ಗುರುವಾರ , ಆಗಸ್ಟ್ 22, 2019
27 °C

11ರಿಂದ ರಾಷ್ಟ್ರೀಯ ಕರಾಟೆ ಪಂದ್ಯಗಳು ಆರಂಭ

Published:
Updated:

ಶಿವಮೊಗ್ಗ: ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಆ.11ರಂದು 17ನೇ ರಾಷ್ಟ್ರೀಯ ಕರಾಟೆ ಪಂದ್ಯ ಆಯೋಜಿಸಲಾಗಿದೆ.

ಜಿಲ್ಲಾ ಕರಾಟೆ ಸಂಸ್ಥೆ, ಎ.ಜೆಡ್. ಮಾರ್ಷಿಯಲ್ ಆರ್ಟ್ಸ್ ಸಂಸ್ಥೆ ಆಯೋಜಿಸಿರುವ ಈ ಪಂದ್ಯವನ್ನು ಅಂದು ಬೆಳಿಗ್ಗೆ 10ಕ್ಕೆ ಶಾಸಕ ಕೆ.ಎಸ್.ಈಶ್ವರಪ್ಪ ಉದ್ಘಾಟಿಸುವರು.
ಸೋನಾ ಹೊಂಡಾ ಸಂಸ್ಥೆ ನಿರ್ದೇಶಕ ಇಕ್ಬಾಲ್ ಹಬೀಬ್, ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮೇಯರ್ ಲತಾ ಗಣೇಶ್ ಭಾಗವಹಿಸುವರು ಎಂದು ಕರಾಟೆ ಸಂಸ್ಥೆಯ ಅಧ್ಯಕ್ಷ ಡಾ.ಶಿಹಾನ್ ಮುಹೀದ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಪಂದ್ಯಾವಳಿಗೆ ವಿವಿಧ ಜಿಲ್ಲೆಗಳ 1,200 ಕ್ರೀಡಾಪಟುಗಳು ಭಾಗವಹಿಸುವರು. ಸುಮಾರು 150 ತೀರ್ಪುಗಾರರು ಭಾಗವಹಿಸುವರು. 3 ವಿಭಾಗಗಳಲ್ಲಿ ಈ ಪಂದ್ಯಗಳು ನಡೆಯಲಿವೆ. ಎಲ್ಲಾ ವಯೋಮಾನದವರೂ ಭಾಗವಹಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನವೀನ್, ಜೆ.ಸಾಧಿಕ್, ಮಂಜುನಾಥ್, ಮಹಮದ್‌, ಶಾಹೀದ್, ಭರತ್ ಉಪಸ್ಥಿತರಿದ್ದರು.

Post Comments (+)