ಸಂಸಾರ ಎಂಬ ಗೊಂದಲದ ಗೂಡು

7

ಸಂಸಾರ ಎಂಬ ಗೊಂದಲದ ಗೂಡು

Published:
Updated:

ನಮ್ಮಲ್ಲಿ ಏನೆಲ್ಲಾ ಇದೆ ಎಂಬುದು ಮಹತ್ವದ್ದಲ್ಲ. ನಾವು ಅದನ್ನು ಎಷ್ಟು ಅನುಭವಿಸುತ್ತೇವೆ ಎಂಬುದು ಮಹತ್ವದ್ದು. ನಮ್ಮಲ್ಲಿ ಕೋಟ್ಯಂತರ ಬೆಲೆಯ ಚಿತ್ರಗಳಿವೆ. ಅವು ಅದ್ವಿತಿಯ ಕಲಾಕೃತಿಗಳು. ಆದರೆ ಏನು ಮಾಡುವುದು. ಒಮ್ಮೆಯೂ ತೆರೆದಿಲ್ಲ... ನೋಡಿಲ್ಲ... ಅನುಭವಿಸಿಲ್ಲ... ಆನಂದ ಪಟ್ಟಿಲ್ಲ. ಎಲ್ಲವೂ ಪೆಟ್ಟಿಗೆಯಲ್ಲಿ ಮುಚ್ಚಿಕೊಂಡು ಸುರಕ್ಷಿತವಾಗಿ ಕುಳಿತಿವೆ. ಮನೆಯಲ್ಲಿ ಹಾಲುಗಲ್ಲದ ಒಂದು ಮುದ್ದಾದ ಮಗು ಇದೆ. ಅದಕ್ಕೆ ಎಲ್ಲ ಅಲಂಕಾರವನ್ನೂ ಮಾಡಲಾಗಿದೆ. ಅದು ಹೊರಗೆ ಆಡಲು ಹೋಗಬೇಕೆನ್ನುತ್ತದೆ. ಅಲಂಕಾರ ಕೆಟ್ಟಿತು ಎಂಬ ಭಯದಲ್ಲಿ ಅದನ್ನು ಕೋಣೆಯೊಂದರಲ್ಲಿ ಕೂಡಿ ಹಾಕಲಾಗಿದೆ. ಅದಕ್ಕೂ ಸುಖವಿಲ್ಲ. ಅದನ್ನು ನೋಡದ ಜಗತ್ತಿಗೂ ಆನಂದವಿಲ್ಲ. ಇಂಥ ಬದುಕು ಬೇಕೇ ?

ಗಂಗಾ, ಯಮುನಾ, ಕೃಷ್ಣಾ, ಕಾವೇರಿಯಂಥ ನದಿಗಳು ಇಲ್ಲಿ ಹರಿಯುತ್ತವೆ. ಹಗಲೆಲ್ಲ ಸೂರ್ಯ ಬೆಳಗುತ್ತಾನೆ. ರಾತ್ರಿಯೆಲ್ಲಾ ನಕ್ಷತ್ರಗಳ ಹೊಳಹು. ಕಣ್ಣು ಬಿಟ್ಟರೆ ಸುಂದರ ಮರ-ಗಿಡ-ಬಳ್ಳಿ-ಹೂಗಳು. ಏನಿದೆ ಈ ಜಗತ್ತಿನಲ್ಲಿ ಎಂದು ಕಣ್ಣು ಮುಚ್ಚಿ ದೂರಿದರೆ ಅನುಭವಿಸುವುದು ಹೇಗೆ ? ಎಲ್ಲವನ್ನೂ ನೋಡಬೇಕು. ಮನಸಾರೆ ಅನುಭವಿಸಿ ಆನಂದಿಸಬೇಕು. ಅದರಿಂದ ನಮ್ಮ ಬದುಕು ಶ್ರೀಮಂತವಾಗುತ್ತದೆ ಹಾಗು ಜಗತ್ತಿನ ಸೌಂದರ್ಯವೂ ಹೆಚ್ಚುತ್ತದೆ.

ಎಲ್ಲವೂ ನಾವು ಬಯಸಿದಂತೆ ಹೇಗಿರುತ್ತದೆ ? ನಮಗೆ ಬೇಕಾದದ್ದು ಬೇಡವಾದದ್ದು ಎಲ್ಲವೂ ಇರುತ್ತವೆ. ಮನೆಯಲ್ಲಿ ಹಿರಿಯರು-ಕಿರಿಯರು, ಅತ್ತೆ-ಸೊಸೆ, ಹಳಬರು-ಹೊಸಬರು.. ಎಲ್ಲರೂ ಇರುತ್ತಾರೆ. ಎಲ್ಲರ ಬೇಕು-ಬೇಡಗಳು ಭಿನ್ನವಾಗಿರುತ್ತವೆ. ಹೀಗಾಗಿ ಸಂಸಾರ ಎಂಬುದು ಗೊಂದಲದ ಗೂಡು ಎನಿಸುತ್ತದೆ. ಸಂಸಾರದ ದಂದುಗ ಹಿಂಗುವುದು ಎಂದು ? ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ ಬಸವಣ್ಣ ತಮ್ಮ ವಚನದಲ್ಲಿಯೇ ಅದಕ್ಕೆ ಉತ್ತರವನ್ನೂ ಕೊಡುತ್ತಾರೆ. ಇದನ್ನು (ಸಂಸಾರವನ್ನು) ನೆಚ್ಚಿ ಕೆಡಬೇಡ, ಕೂಡಲಸಂಗಮದೇವನ ಪೂಜಿಸಿ ಪರಮ ಸುಖ ಪಡೆ ಎನ್ನುತ್ತಾರೆ.

ರಾಮಾಯಣ ಕಾಲದಲ್ಲಿ ರಾವಣ ಒಬ್ಬನೇ ಇದ್ದ. ಅದೂ ದೂರದ ಲಂಕೆಯಲ್ಲಿ. ಇಂದು ರಾವಣರ ಸಂಖ್ಯೆ ಹೆಚ್ಚಾಗಿದೆ. ಅವರು ಎಲ್ಲೆಲ್ಲೂ ಇದ್ದಾರೆ. ಹೀಗಾಗಿ ಬದುಕು ಹೆಚ್ಚು ಗೊಂದಲಮಯವಾಗಿದೆ. ಇಂದು ದೇವರ ನೆನೆಯುದು, ಒಳ್ಳೆಯದನ್ನು ಪ್ರೋತ್ಸಾಹಿಸುವುದು ಹೆಚ್ಚು ಅವಶ್ಯಕ.

ಸಂಗ್ರಹ: ಸುಭಾಸ ಯಾದವಾಡ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !