ಇಂದಿನಿಂದ ಅಂಚೆಚೀಟಿ ಪ್ರದರ್ಶನ ಆರಂಭ

7

ಇಂದಿನಿಂದ ಅಂಚೆಚೀಟಿ ಪ್ರದರ್ಶನ ಆರಂಭ

Published:
Updated:

ಶಿವಮೊಗ್ಗ: ಅಂಚೆ ಇಲಾಖೆ ಸೇಕ್ರೆಡ್‌ ಹಾರ್ಟ್‌ ಚರ್ಚ್ ಆವರಣದ ಸ್ನೇಹ ಭವನದಲ್ಲಿ ಡಿ. 7ರಿಂದ 9ರವರೆಗೆ ಮೂರು ದಿನಗಳು ಜಿಲ್ಲಾಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ‘ಶಿಮೊಪೆಕ್ಸ್-2018’ ಆಯೋಜಿಸಿದೆ.

14 ವರ್ಷಗಳ ನಂತರ ಶಿವಮೊಗ್ಗದಲ್ಲಿ ಈ ಅಂಚೆ ಚೀಟಿ ಸಂಗ್ರಹ ಪ್ರದರ್ಶನ ನಡೆಯುತ್ತಿದೆ. ಡಿ.7ರ ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಪ್ರದರ್ಶನ ಉದ್ಘಾಟಿಸುವರು. ವಲಯ ಪೋಸ್ಟ್‌ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು. ಮೇಯರ್ ಲತಾ ಗಣೇಶ್ ಉಪಸ್ಥಿತರಿರುವರು. ಆ ದಿನ ಸುಮಾರು 7 ವಿವಿಧ ಸಂಸ್ಥೆಗಳು ವಿಶೇಷ ಕವರ್ಸ್ ಬಿಡುಗಡೆ ಮಾಡಲಿದ್ದಾರೆ ಎಂದು ಅಂಚೆ ಇಲಾಖೆ ಅಧಿಕಾರಿ ಪ್ರಕಾಶ್ ರಾವ್ ಮಾಹಿತಿ ನೀಡಿದರು.

ಡಿ. 8ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ, ಬೆಂಗಳೂರಿನ ಅಂಚೆ ಇಲಾಖೆ ಅಧಿಕಾರಿ ಜಿ. ನಟರಾಜನ್ ಭಾಗವಹಿಸಲಿದ್ದಾರೆ. ಆ ದಿನವೂ ಕೂಡ ಸುಮಾರು 6 ಕವರ್ಸ್‌ ಬಿಡುಗಡೆ ಮಾಡಲಾಗುವುದು ಎಂದರು.

ಡಿ. 9ರಂದು ಕರ್ನಾಟಕ ವೃತ್ತದ ಚೀಫ್ ಪೋಸ್ಟ್‌ಮಾಸ್ಟರ್ ಡಾ.ಲೋಬೊ ಭಾಗವಹಿಸುವರು. ಆ ದಿನವೂ 7 ವಿಶೇಷ ಕವರ್ಸ್‌ ಬಿಡುಗಡೆ ಮಾಡಲಾಗುವುದು. ಮೂರು ದಿನಗಳಲ್ಲಿ ಒಟ್ಟು 20 ಕವರ್ಸ್‌ ಬಿಡುಗಡೆ ಮಾಡಲಾಗುವುದು. ಇದೊಂದು ದಾಖಲೆ ಎಂದು ಬಣ್ಣಿಸಿದರು.

ಹೊಯ್ಸಳ ಕರ್ನಾಟಕ ಪತ್ತಿನ ಸಹಕಾರ ಸಂಘ, ಕರ್ನಾಟಕ ಸಂಘ, ಪಿಇಎಸ್, ಆಗುಂಬೆ ಸೆಟ್, ಕಾಳಿಂಗ ಫೌಂಡೇಷನ್, ಸೀತಾರಾಮಾಂಜನೇಯ ದೇವಸ್ಥಾನ, ಪೇಸ್ ಕಾಲೇಜು, ಸಾಗರದ ಅಡಿಕೆ ಮಂಡಿ, ಸಹ್ಯಾದ್ರಿ ರಂಗತರಂಗ, ಬಿ.ಆರ್.ಪಿ, ನೀನಾಸಂ, ಈಸೂರು ರೆಬಿಲಿಯನ್ ಬಿಡುಗಡೆಯಾಗಲಿರುವ ಕವರ್ಸ್‌ ಎಂದು ಮಾಹಿತಿ ನೀಡಿದರು.

ಶಾಲಾ ಮಕ್ಕಳಿಗಾಗಿ ವಿವಿಧ ರೀತಿಯ ಸ್ಪರ್ಧೆ ಏರ್ಪಡಿಸಲಾಗಿದೆ. ಭಾಷಣ, ಚಿತ್ರಕಲೆ, ಕ್ವಿಜ್ ನಾಲ್ಕು ವಿಭಾಗಗಳಲ್ಲಿ ನಡೆಯುತ್ತವೆ. ಅಂಚೆ ಇಲಾಖೆ ವಿವಿಧ ರೀತಿಯ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ. ಈ ಪ್ರದರ್ಶನದಲ್ಲಿ ವೈವಿಧ್ಯಮಯ ಅಂಚೆಚೀಟಿ ನೋಡಬಹುದು ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಅಂಚೆ ಇಲಾಖೆಯ ನವೀನ್ ಚಂದರ್, ಶ್ರೀನಿವಾಸ್, ಕೆ.ಆರ್. ಉಷಾ, ಶಶಿಧರ್, ಶಿವಮೂರ್ತಿ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !