ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದದಲ್ಲಿ ಮೇಯರ್‌ ಸ್ಥಾನದ ಆಕಾಂಕ್ಷಿ ಮೀಸಲು

Last Updated 25 ಜನವರಿ 2020, 12:12 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರ ಪಾಲಿಕೆಯ ಮೇಯರ್ ಸ್ಥಾನದಸಂಭವನೀಯ ಅಭ್ಯರ್ಥಿಬಿಜೆಪಿ ಸದಸ್ಯೆ ಅನಿತಾ ರವಿಶಂಕರ್‌ ಅವರಜಾತಿ ದೃಢೀಕರಣ ಪತ್ರ ಪರಿಶೀಲಿಸುವಂತೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ.

ಅನಿತಾ ರವಿಶಂಕರ್ ಅವರು ಶಿವಮೊಗ್ಗ ತಹಶೀಲ್ದಾರ್ ಕಛೇರಿಯಿಂದ ಜಾತಿ ದೃಢೀಕರಣ ಪತ್ರ ಪಡೆಯುವ ಸಲುವಾಗಿ ನೀಡಿದ ಅಫಿಡವಿಟ್‌ನಲ್ಲಿ ಅವರ ಕುಟುಂಬದ ಯಾವುದೇ ಸದಸ್ಯರಿಗೂ ಆಸ್ತಿ, ಜಮೀನು ಇಲ್ಲ ಎಂದು ಘೋಷಿಸಿದ್ದಾರೆ. ಆದರೆ ಚುನಾವಣಾ ಆಯೋಗಕ್ಕೆ ನೀಡಿದ ಪ್ರಮಾಣ ಪತ್ರದಲ್ಲಿ ಜಮೀನು, ಮೂರು ಕಾರು ಮತ್ತು ಇತರೆ ವಾಹನಗಳು, ಆಸ್ತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ, ಅವರು ಜಾತಿ ದೃಢೀಕರಣ ಪತ್ರಕ್ಕೆ ಅರ್ಹರೇ ಎಂಬ ಸಂಶಯ ಮೂಡಿದೆ ಎಂದು ಮೇಯರ್ ಸ್ಥಾನದ ಆಕಾಂಕ್ಷಿ,ಕಾಂಗ್ರೆಸ್ ಸದಸ್ಯೆ ಯಮನಾ ರಂಗೇಗೌಡಶನಿವಾರಪತ್ರಿಕಾಗೋಷ್ಠಿಯಲ್ಲಿಅನುಮಾನ ವ್ಯಕ್ತಪಡಿಸಿದರು.

ಶಿವಮೊಗ್ಗ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಅನಿತಾ ಅವರ ಜಾತಿ ದೃಢೀಕರಣ ಪತ್ರದ ಪರಿಶೀಲನೆ ನಡೆಸುವಂತೆ ಪ್ರಕರಣ ದಾಖಲಾಗಿದೆ. ಅವರು ಪ್ರಮಾಣ ಪತ್ರದಲ್ಲಿ ನೀಡಿರುವ ಹೇಳಿಕೆ, ಆದಾಯ ತೆರಿಗೆ ಪಾವತಿ ದಾಖಲೆ ಪರಿಶೀಲಿಸಬೇಕು. ಬಿಸಿಎಂ (ಬಿ) ಜಾತಿ ದೃಢೀಕರಣ ಸಿಂಧುತ್ವದ ಕುರಿತು ಸಮಗ್ರವಾಗಿ ಪರಿಶೀಲಿಸಬೇಕು ಎಂದುಒತ್ತಾಯಿಸಿದರು.

ಉಪ ವಿಭಾಗಾಧಿಕಾರಿ ನ್ಯಾಯಾಲಯ ನ್ಯಾಯ ದೊರಕಿಸಬೇಕು.ಇಲ್ಲದಿದ್ದರೆರಾಜ್ಯ ಚುನಾವಣಾ ಆಯೋಗ, ಪ್ರಾದೇಶಿಕ ಆಯುಕ್ತರು,ಹೈಕೋರ್ಟ್‌ನಲ್ಲಿ ಪ್ರಕರಣದಾಖಲಿಸಲಾಗುವುದು. ಪಾಲಿಕೆ ಸದಸ್ಯತ್ವ ರದ್ದುಪಡಿಸಲು ಒತ್ತಾಯಿಸಲಾಗುವುದು. ಅಲ್ಲಿಯವರೆಗೂ ಮೇಯರ್ ಚುನಾವಣೆಯನ್ನು ಮುಂದೂಡಬೇಕು ಎಂದುಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ರೇಖಾ ಕೆ.ರಂಗನಾಥ್, ಮಂಜುಳಾ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಎಂ.ಕವಿತಾ, ಸೌಗಂಧಿಕಾ, ಸೆಲ್ವಿನ್ ಮಾರ್ಟಿಸ್,ಗೀತಾ, ರೇಷ್ಮಾ,ಚಂದ್ರಕಲಾಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT