ಶನಿವಾರ, ಡಿಸೆಂಬರ್ 7, 2019
25 °C

ಅನ್ಯಾಯದ ವಿರುದ್ಧ ಶಾಂತಿಯುತ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಾಗಡಿ: ಪಕ್ಷ ಸಂಘಟನೆಯ ಮೂಲಕ ಯುವಜನರಲ್ಲಿ ಅನ್ಯಾಯದ ವಿರುದ್ಧ ಶಾಂತಿಯುತ ಹೋರಾಟದ ಮನೋಭಾವನೆ ಬೆಳೆಸಲಾಗುವುದು ಎಂದು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ  (ಎಸ್‌ಡಿಪಿಐ) ರಾಜ್ಯ ಸಮಿತಿ ಕಾರ್ಯದರ್ಶಿ ಫಾರೂಕ್‌ ತಿಳಿಸಿದರು.

ಪಟ್ಟಣದ ಹಳೆಮಸೀದಿ ಮೊಹಲ್ಲಾದಲ್ಲಿ ಸೋಮವಾರ ನಡೆದ ಪಕ್ಷದ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಂವಿಧಾನದತ್ತ ಆಶಯಗಳನ್ನು ಅಳವಡಿಸಿಕೊಂಡು ಸವಲತ್ತು ಪಡೆಯುವುದರ ಜತೆಗೆ ರಾಜಕೀಯ ಪ್ರಜ್ಞೆಯನ್ನು ಪಕ್ಷದ ಸದಸ್ಯತ್ವ ಸ್ವೀಕರಿಸಿದ ಕಾರ್ಯಕರ್ತರಲ್ಲಿ ಬೆಳೆಸಲಾಗುವುದು. ಮಹಿಳೆಯರೂ ಪಕ್ಷದ ಸದಸ್ಯತ್ವ ಪಡೆಯಬಹುದು ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಬಾಜ್‌ ಮಾತನಾಡಿ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಯುವಕರು ನಿರುದ್ಯೋಗಿಗಳಿದ್ದಾರೆ. ಸರ್ಕಾರಗಳು ಈ ಸಮುದಾಯದವರಿಗೆ ಸೂಕ್ತ ಸವಲತ್ತುಗಳನ್ನು ನೀಡದೆ ವಂಚಿಸುತ್ತಿದೆ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಅನ್ಸರ್‌ ಪಾಷಾ, ಉಪಾಧ್ಯಕ್ಷ ಸೈಯದ್ ತಾಜೀಮ್‌, ಜಿಲ್ಲಾ ಘಟಕದ ಉಪಾಧ್ಯಕ್ಷ ಅಪ್ರೋಜ್‌, ಜಾಮೀಯ ಮಸೀದಿ ಮುಖಂಡ ನಜೀರ್‌ ಸಾಬ್‌, ಅಪ್ಸಲ್‌ ಪಾಷಾ ಮಾತನಾಡಿದರು. ಪಕ್ಷದ ಕಾರ್ಯಕರ್ತರು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು