ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿರಿಸಿನ ನಾವೀನ್ಯತೆಗೆ ಕಸೂತಿ

Last Updated 24 ಏಪ್ರಿಲ್ 2018, 8:40 IST
ಅಕ್ಷರ ಗಾತ್ರ

ಕಸೂತಿ ಶಬ್ದ ಕೇಳಿದಾಗಲೇ ಮನಸ್ಸು ಪ್ರಫುಲ್ಲವಾಗುತ್ತದೆ. ಅದರ ಅಂದ, ವಿನ್ಯಾಸ, ಅದು ನಮ್ಮ ವಸ್ತ್ರಗಳಿಗೆ ನೀಡುವ ಮೆರುಗನ್ನು ನೆನಪಿಸಿಕೊಂಡಾಗ ಧರಿಸಿರುವ ಉಡುಪಿನ ಮೌಲ್ಯವೂ ಹೆಚ್ಚಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಕಸೂತಿ ವಿನ್ಯಾಸ ಎಂಬುದು ಒಂದು ಕರಕುಶಲವೂ ಜತೆಗೆ, ಸಾಂಸ್ಕೃತಿಕ ಪರಂಪರೆಯನ್ನೂ ಹೊಂದಿದೆ.

ಕಸೂತಿ

ಇದು ಕಲ್ಪನೆಯ ಲೋಕ. ಅದರ ಜತೆಗೆ ಹಲವು ವಿನ್ಯಾಸ ಕಾರರ ಮನದಲ್ಲಿ ಮೂಡುವ ಕಲ್ಪನೆಗಳು ಕಸೂತಿಯ ಮೂಲಕ ಸಾಕಾರವನ್ನೂ ಪಡೆಯುತ್ತವೆ. ಸೂಜಿ ಮತ್ತು ನೂಲಿನ ಬಳಕೆಯಿಂದ ಹಿಡಿದು ಯಂತ್ರಗಳ ಜತೆಗಿನ ಸಾಂಗತ್ಯದ ವರೆಗೂ ಕಸೂತಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಕಸೂತಿ ಶೈಲಿ, ವಿನ್ಯಾಸ ಹಾಗೂ ಮಾದರಿಗಳು ಹೊಲಿಗೆ ಶೈಲಿಗಳನ್ನು ಅವಲಂಬಿಸಿ ಬದಲಾಗುತ್ತವೆ. ಬಟ್ಟೆಯ ಮೇಲೆ ಕಸೂತಿ ಎಳೆಗಳನ್ನು ಹೊಂದಿರುವ ಮುತ್ತುಗಳು, ಮಣಿಗಳು, ಮಿನುಗುಗಳು, ಕಲ್ಲುಗಳು ಕೂಡ ಕಸೂತಿ ಜತೆಗೆ ಮೆರುಗು ಪಡೆಯುತ್ತವೆ. ಟೋಪಿ, ಕೋಟ್, ಸೀರೆ, ದುಪಟ್ಟಾ ಹೀಗೆ ಎಲ್ಲ ವಸ್ತ್ರಗಳಲ್ಲೂ ಕಸೂತಿಗೆ ಜಾಗ ಇದೆ.

ಕೆಲವು ಕಸೂತಿ ವಿನ್ಯಾಸಗಳು

ಕ್ರಾಸ್ ಸ್ಟಿಚ್: ಎಕ್ಸ್ (X) ಆಕಾರದ ಹೊಲಿಗೆಗಳನ್ನು ಒಂದು ಫ್ಯಾಬ್ರಿಕ್ ಮೇಲೆ ರಚಿಸಲಾಗುತ್ತದೆ. ವಿಶೇಷ ಎಂದರೆ ಅದು ಪ್ರಿಂಟ್ ಮಾಡಿರುವಂತೆ ಭಾಸವಾಗುತ್ತದೆ. ಕಾಟನ್ ಫ್ಲೋಸ್ ನೂಲನ್ನು ಬಳಸಿ ಲಿನಿನ್, ಹತ್ತಿ, ಪ್ಲಾಸ್ಟಿಕ್ ಮತ್ತು ವಿನೈಲ್‌ಗಳ ಮೇಲೆ ಚಿತ್ತಾರ ಮೂಡಿಸಲಾಗುತ್ತದೆ.

ಕ್ರೆವೆಲ್: ಉಣ್ಣೆ ಎಳೆಗಳನ್ನು ಲಿನಿನ್, ಹತ್ತಿ, ಸೆಣಬಿನ ಮತ್ತು ವೆಲ್ವೆಟ್‌ನಂಥ ಬಟ್ಟೆಗಳ ಮೇಲೆ ಹೊಲಿಯಲಾಗುತ್ತದೆ. ವಿನ್ಯಾಸಗಳು ದೊಡ್ಡದಾ ಗಿಯೂ ಮತ್ತು ದಪ್ಪವಾಗಿಯೂ ಇರುತ್ತವೆ.

ಸೂಜಿ ಚಿತ್ರಕಲೆ: ಇದು ವಿವರವಾದ ಚಿತ್ರವನ್ನು ಚಿತ್ರಿಸಲು ವಿವಿಧ ಅಂತರಗಳ ಹೊಲಿಗೆಗಳನ್ನು ಒಳಗೊಂಡಿರುವ ಒಂದು ಆಂತರಿಕ ತುಣುಕು. ಎಳೆಗಳನ್ನು ಎಚ್ಚರಿಕೆಯಿಂದ ನೇಯಲಾಗಿರುತ್ತದೆ.

ಕಸೂತಿ ಮೂಲಕ ಮೂಡುವ ಚಿತ್ರಗಳ ಪೈಕಿ ‘ಬಟ್ಟಾ’ಗಳೂ ಸೇರಿವೆ. ಇದು ಎಲ್ಲ ವಯೋಮಾನದವರನ್ನೂ ಆಕರ್ಷಿಸುವ ಸಾಮರ್ಥ್ಯ ಹೊಂದಿವೆ. ಬಟ್ಟೆಗಳ ಮೇಲೆ ಮೂಡುವ ಹೂವಿನ ಚಿತ್ತಾರಗಳು ಇದರ ವಿಶೇಷ.

ಡಿಸೈನರ್ ಬಟ್ಟಾ: ನೀಲಿ, ಚಿನ್ನದ ಬಣ್ಣದ ಝರಿ, ಹೂವಿನ ವಿನ್ಯಾಸದ ಕಸೂತಿಯನ್ನು ಸೀರೆಗಳಲ್ಲಿ ಮೂಡಿಸಲಾಗುತ್ತದೆ. ಮದುವೆ ಮೊದಲಾದ ವಿಶೇಷ ಸಮಾರಂಭಗಳ ಮೆರುಗನ್ನು ಇದು ಹೆಚ್ಚಿಸುತ್ತದೆ.
ಅರ್ಧ ಚಂದ್ರಾಕಾರ ಹೊಂದಿರುವ ಹೂವುಗಳ ವಿನ್ಯಾಸ ಇರುವ ಈ ಕಸೂತಿ ಚಿತ್ತಾರವು ಮನಸೂರೆಗೊಳ್ಳುತ್ತದೆ.

ರಾಜಸ್ತಾನದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಚಾಂದೇರಿ ಉಡುಪುಗಳಲ್ಲಿ ಈ ವಿನ್ಯಾಸ ಸಾಮಾನ್ಯವಾಗಿರುತ್ತದೆ. ಈ ಬಟ್ಟಾ ವಿನ್ಯಾಸಗಳು ಸೀರೆಯ ಅಂಚಿನಲ್ಲಿ, ದುಪಟ್ಟಾಗಳಲ್ಲಿ ವಿಶಿಷ್ಟವಾಗಿ ಮೂಡಿಬರುತ್ತವೆ. ಇವು ಧರಿಸಿದವರ ಮೆರುಗನ್ನೂ, ಸೌಂದರ್ಯವನ್ನೂ ಇಮ್ಮಡಿಗೊಳಿಸುವುದರಲ್ಲಿ ಎರಡು ಮಾತಿಲ್ಲ. ನಿಮ್ಮ ಮನಕ್ಕೊಪ್ಪುವ ವಿನ್ಯಾಸಗಳನ್ನು ನೀವೂ ಆಯ್ಕೆ ಮಾಡಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT