ಶುಕ್ರವಾರ, ನವೆಂಬರ್ 22, 2019
27 °C

ಪೊಲಿಸ್‌ ಠಾಣೆಗೆ ಬಂದ ಕೆರೆ ಹಾವು

Published:
Updated:

ಶಿವಮೊಗ್ಗ: ಜಯನಗರ ಪೊಲೀಸ್ ಠಾಣೆಗೆ ಶನಿವಾರ ಹಾವು ನುಗ್ಗಿ ಸ್ವಲ್ಪ ಸಮಯ ಆತಂಕದ ವಾತಾವರಣ ಸೃಷ್ಟಿಸಿತ್ತು.

ಜೆರಾಕ್ಸ್ ಮಿಷಿನ್ ಬಳಿ ಇದ್ದ ಹಾವು ಕಂಡು ಗಾಬರಿಯಾದ ಪೊಲೀಸರು ಸ್ನೇಕ್ ಕಿರಣ್‌ಗೆ ಕರೆ ಮಾಡಿದರು. ನಂತರ ಕಿರಣ್ ಹಾವು ಹಿಡಿದು ಕಾಡಿಗೆ ಬಿಟ್ಟು ಬಂದರು.

ಅದು 3 ಅಡಿ ಉದ್ದದ ಕೆರೆ ಹಾವು. ಜಯನಗರ ಠಾಣೆ ಸುತ್ತಮುತ್ತ ಇಲಿಗಳು ಜಾಸ್ತಿ ಇವೆ. ಇಲಿ ತಿನ್ನುವ ಸಲುವಾಗಿ ಹಾವು ಠಾಣೆ ಪ್ರವೇಶಿಸಿದೆ ಎಂದು ಕಿರಣ್‌ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)