ಸಿಂಗ್‌ ಮೇಲೆ ಹಲ್ಲೆ, ಗಣೇಶ್‌ಗಾಗಿ ಶೋಧ, ತನಿಖೆಗೆ ರಾಜಕೀಯ ಒತ್ತಡ ಇಲ್ಲ: ಎಸ್ಪಿ

7
ಗಣೇಶ್‌ ಪತ್ತೆಗೆ ಹೆಚ್ಚುವರಿ ತಂಡ ನಿಯೋಜನೆ

ಸಿಂಗ್‌ ಮೇಲೆ ಹಲ್ಲೆ, ಗಣೇಶ್‌ಗಾಗಿ ಶೋಧ, ತನಿಖೆಗೆ ರಾಜಕೀಯ ಒತ್ತಡ ಇಲ್ಲ: ಎಸ್ಪಿ

Published:
Updated:

ರಾಮನಗರ: ಬಿಡದಿಯ ಈಗಲ್‌ಟನ್‌ ರೆಸಾರ್ಟಿನಲ್ಲಿ ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್‌ ಮೇಲೆ ಹಲ್ಲೆ ನಡೆಸಿ ತಲೆಮರಿಸಿಕೊಂಡಿರುವ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಹೆಚ್ಚುವರಿಯಾಗಿ ಇನ್ನೊಂದು ತಂಡವು ಪತ್ತೆ ಕಾರ್ಯಕ್ಕೆ ತೆರಳಿದೆ.

‘ರೆಸಾರ್ಟಿನಲ್ಲಿ ಹಲ್ಲೆ ನಡೆದ ಬಳಿಕ ನಮಗೆ ಯಾವುದೇ ದೂರು ಬಂದಿರಲಿಲ್ಲ. ಆಸ್ಪತ್ರೆಯಿಂದ ಎಂಎಲ್‌ಸಿ ಬಂದ ನಂತರವಷ್ಟೇ ಅಲ್ಲಿಗೆ ಸ್ಥಳೀಯ ಪೊಲೀಸರನ್ನು ಕಳುಹಿಸಿ ಹೇಳಿಕೆ ಪಡೆಯಲಾಯಿತು. ಹೀಗಾಗಿ ಆರಂಭದಲ್ಲಿಯೇ ಆರೋಪಿಯನ್ನು ಬಂಧಿಸುವುದು ಸಾಧ್ಯವಾಗಲಿಲ್ಲ. ಪ್ರಕರಣದ ತನಿಖೆ ವಿಚಾರದಲ್ಲಿ ಯಾವುದೇ ರಾಜಕೀಯ ಒತ್ತಡ ಬಂದಿಲ್ಲ. ಸ್ವತಂತ್ರವಾಗಿ ತನಿಖೆ ನಡೆದಿದೆ’ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

‘ಆರೋಪಿ ಹೆಸರಲ್ಲಿ ರೌಡಿಶೀಟ್‌ ತೆರೆಯುವ ಸಂಬಂಧ ಬಳ್ಳಾರಿ ಎಸ್ಪಿ ಜೊತೆ ಸಂಪರ್ಕದಲ್ಲಿ ಇದ್ದೇವೆ. ಅವರಿಗೆ ಪ್ರಕರಣದ ಮಾಹಿತಿ ನೀಡುತ್ತಿದ್ದೇವೆ’ ಎಂದರು.

ಗುರುವಾರವೂ ಸ್ಥಳೀಯ ನ್ಯಾಯಾಲಯದಲ್ಲಿ ಆರೋಪಿ ಪರ ಯಾವ ಜಾಮೀನು ಅರ್ಜಿಯೂ ಸಲ್ಲಿಕೆ ಆಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !