ರಾಮದೇವರ ಬೆಟ್ಟದ ದಾರಿ ಸ್ವಚ್ಛತೆ

7

ರಾಮದೇವರ ಬೆಟ್ಟದ ದಾರಿ ಸ್ವಚ್ಛತೆ

Published:
Updated:
Deccan Herald

ಕಸಬಾ(ರಾಮನಗರ): ಮೊದಲನೆಯ ಶ್ರಾವಣ ಶನಿವಾರದ ಅಂಗವಾಗಿ ಹಳ್ಳಿಮಾಳದ ಗ್ರಾಮಸ್ಥರು ರಾಮದೇವರ ಬೆಟ್ಟಕ್ಕೆ ತೆರಳುವ ದಾರಿಯನ್ನು ಶನಿವಾರ ಸ್ವಚ್ಛಗೊಳಿಸಿದರು.

ರಾಮದೇವರ ಬೆಟ್ಟಕ್ಕೆ ಹಳ್ಳಿಮಾಳದ ಮೂಲಕವು ತೆರಳಬಹುದು. ಶ್ರಾವಣ ಮಾಸದಲ್ಲಿ ಕಸಬಾ ಹೋಬಳಿಯ ಹಲವು ಗ್ರಾಮಗಳ ಜನರು ಈ ರಸ್ತೆಯ ಮೂಲಕವೆ ಹೋಗಿ ಬರುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ಈ ರಸ್ತೆಯನ್ನು ಬಳಸುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದರು.

ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಈ ಬೆಟ್ಟದ ರಸ್ತೆಯನ್ನು ಸ್ವಚ್ಛಗೊಳಿಸುತ್ತಿದ್ದೇವೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಪ್ರತಿ ವರ್ಷವೂ ಈ ರೀತಿಯ ಸ್ವಚ್ಛತಾ ಕಾರ್ಯಕ್ರಮವನ್ನು ಗ್ರಾಮದ ಎಲ್ಲಾ ಜನರು ಹಮ್ಮಿಕೊಳ್ಳುತ್ತೇವೆ ಎಂದರು.

ಹಲವರಿಗೆ ಈ ರಸ್ತೆ ಇರುವುದು ಗೊತ್ತಿಲ್ಲ. ನಗರದ ಮೂಲಕವು ಬೆಟ್ಟಕ್ಕೆ ಹೋಗಬಹುದು. ಆದರೆ ಅದು ತುಂಬಾ ದೂರವಾಗುತ್ತದೆ ಎಂದು ಅವರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !