19ಕ್ಕೆ ಚಲನಚಿತ್ರಗೀತೆಗಳ ಗಾಯನ

7

19ಕ್ಕೆ ಚಲನಚಿತ್ರಗೀತೆಗಳ ಗಾಯನ

Published:
Updated:

ಶಿವಮೊಗ್ಗ: ನಗರದ ಅಂಬೇಡ್ಕರ್ ಭವನದಲ್ಲಿ ಆ.19ರ ಸಂಜೆ 6ಕ್ಕೆ ಶಿವಮೊಗ್ಗ ಸಾಂಸ್ಕೃತಿಕ ರಾಯಭಾರಿ ಎಂ. ಭಾರದ್ವಾಜ್ ಅವರ 85ನೇ ಹುಟ್ಟುಹಬ್ಬದ ವರ್ಷಾಚರಣೆ ಪ್ರಯುಕ್ತ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶ್ರೀಗುರುಗುಹ ವಾಗ್ಗೇಯ ಪ್ರತಿಷ್ಠಾನನ ಟ್ರಸ್ಟ್, ಸೌರಭ, ಕೀರ್ತಿಶೇಷ ಬಿ. ದೊರೆಸ್ವಾಮಿ ಅಯ್ಯಂಗಾರ್ ಫೌಂಡೇಷನ್ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ವೀಣಾ ವಾದಕಿ ಟಿ.ಕೆ. ವೀಣಾವಾರಿಣಿ ನಡೆಸಿಕೊಡಲಿದ್ದಾರೆ, ಇದು ಶಾಸ್ತ್ರೀಯ ಸಂಗೀತ ರಾಗಗಳನ್ನು ಆಧಾರಿಸಿದ ಪ್ರಸಿದ್ಧ ಜನಪ್ರಿಯ ಚಲನಚಿತ್ರ ಗೀತೆಗಳ ಕಾರ್ಯಕ್ರಮ ಎಂದು ಗುರುಗುಹ ಸಂಗೀತ ಕೇಂದ್ರದ ಶೃಂಗೇರಿ ಎಚ್.ಎಸ್. ನಾಗರಾಜ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದೀಪಕ್ ಜಯಶೀಲನ್ ಕೀಬೋರ್ಡ್‌ ಪ್ರಿಯಾ, ಪ್ರವೀಣ್ ಷಣ್ಮುಗ ಅವರು ರಿದಂಪ್ಯಾಟ್, ಜಯಚಂದ್ರಾಚಾರ್ ತಬಲದಲ್ಲಿ ಸಹಕಾರ ನೀಡುವರು. ಗೀತಾಂಜಲಿ ಪ್ರಸನ್ನಕುಮಾರ್ ಕಾರ್ಯಕ್ರಮ ನಿರೂಪಿಸುವರು. ಶ್ರೇಷ್ಠ ಸಂಗೀತ ನಿರ್ದೇಶಕ ಗುಣಸಿಂಗ್, ಟಿ.ಜಿ. ಲಿಂಗಪ್ಪ, ರಾಜನ್ ನಾಗೇಂದ್ರ ,ವಿಜಯಬಾಸ್ಕರ್, ಹಂಸಲೇಖ, ಉಪೇಂದ್ರ ಕುಮಾರ್, ಮನೋಹರ್‌ ಗೀತೆಗಳಿಗೆ ವೀಣಾ ಸಹಕಾರ ನೀಡಿದ್ದಾರೆ ಎಂದರು.

ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಕಾರ್ಯಕ್ರಮ ಉದ್ಘಾಟಿಸುವರು. ಸೌರಭ ಅಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸುವರು. ಪೂರ್ಣಪ್ರಜ್ಞ ಸೇವಾ ಸಮಿತಿ ಅಧ್ಯಕ್ಷ ಕೆ.ಎಲ್. ಉಪಾಧ್ಯಾಯ, ವಿದೂಷಿ ಲತಾ ಮೂರ್ತಿ, ಎಂ.ಭಾರದ್ವಾಜ್ ಉಪಸ್ಥಿತರಿರುವರು ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸುರೇಶ್, ಸ್ವಾಮಿನಾಥ್, ಅನಂತಮೂರ್ತಿ, ಸುಮತೀಂದ್ರ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !