ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆ, ಹುಳುವಿದ್ದ ಪೊಂಗಲ್ ವಿತರಣೆ

7
ಡಣಾಯಕನಕಪುರ ಗ್ರಾಮದ ಅಂಗನವಾಡಿಯಲ್ಲಿ ಘಟನೆ: ಗ್ರಾಮಸ್ಥರ ಆಕ್ರೋಶ

ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆ, ಹುಳುವಿದ್ದ ಪೊಂಗಲ್ ವಿತರಣೆ

Published:
Updated:
Deccan Herald

ರಾಮನಗರ: ತಾಲ್ಲೂಕಿನ ಡಣಾಯಕನಪುರ ಗ್ರಾಮದಲ್ಲಿನ ಅಂಗನವಾಡಿಯಲ್ಲಿ ಮಂಗಳವಾರ ಮಕ್ಕಳಿಗೆ ಕೊಳೆತ ಮೊಟ್ಟೆ ಹಾಗೂ ಹುಳು ಬಿದ್ದ ಬೆಲ್ಲದಿಂದ ಮಾಡಿದ ಆಹಾರ ನೀಡಲು ಮುಂದಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಅಂಗನವಾಡಿಯಲ್ಲಿ ಒಟ್ಟು 11 ವಿದ್ಯಾರ್ಥಿಗಳು ಇದ್ದಾರೆ. ನಿಗದಿತ ಮೆನುವಿನಂತೆ ಇಂದು ಮಕ್ಕಳಿಗೆ ಪೊಂಗಲ್‌ ಹಾಗೂ ಬೇಯಿಸಿದ ಮೊಟ್ಟೆ ನೀಡಬೇಕಿತ್ತು. ಅದರಂತೆ ಅಂಗನವಾಡಿ ಸಹಾಯಕಿ ಗಾಯತ್ರಿ ಎಂಬುವರು ಅಂಗಡಿಯಿಂದ ಮೊಟ್ಟೆಗಳನ್ನು ತಂದು ನೀಡಿದ್ದಾರೆ. ಜೊತೆಗೆ ಹಳೆಯ ಬೆಲ್ಲವನ್ನೇ ಬಳಸಿ ಪೊಂಗಲ್‌ ತಯಾರಿಸುವಂತೆ ಅಡುಗೆ ಸಹಾಯಕಿಗೆ ತಿಳಿಸಿ ಹೊರ ಹೋಗಿದ್ದಾರೆ.

ಅಡುಗೆ ಸಹಾಯಕಿಯು ಮೊಟ್ಟೆ ಬೇಯಿಸಿದ ವೇಳೆ ಕೆಲವು ಕೊಳೆತಿದ್ದು, ಮತ್ತೆ ಕೆಲವು ಮೊಟ್ಟೆಗಳ ಒಳಗೆ ಭ್ರೂಣಗಳು ಇದ್ದವು. ಇವುಗಳನ್ನೇ ಮಕ್ಕಳಿಗೆ ಕೊಡಲು ಇಡಲಾಗಿತ್ತು. ಅಲ್ಲದೆ ಪೊಂಗಲ್‌ ಮಾಡಲು ಬಳಸಿದ್ದ ಬೆಲ್ಲದಲ್ಲಿ ಸಾಕಷ್ಟು ಹುಳುಗಳು ಇದ್ದವು.

ವಿಷಯ ತಿಳಿದು ಗ್ರಾಮಸ್ಥರು ಅಂಗನವಾಡಿಗೆ ನುಗ್ಗಿ ಅಲ್ಲಿನ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘ಕೊಳೆತ ಮೊಟ್ಟೆ ಹಾಗೂ ಹುಳು ಬಿದ್ದ ಬೆಲ್ಲವನ್ನು ನಿಮ್ಮ ಮಕ್ಕಳಿಗೂ ತಿನ್ನಿಸುತ್ತೀರಾ?’ ಎಂದು ಪ್ರಶ್ನಿಸಿದರು.
ಸ್ಥಳಕ್ಕೆ ಧಾವಿಸಿದ ಅಂಗನವಾಡಿ ಮೇಲ್ವಿಚಾರಕಿ ನಿಂಗವ್ವ ಎಂಬುವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಅಂಗನವಾಡಿ ಸಹಾಯಕಿಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ನಿಂಗವ್ವ ‘ಸದ್ಯ ಬೇರೆ ಅಂಗನವಾಡಿಯ ಮೇಲ್ವಿಚಾರಣೆಯನ್ನೂ ನೀಡಿರುವ ಕಾರಣ ಇಲ್ಲಿ ಗಮನ ನೀಡಲು ಆಗಿರಲಿಲ್ಲ. ಆಹಾರ ಪದಾರ್ಥಗಳು ಹಾಳಾಗಿರುವ ಕುರಿತು ನನ್ನ ಗಮನಕ್ಕೆ ತಂದಿರಲಿಲ್ಲ. ಈ ಕುರಿತು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಹೇಳಿದರು.

* ಮಕ್ಕಳಿಗೆ ಕೊಳೆತ ಮೊಟ್ಟೆ, ಹುಳು ಬಿದ್ದ ಬೆಲ್ಲ ನೀಡುತ್ತಿದ್ದಾರೆ. ಅವರ ಮಕ್ಕಳಿಗೂ ಇದೇ ಆಹಾರ ನೀಡುತ್ತಾರ?
- ಪವಿತ್ರಾ, ಸ್ಥಳೀಯ ನಿವಾಸಿ

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !