿಯ ಕೃಷಿ ಮಂಡಳಿ ಸದಸ್ಯ ಸ್ಥಾನಕ್ಕೆ ಜಿಲ್ಲೆಯ ಚನ್ನಪಟ್ಟಣ, ಕನಕಪುರ ಹಾಗೂ ರಾಮನಗರ- ಮಾಗಡಿ ಎಪಿಎಂಸಿಗಳಿಂದ ಒಬ್ಬರು ಆಯ್ಕೆಯಾಗಬೇಕಿತ್ತು. ಚುನಾವಣೆಯಲ್ಲಿ ದೊರೆಸ್ವಾಮಿ ಅವಿರೋಧ ಆಯ್ಕೆಯಾಗುವ ಮೂಲಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿದ್ದಾರೆ.

ಅಭಿನಂದನೆ: ದೊರೆಸ್ವಾಮಿ ಅವರನ್ನುಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವತ್ಥ್, ಕನಕಪುರ ಎಪಿಎಂಸಿ ಅಧ್ಯಕ್ಷ ಶಿವರಾಜು, ಚನ್ನಪಟ್ಟಣ ಎಪಿಎಂಸಿ ಅಧ್ಯಕ್ಷ ಯಾಲಕ್ಕಿಗೌಡ, ನಿರ್ದೇಶಕ ಪುಟ್ಟರಾಮಯ್ಯ, ಕಾರ್ಯದರ್ಶಿ ಬಸವರಾಜು, ನಗರಸಭೆ ಸದಸ್ಯ ಆರ್.ಎ. ಮಂಜುನಾಥ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಗ್ರಾಮಾಂತರ ಘಟಕದ ಅಧ್ಯಕ್ಷ ಅಜಯ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !