8ಕ್ಕೆ ಸಂಸ್ಕೃತಿ ಮಹಿಳಾ ವೇದಿಕೆ ದಶಮಾನೋತ್ಸವ

7

8ಕ್ಕೆ ಸಂಸ್ಕೃತಿ ಮಹಿಳಾ ವೇದಿಕೆ ದಶಮಾನೋತ್ಸವ

Published:
Updated:

ಶಿವಮೊಗ್ಗ: ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀನಾಗ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಜ. 8ರ ಸಂಜೆ 5.30ಕ್ಕೆ ಸಂಸ್ಕೃತಿ ಮಹಿಳಾ ವೇದಿಕೆ ದಶಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ.

2009ರಲ್ಲಿ ಸಂಸ್ಕೃತಿ ಮಹಿಳಾ ವೇದಿಕೆ ಆರಂಭಗೊಂಡಿತ್ತು. ‘ಕ್ರಿಯಾಸಿದ್ಧಿ ಸತ್ವೇ ಭವತಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಹಲವಾರು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಎಂದು ವೇದಿಕೆಯ ಕಾರ್ಯದರ್ಶಿ ಸುಜಾತಾ ಪರಮೇಶ್ವರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯದ ಹೆಸರಾಂತ ಸಾಹಿತಿ ಹಾಗೂ ಥಟ್ ಅಂತ ಹೇಳಿ ಕಾರ್ಯಕ್ರಮದ ರುವಾರಿ ಡಾ.ನಾ. ಸೋಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಸಾಪ ಕಾರ್ಯದರ್ಶಿ ಎಂ.ಎನ್. ಸುಂದರ್‌ರಾಜ್, ಎಚ್. ರಾಮಲಿಂಗಪ್ಪ ಉಪಸ್ಥಿತರಿರುವರು. ವೇದಿಕೆ ಅಧ್ಯಕ್ಷೆ ಸುಜಯಾ ಪ್ರಸಾದ್ ಅಧ್ಯಕ್ಷತೆ ವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸುಜಯಾ ಪ್ರಸಾದ್, ವೇದಾ ನಾಗರಾಜ್, ರೂಪಾ, ಶಾಲಿನಿ, ಪಾರ್ವತಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !