ಅನುಭಾವದ ಮಾತು ಆಲಿಸಿ; ಸುಖಿ ಜೀವನ ನಡೆಸಿ

7

ಅನುಭಾವದ ಮಾತು ಆಲಿಸಿ; ಸುಖಿ ಜೀವನ ನಡೆಸಿ

Published:
Updated:

12ನೇ ಶತಮಾನದಲ್ಲಿನ ಕಲ್ಯಾಣದ ಅನುಭವ ಮಂಟಪದಲ್ಲಿ ಶರಣರ ಮಾತುಗಳು ಅಂತರಂಗದ ಅನುಭಾವದ ಮಾತುಗಳಾಗಿದ್ದವು. ಅನುಭಾವ ಎಂಬುದು ಒಂದು ಆತ್ಮ ವಿದ್ಯೆ. ತಾನು ಯಾರು ಎಂಬುದನ್ನು ತಿಳಿಯುವುದಾಗಿದೆ. ನಮ್ಮನ್ನು ನಾವು ಅರಿತುಕೊಳ್ಳುವ ವಿದ್ಯೆ ತಿಳಿದುಕೊಳ್ಳಬೇಕು. ತನುವಿನಲ್ಲಿ ತೊಂದರೆಯಾದಾಗ ಅನುಭಾವ ಪ್ರೇಮ ಉಂಟು ಮಾಡಿದರೆ ಹಸನ್ಮುಖಿಯಾಗಲು ಸಾಧ್ಯ.

ಪಂಡಿತರು, ಜ್ಞಾನಿಗಳು, ಅನುಭಾವಿಗಳ ನಡುವೆ ವ್ಯತ್ಯಾಸವಿದೆ. ಜ್ಞಾನಿಗಳ ಮಾತೇ ಅನುಭಾವದ ಮಾತು. ಇಂದು ನಾವೆಲ್ಲರೂ ಇಂದ್ರೀಯ ಸುಖದ ಕಡೆಗೆ ಗಮನ ಕೊಟ್ಟಿದ್ದರಿಂದ ನಮ್ಮೆಲ್ಲರ ಆತ್ಮ ನಾಶವಾಗುತ್ತಿದೆ. ಕೆಲ ಸಂದರ್ಭದಲ್ಲಿ ಕ್ರಿಯೆ ಇಲ್ಲದೇ ಆತ್ಮ ನಿಷ್ಕ್ರಿಯವಾಗುತ್ತಿದೆ. ನಾವೆಲ್ಲರೂ ಮೂಲಭೂತವಾಗಿ ಜ್ಞಾನ ಭಾವದ ಶುದ್ಧ ಮಾತು ಕೇಳಬೇಕು.

ಪುಸ್ತಕ ಮುಖ್ಯವಲ್ಲ. ಅದರಲ್ಲಿರುವ ಅಕ್ಷರ ಮುಖ್ಯ. ಮನುಷ್ಯ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಅನುಭಾವದ ಮಾತುಗಳನ್ನು ಕೇಳಿ ಸುಖಿ ಜೀವನ ನಡೆಸಬೇಕು. ಕಷ್ಟ ಬಂದಾಗ ಸಾವಿನ ಕಡೆ ಮುಖ ಮಾಡುವುದು ಸರಿಯಲ್ಲ. ಅಕ್ಕಮಹಾದೇವಿ ಅಧ್ಮಾತ್ಮದ ಮಹತ್ವ ಅರಿತುಕೊಂಡು ಅದನ್ನು ಅನುಭವಿಸಿದಳು. ಜಗತ್ತಿನಲ್ಲಿ ಎಲ್ಲವನ್ನೂ ಗೆಲ್ಲಬೇಕು ಎಂದು ಹೊರಟವರು ಬಹಳ ಜನರಿದ್ದಾರೆ. ಬದುಕನ್ನು ಪರಮಾನಂದವಾಗಿ ಅನುಭವಿಸಬೇಕು. ನಮ್ಮನ್ನು ನಾವು ಅರಿಯಲು ಲಿಂಗ ಬೇಕು.

ವಚನಗಳು ನಮಗೆ ದಾರಿದೀಪವಾಗಿವೆ. ವಚನ ಎಂದರೆ ವಚಿಸುವುದು, ಚಲಿಸುವುದು, ನಯನಿಸುವುದು. ವಚನಗಳಿಂದ ತಿಳಿದುಕೊಂಡ ಜ್ಞಾನವನ್ನು ಇನ್ನೊಬ್ಬರಿಗೆ ಅನುಭಾವದ ರೀತಿಯಲ್ಲಿ ತಿಳಿಸಬೇಕು. ವಚನಗಳಲ್ಲಿನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕಾಲ್ಪನಿಕ ಪುರಾಣಗಳಿಂದ ಮನುಷ್ಯ ಅಭಿವೃದ್ಧಿ ಹೊಂದಲಾರ.

ಸಂಗ್ರಹ: ಪ್ರಕಾಶ ಎನ್‌.ಮಸಬಿನಾಳ

ಬಸವನಬಾಗೇವಾಡಿಯಲ್ಲಿ ನಡೆಯುತ್ತಿರುವ ಪ್ರವಚನ ಮುಕ್ತಾಯವಾಯಿತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !