ಮೇ 17ರಂದು ಅಲೆಮಾರಿ ಮಕ್ಕಳಿಂದ ನಾಟಕ ಪ್ರದರ್ಶನ

ಭಾನುವಾರ, ಮೇ 26, 2019
31 °C

ಮೇ 17ರಂದು ಅಲೆಮಾರಿ ಮಕ್ಕಳಿಂದ ನಾಟಕ ಪ್ರದರ್ಶನ

Published:
Updated:

ಶಿವಮೊಗ್ಗ: ಸಹ್ಯಾದ್ರಿ ಕಾಲೇಜು ಹೊರವಲಯದ ಅಲೆಮಾರಿ ಕ್ಯಾಂಪ್‌ ಮಕ್ಕಳು ಮೇ 17ರಂದು ಸಂಜೆ 5.30ಕ್ಕೆ ನಾಟಕ ಪ್ರದರ್ಶಿಸಲಿದ್ದಾರೆ.

ಅಂದು ಸಾಗರದ ಸ್ಪಂದನ ಹಮ್ಮಿಕೊಂಡಿದ್ದ ‘ಕಲರವ’ ರಂಗಶಿಬಿರದ ಸಮಾರೋಪ ನಡೆಯಲಿದೆ. ಸ್ಪಂದನ ರಂಗ ತಂಡ ಮಕ್ಕಳಿಗೆ ಶಿಬಿರದ ಮೂಲಕ ನಾಟಕದ ಅಭಿರುಚಿ ಬೆಳೆಸುತ್ತಿದೆ. ಮಕ್ಕಳ ಬಳಿಗೆ ಹೋಗಿ ತರಬೇತಿ ನೀಡುತ್ತಿದೆ. ಅವರಿಂದಲೇ ನಾಟಕ ಆಡಿಸುವ ಮಹತ್ತರ ಕೆಲಸದಲ್ಲಿ ಯಶಸ್ವಿಯಾಗಿದೆ ಎಂದು ಸ್ಪಂದನದ ಮುಖ್ಯಸ್ಥೆ ಎಂ.ವಿ.ಪ್ರತಿಭಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಲೆಮಾರಿ ಮಕ್ಕಳಿಗೆ 9 ದಿನಗಳ ರಂಗ ಶಿಬಿರ ಆಯೋಜಿಸಿತ್ತು. ಸಮಾರೋದಲ್ಲಿ ಕೋಟಗಾನಹಳ್ಳಿ ರಾಮಯ್ಯ ರಚಿಸಿರುವ ಹಕ್ಕಿ ಹಾಡು ನಾಟಕ ಪ್ರದರ್ಶನವಿದೆ. ಶ್ರೀಪಾದ ಭಟ್ ಸಂಗೀತ ನೀಡಿದ್ದಾರೆ. ದಿವ್ಯಾ, ಪಲ್ಲವಿ, ಕಾವ್ಯಾ, ಸಂಜು, ಕಾವೇರಿ, ಪೂಜಾ, ದೇವಿ, ಜ್ಯೋತಿ, ಅನುಷಾ, ಗಣೇಶ್, ಗೀತಾ ಎನ್, ಪಶು, ಮಂಜುನಾಥ್, ಎಸ್.ಮಂಜುನಾಥ್, ಲಕ್ಷ್ಮೀ, ಭಾಗ್ಯಾ, ಮಂಜುಳಾ, ರಕ್ಷಿತಾ, ಸರಸ್ವತಿ, ರೇಣುಕಾ, ಲಕ್ಷ್ಮಿ ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ ಎಂದರು.

ರೈತ ಮುಖಂಡ ಕಡಿದಾಳ್ ಶಾಮಣ್ಣ, ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಕವಯಿತ್ರಿ ರೇಣುಕಾ ಯಲವಾರ್, ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಭಾಗವಹಿಸುವರು ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಅನಿಲ್, ಗಂಗಣ್ಣಿ, ಲಕ್ಷ್ಮಣ್ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !