ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಇಂಡಿಯನ್ಸ್‌ಗೆ ‘ಹ್ಯಾಟ್ರಿಕ್’ ಸೋಲು

ಜೇಸನ್ ರಾಯ್ ಸ್ಫೋಟಕ ಬ್ಯಾಟಿಂಗ್‌: ಸವಾಲಿನ ಮತ್ತ ಬೆನ್ನತ್ತಿ ಗೆದ್ದ ಡೆಲ್ಲಿ ಡೇರ್ ಡೆವಿಲ್ಸ್
Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮುಂಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ  ಐಪಿಎಲ್‌ ಟೂರ್ನಿಯಲ್ಲಿ ಮತ್ತೆ ಮುಗ್ಗರಿಸಿದೆ. 11ನೇ ಆವೃತ್ತಿಯ ಆರಂಭದಲ್ಲೇ ಸೋಲಿನ ಬಲೆಗೆ ಬಿದ್ದಿದ್ದ ಈ ತಂಡ ನಿರಂತರ ಮೂರನೇ ಸೋಲು ಕಂಡಿತು.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್ ತಂಡ ಏಳು ವಿಕೆಟ್‌ಗಳಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿತು. ಈ ಮೂಲಕ ಈ ಬಾರಿಯ ಆವೃತ್ತಿಯಲ್ಲಿ ಮೊದಲ ಗೆಲುವು ಸಾಧಿಸಿತು.

195 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಜೇಸನ್ ರಾಯ್‌ (ಅಜೇಯ 91, 53 ಎ, 6 ಸಿ, 6 ಬೌಂ) ಮತ್ತು ಗೌತಮ್ ಗಂಭೀರ್‌ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ ಐದು ಓವರ್‌ಗಳಲ್ಲಿ 50 ರನ್ ಸೇರಿಸಿದರು. ಗೌತಮ್ ಔಟಾದ ನಂತರ ರಿಷಭ್ ಪಂತ್‌ ಸ್ಫೋಟಿಸಿದರು.

25 ಎಸೆತಗಳಲ್ಲಿ 47 ರನ್‌ ಗಳಿಸಿದ ಅವರು ಎರಡು ಸಿಕ್ಸರ್ ಮತ್ತು ಆರು ಬೌಂಡರಿ ಸಿಡಿಸಿದರು. ಕೊನೆಯ ಓವರ್‌ಗಳಲ್ಲಿ ಒತ್ತಡ ಮೆಟ್ಟಿ ನಿಂತ ಶ್ರೇಯಸ್ ಅಯ್ಯರ್‌ ಅವರು ಜೇಸನ್ ರಾಯ್‌ ಜೊತೆಗೂಡಿ ತಂಡಕ್ಕೆ ರೋಚಕ ಜಯ ಗಳಿಸಿಕೊಟ್ಟರು.

ಮಧ್ಯಮ ಕ್ರಮಾಂಕದ ಪತನ
ಟಾಸ್ ಸೋತು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡಕ್ಕೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ಒದಗಿಸಿದರು. ಸೂರ್ಯಕುಮಾರ್ ಯಾದವ್‌ 53 (32ಎ; 1 ಸಿ, 7 ಬೌಂ) ರನ್‌ ಗಳಿಸಿದರೆ ಲೂಯಿಸ್‌ ಮತ್ತು ಈಶಾನ್ ಕಿಶನ್ ತಲಾ 48 ಮತ್ತು 44 ರನ್ ಗಳಿಸಿದರು. ಒಂದು ಹಂತದಲ್ಲಿ ತಂಡ 200 ರನ್‌ಗಳ ಗಡಿ ದಾಟುವ ಭರವಸೆ ಮೂಡಿತ್ತು. ಆದರೆ ನಾಯಕ ರೋಹಿತ್ ಶರ್ಮಾ ಹಾಗೂ ಮಧ್ಯಮ ಕ್ರಮಾಂಕದ ಆಟಗಾರರು ವೈಫಲ್ಯ ಆನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT