ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಕ್ಕಿನಕಲ್ಮಠ: ನಾಳೆಯಿಂದ ಸ್ಮರಣೋತ್ಸವ

Last Updated 19 ಜನವರಿ 2019, 13:58 IST
ಅಕ್ಷರ ಗಾತ್ರ

ಶಿವಮೊಗ್ಗ: ಬೆಕ್ಕಿನಕಲ್ಮಠದ ಗುರುಬಸವ ಭವನದಲ್ಲಿ ಜ. 21 ಹಾಗೂ 22ರಂದು ಪರಮ ತಪಸ್ವಿ ಗುರುಬಸವ ಸ್ವಾಮಿಗಳ 107ನೇ ಪುಣ್ಯ ಸ್ಮರಣೋತ್ಸವ, ಶರಣ ಸಾಹಿತ್ಯ ಸಮ್ಮೇಳನ ಮತ್ತು ಭಾವೈಕ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಬೆಕ್ಕಿನಕಲ್ಮಠದ ಸ್ಮರಣೋತ್ಸವ ಸಮಿತಿ ಹಮ್ಮಿಕೊಂಡಿರುವ ಈ ಸ್ಮರಣೋತ್ಸವದಲ್ಲೇ 470ನೇ ಮಾಸಿಕ ಶಿವಾನುಭವಗೋಷ್ಠಿ, ಶರಣ ಸಾಹಿತ್ಯ ಸಮ್ಮೇಳನ ಹಾಗೂ ಅಲ್ಲಮ್ಮ ಪ್ರಭು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಮಲ್ಲಿಕಾರ್ಜುನ ಮರುಘ ರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು ಎಂದು ಸಮಿತಿಯ ಅಧ್ಯಕ್ಷೆ ಮಣಿ ನಂಜುಂಡಶೆಟ್ಟಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

21ರ ಸಂಜೆ 5ಕ್ಕೆ ವಿಧಾನಸಭೆಯ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಸಮಾರಂಭ ಉದ್ಘಾಟಿಸುವರು. ಸಂಸದ ಬಿ.ವೈ. ರಾಘವೇಂದ್ರ ಮಠದ ದಿನದರ್ಶಿಕೆ ಬಿಡುಗಡೆ ಮಾಡುವರು. ವಚನಗಳಲ್ಲಿ ಬಂಡಾಯದ ನೆಲೆ ವಿಷಯ ಕುರಿತು ಆಯನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಟಿ.ಸಿ. ಭಾರತಿ ಪ್ರಧಾನ ಉಪನ್ಯಾಸ ನೀಡುವರು ಎಂದು ವಿವರ ನೀಡಿದರು.

ಶಾಸಕರಾದ ಕೆ.ಎಸ್. ಈಶ್ವರಪ್ಪ, ಎಸ್. ರುದ್ರೇಗೌಡ್ರು, ಉಪ ಮೇಯರ್ ಎಸ್.ಎನ್. ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ಅನಿತಾ ರವಿಶಂಕರ್, ಎಚ್.ಸಿ.ಯೋಗೀಶ್, ಎನ್.ಜೆ.ರಾಜಶೇಖರ್ ಉಪಸ್ಥಿತರಿರುವರು. ಬೆಂಗಳೂರಿನ ಸಾಹಿತಿ ಡಾ.ಬಸವರಾಜ ಕಲ್ಗುಡಿ ಅವರಿಗೆ ಅಲ್ಲಮಪ್ರಭು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಾಜಿ ಶಾಸಕರ ವೇದಿಕೆಯ ಅಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ, ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಯು.ಸೋಮಶೇಖರ್, ಧಾರವಾಡದ ಪ್ರಾಧ್ಯಾಪಕ ಡಾ.ಎಚ್.ನಿರಂಜನಮೂರ್ತಿ, ಸಮಾಜ ಸೇವಕರಾದ ಭೋಜರಾಜ್ ಹರಮಘಟ್ಟ, ಶೋಭಾ ವೆಂಕಟರಮಣ ಅವರನ್ನು ಸನ್ಮಾನಿಸಲಾಗುವುದು ಎಂದರು.

ಜ. 22ರ ಸಂಜೆ 5ಕ್ಕೆ ಭಾವೈಕ್ಯ ಸಮ್ಮೇಳನ ಹಾಗೂ ಗುರುಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ನಡೆಯಲಿದೆ. ಭಟ್ಟಾರಕ ಸ್ವಾಮೀಜಿ ಸಾನಿಧ್ಯ ವಹಿಸುವರು. ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಸಮಾರಂಭ ಉದ್ಘಾಟಿಸುವರು ಎಂದು ವಿವರ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್, ಮೇಯರ್ ಲತಾ ಗಣೇಶ್, ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಪಾಲಿಕೆ ಸದಸ್ಯರಾದ ಬಿ.ಎ. ರಮೇಶ್ ಹೆಗಡೆ, ನಾಗರಾಜ್ ಕಂಕಾರಿ, ಪಿ. ಪ್ರಭಾಕರ್ ಉಪಸ್ಥಿತರಿರುವರು. ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರಿಗೆ ಗುರುಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಭಾವೈಕ್ಯತೆ ಕುರಿತು ನಾಡೋಜ ಮಹೇಶ್ ಜೋಶಿ ಉಪನ್ಯಾಸ ನೀಡಯವರು. ಎಚ್.ವಿ.ಮಹೇಶ್ವರಪ್ಪ, ಎಂ.ಹಾಲಪ್ಪ, ಬಿ.ವೈ.ಅರುಣಾ ದೇವಿ, ಶಿವಪ್ಪ, ಡಾ.ಗೋಪಾಲಕೃಷ್ಣ ಕೋಳ್ತಾಯ, ಜಯಶ್ರೀ ಅಪ್ಪಾಜಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ರತ್ನಮ್ಮ ಮಂಜುನಾಥ್, ಶಕುಂತಲಾ ಜಗದೀಶ್, ಖಜಾಂಚಿ ಶಾಂತಾ ಆನಂದ್, ಎನ್.ಜೆ. ರಾಜಶೇಖರ್, ಚಂದ್ರಶೇಖರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT