ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13ಕ್ಕೆ ತಾಂತ್ರಿಕ ವಿದ್ಯಾರ್ಥಿಗಳಿಗೆ ತರಬೇತಿ

Last Updated 10 ಅಕ್ಟೋಬರ್ 2018, 10:30 IST
ಅಕ್ಷರ ಗಾತ್ರ

ಶಿವಮೊಗ್ಗ: ಲೈಫ್‌ಟೈಂಅಚೀವ್‌ಮೆಂಟ್ಸಂಸ್ಥೆ ಜೆಎನ್‌ಎನ್‌ಸಿ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಅ. 13ರಂದು ‘ಜಿಲ್ಲಾ ಮಟ್ಟದ ವೃತ್ತಿಪರ ಮಾರ್ಗದರ್ಶನ ಮತ್ತು ಔದ್ಯೋಗಿಕ ಯಶಸ್ಸಿನ ಮಾರ್ಗಗಳು'ವಿಷಯ ಕುರಿತುತರಬೇತಿ ಕಾರ್ಯಾಗಾರ ಆಯೋಜಿಸಿದೆ.

ಶಿವಮೊಗ್ಗ ರೋಟರಿ ಕ್ಲಬ್‌ಹಾಗೂ ಇತರೆ ಸಂಸ್ಥೆಗಳ ಸಹಯೋಗದಲ್ಲಿತಾಂತ್ರಿಕ ವಿದ್ಯಾರ್ಥಿಗಳಿಗಾಗಿಯೇ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಇಂದಿನ ಔದ್ಯೋಗಿಕ ಜಗತ್ತಿನ ಆವಶ್ಯಕತೆಗೆ ತಕ್ಕಂತೆ ತರಬೇತಿ ನೀಡುತ್ತಿದ್ದೇವೆ. ಹಲವುವಿದ್ಯಾರ್ಥಿಗಳು ಪ್ರಯೋಜನ ಪಡೆದು ಉನ್ನತ ಸ್ಥಾನಗಳಿಸಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥ ಚಿದಂಬರ ವಿಷ್ಣು ಜೋಶಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೈಗಾರಿಕಾ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಅನುಭವಿ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಲಿದ್ದಾರೆ.9 ವಿಷಯಗಳಕುರಿತು ಮಾಹಿತಿ ನೀಡುವರು.ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ನಡೆಯುತ್ತದೆ ಎಂದರು.

ಅಂದು ಬೆಳಿಗ್ಗೆ 9ಕ್ಕೆ ಜೆಎನ್‌ಎನ್‌ಸಿಇ ಪ್ರಾಂಶುಪಾಲ ಡಾ.ಮಹದೇವಸ್ವಾಮಿ ಹಾಗೂ ದಿನಕರ್ ಪಾಲಿಟೆಕ್ನಿಕ್ ಕಾಲೇಜುಪ್ರಾಂಶುಪಾಲ ಪ್ರೊ.ಸೋಮಶೇಖರ್ ಕಾರ್ಯಾಗಾರ ಉದ್ಘಾಟಿಸುವರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌: 98450 61149 ಸಂಪರ್ಕಿಸಬಹುದುಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿವಿಧ ರೋಟರಿ ಕ್ಲಬ್‌ ಅಧ್ಯಕ್ಷರಾದಡಾ.ಪರಮೇಶ್ವರ್, ಗಣೇಶ್ ಶೇಟ್, ಶಿವಮೂರ್ತಿ,ಗಣೇಶ್, ಅಶ್ವಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT