ಗಿರಿಜನರು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲಿ: ಡಾ.ಸಿ.ಆರ್.ರವಿಶಂಕರ್

7

ಗಿರಿಜನರು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲಿ: ಡಾ.ಸಿ.ಆರ್.ರವಿಶಂಕರ್

Published:
Updated:
Deccan Herald

ಕಸಬಾ (ಕನಕಪುರ): ಸಾಮಾಜಿಕವಾಗಿ ಹಿಂದುಳಿದಿರುವ ಗಿರಿಜನರು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಗಿರಿಜನ ಕಲ್ಯಾಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೃಷಿ ಉಪಕರಣ ಮತ್ತು ಬಿತ್ತನೆ ಬೀಜ ಉಚಿತವಾಗಿ ನೀಡಲಾಗುತ್ತಿದೆ. ಅದನ್ನು ಸರಿಯಾಗಿ ಬಳಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆಯಬೇಕೆಂದು ಮಂಡ್ಯ ವಿ.ಸಿ.ಫಾರಂನ ಮುಖ್ಯಸ್ಥ ಡಾ.ಸಿ.ಆರ್.ರವಿಶಂಕರ್ ಸಲಹೆ ನೀಡಿದರು.

ತಾಲ್ಲೂಕಿನ ಇರುಳಿಗರ ಕಾಲೊನಿ, ಗಿರಿಜನ ತಾಂಡಗಳ ರೈತರುಗಳಿಗೆ ವೈಜ್ಞಾನಿಕವಾಗಿ ತಯಾರು ಮಾಡಿರುವ ಕೂರಿಗೆ, ಕುಡುಗೋಲು, ಬಿತ್ತನೆ ರಾಗಿ, ರಸಗೊಬ್ಬರ ವಿತರಣೆ ಮಾಡಿ ಅವರು ಮಾತನಾಡಿದರು.

ಹಿಂದಿನ ಕಾಲದ ಕೃಷಿಗೂ ಇಂದಿನ ಕೃಷಿಗೂ ಸಾಕಷ್ಟು ಬದಲಾವಣೆ ಇದೆ. ಇಂದಿನ ಮಳೆಗಾಲಕ್ಕೆ ಅನುಸಾರವಾಗಿ ವೈಜ್ಞಾನಿಕವಾಗಿ ಕೃಷಿ ಮಾಡಬೇಕಿದೆ. ಈ ಭಾಗದ ರೈತರು ಶ್ರಮ ಜೀವಿಗಳಾಗಿದ್ದು ಕೃಷಿ ಭೂಮಿ ಉತ್ತಮವಾಗಿ ಹದಗೊಳಿಸಿ ಬಿತ್ತನೆ ಮಾಡಿದ್ದಾರೆ ಎಂದರು.

ಪ್ರಗತಿಪರ ರೈತ ಎಚ್‌.ಕೆ.ಕುರಿತಮ್ಮಯ್ಯ ಮಾತನಾಡಿ, ಕಾಡು ಆಶ್ರಯಿಸಿ ಬದುಕುತ್ತಿದ್ದ ಗಿರಿಜನರಿಗೆ ಸಂಸದ ಡಿ.ಕೆ.ಸುರೇಶ್‌ ಅವರು ಪ್ರತಿ ಕುಟುಂಬ ಒಂದು ಕಡೆ ನೆಲೆಸಿ ಕೃಷಿ ಮಾಡಲು ಅನುಕೂಲವಾಗುವಂತೆ ಭೂಮಿ ಮಂಜೂರು ಮಾಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಭೂಮಿ ಪಡೆದಿರುವ ರೈತರು ಹಳೆ ಪದ್ಧತಿ ಬಿಟ್ಟು ವೈಜ್ಞಾನಿಕವಾಗಿ ಹೊಸ ಸಂಶೋಧನೆ ಮಾಡಿರುವ ಕೃಷಿ ಪದ್ಧತಿ ಮತ್ತು ವೈಜ್ಞಾನಿಕ ಕೃಷಿ ಉಪಕರಣ ಬಳಕೆ ಮಾಡಬೇಕೆಂದು
ಸಲಹೆ ನೀಡಿದರು.

ಫೌಂಡೇಶನ್‌ ಸೀಡ್ಸ್‌ ವತಿಯಿಂದ ಸುಮಾರು 80 ಕುಟುಂಬಗಳಿಗೆ ತಲಾ 10 ಕೆ.ಜಿ.ಬಿತ್ತನೆ ರಾಗಿ, 2ಮೂಟೆ ರಸಗೊಬ್ಬರ, ಒಂದು ಕೂರಿಗೆ, ಟಾರ್‌ಪಾಲ್‌ ಮತ್ತು ಕುಡುಗೋಲು ವಿತರಣೆ ಮಾಡಲಾಯಿತು.

ಕೇಂದ್ರ ಪರಿಶೀಲನಾ ತಂಡದ ಡಾ.ಪಾಟ್ರೋ, ಡಾ.ನಿಗಡೆ ಮತ್ತು ಡಾ. ಪ್ರಭುಗಾಣಿಗಾರ್‌, ಕಿರಿಯ ರೋಗ ತಜ್ಞ ಡಾ.ರವೀಂದ್ರ ಎಚ್‌.ಆರ್‌ ಸೇರಿದಂತೆ ಗ್ರಾಮದ ರೈತ ಮುಖಂಡರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !