ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಎಫ್‌ಸಿ ಕೇಬಲ್‌: ನಾಲ್ಕು ಕಂಪನಿಗಳಿಗೆ ₹80 ಲಕ್ಷ ದಂಡ

Last Updated 9 ಸೆಪ್ಟೆಂಬರ್ 2022, 20:03 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಜಯನಗರ ಉಪವಿಭಾಗದ ಪಟ್ಟಾಭಿರಾಮನಗರ ವಾರ್ಡ್‌ನಲ್ಲಿ ಅನಧಿಕೃತವಾಗಿ ಒಎಫ್‌ಸಿ ಕೇಬಲ್‌ ಅಳವಡಿಸಿದ್ದ ನಾಲ್ಕು ಕಂಪನಿಗಳಿಗೆ ತಲಾ ₹20 ಲಕ್ಷ ದಂಡ ವಿಧಿಸಿ, ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

ಭಾರ್ತಿ ಏರ್‌ಟೆಲ್‌, ಜಿಯೊ ಡಿಜಿಟಲ್‌ ಫೈಬರ್‌, ಟೆಲಿಸೋನಿಕ್‌ ನೆಟ್‌ವರ್ಕ್ಸ್‌, ವ್ಯಾಕ್‌ ಟೆಲಿಇನ್‌ಫ್ರಾ ಸಲ್ಯೂಷನ್‌ ಸಂಸ್ಥೆಗಳಿಗೆ ತಲಾ ₹20 ಲಕ್ಷ ದಂಡ ವಿಧಿಸಿ ಜಯನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸೆ.7ರಂದು ನೋಟಿಸ್‌ ಜಾರಿ ಮಾಡಿದ್ದಾರೆ. ಏಳು ದಿನಗಳಲ್ಲಿ ದಂಡ ಪಾವತಿಸಲು ಸೂಚಿಸಿದ್ದಾರೆ.

ಒಎಫ್‌ಸಿ ಡಕ್ಟ್‌ಗಳು, ಪಾದಚಾರಿ ಮಾರ್ಗದಲ್ಲಿ ಟೆಲಿಕಾಂ ಟವರ್‌ಗಳು ಮತ್ತು ರಸ್ತೆಗಳಲ್ಲಿರುವ ಮರಗಳ ಮೇಲೆ ಒಎಫ್‌ಸಿ ಕೇಬಲ್‌ಗಳ ಬಂಡಲ್‌ಗಳನ್ನು ಈ ಸಂಸ್ಥೆಗಳು ತೂಗಿಹಾಕಿದ್ದವು. ಇವುಗಳನ್ನು ತೆರವು ಮಾಡಬೇಕು. ಅನಧಿಕೃವಾಗಿ ಕೇಬಲ್‌ ಅಳವಡಿಸಿರುವ ಬಗ್ಗೆ ದಂಡ ಏಕೆ ಹಾಕಬಾರದು ಎಂದು ನೋಟಿಸ್‌ ಜಾರಿ ಮಾಡಿ ಉತ್ತರಿಸಲು ಸೂಚಿಸಲಾಗಿತ್ತು. ಇದಕ್ಕೆ ಉತ್ತರ ಬಂದಿರಲಿಲ್ಲ. ಹೀಗಾಗಿ ದಂಡ ವಿಧಿಸಿ, ಎಫ್‌ಐಆರ್‌ ದಾಖಲಿಸಲು ಆದೇಶ ಹೊರಡಿಸಿದ್ದಾರೆ.

ಅನಧಿಕೃತವಾಗಿ ಒಎಫ್‌ಸಿ ಕೇಬಲ್‌ಗಳನ್ನು ಅಳವಡಿಸಿರುವ ಬಗ್ಗೆ ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್‌.ಆರ್‌. ರಮೇಶ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತ, ದಕ್ಷಿಣ ವಲಯ ಆಯುಕ್ತ, ಒಎಫ್‌ಸಿ ವಿಭಾಗ ಆಯುಕ್ತರಿಗೆ ಆ.28ರಂದು ದಾಖಲೆಸಹಿತ ದೂರು ನೀಡಿದ್ದರು. ಇದರಂತೆ ನೋಟಿಸ್‌ ಜಾರಿ ಮಾಡಿ, ಇದೀಗ ಅಂತಿಮವಾಗಿ ದಂಡ ವಿಧಿಸಿ, ಎಫ್‌ಐಆರ್‌ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT