ಶನಿವಾರ, ಡಿಸೆಂಬರ್ 7, 2019
22 °C

ಇಂದು ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸೆ.15ರಂದು ಸಂಜೆ 5.30ಕ್ಕೆ ಸಂಘದ ಶಾಂತಲಾ ಸ್ಪೆರೋಕ್ಯಾಸ್ಟ್ ಸಭಾಂಗಣದಲ್ಲಿ ಸರ್.ಎಂ. ವಿಶ್ವೇಶ್ವರಾಯ ಜನ್ಮ ದಿನಾಚರಣೆ (ಎಂಜಿನಿಯರ್ ಡೇ) ಹಮ್ಮಿಕೊಂಡಿದೆ.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಸಮಾರಂಭ ಉದ್ಘಾಟಿಸುವರು. ಶಿವಮೊಗ್ಗದ ಕೈಗಾರಿಕಾ ಸಂಸ್ಥೆಗಳಾದ ಬೆಂಗಳೂರು ಕೋಲ್ಡ್ ಬಿಲ್ಡಿಂಗ್ ವರ್ಕ್ಸ್, ರಾಜ್‌ಟೆಕ್ ಮೆಷನರೀಸ್ ಹಾಗೂ ದಿನೇಶ್ ಕಂಪ್ರೆಸರ್ಸ್ ಅಂಡ್ ಪವರ್ ಎಂಜಿನಿಯರಿಂಗ್ ಸಂಸ್ಥೆಗಳು, ವಿಶೇಷ ಸಾಧನೆ ಮಾಡಿದ ಕಾರ್ಮಿಕರಾದ ಎಸ್.ಸುಂದರಮೂರ್ತಿ, ಬಿ.ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಗುವುದು. ಸನ್ಮಾನಿಸಲಾಗುವುದು. ಅಮೃತ್ ನೋನಿ ತಯಾರಕರಾದ ರಾಮೇನಕೊಪ್ಪದ ವ್ಯಾಲ್ಯೂ ಪ್ರಾಡಕ್ಟ್ಸ್ ಪ್ರೈ.ಲಿ.ಗೆ ವಿಶೇಷ ಪುರಸ್ಕಾರ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆರ್ಥಿಕ ಕುಸಿತ ಭಾರತಕ್ಕೆ ಸೀಮಿತವಲ್ಲ. ಜಿಲ್ಲೆಯ ಕೈಗಾರಿಕಾ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಮೊದಲ ಆದ್ಯತೆ ನೀಡಲಾಗುವುದು. ಮುಖ್ಯಮಂತ್ರಿ, ಕೈಗಾರಿಕಾ, ಹಣಕಾಸು ಸಚಿವರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.

ಆರ್ಥಿಕ ಕುಸಿತದಿಂದಾಗಿ ಶಿವಮೊಗ್ಗ ನಗರದಲ್ಲಿ ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆ ಕ್ಷೀಣಿಸಿದೆ. 12 ಸಾವಿರ ಉದ್ಯೋಗದಲ್ಲಿ 3 ಸಾವಿರ ಕಡಿತಗೊಳಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟಿ.ರುದ್ರೇಶ್, ಎಸ್.ಎಸ್.ಉದಯ್ ಕುಮಾರ್, ಬಿ.ಆರ್. ಸಂತೋಷ್, ಡಿ.ಗೋಪಿನಾಥ್, ಎನ್.ಗೋಪಿನಾಥ್, ಎಂ.ಭಾರದ್ವಾಜ್, ವಸಂತ ಹೋಬಳಿದಾರ್, ಎಂ.ಎಲ್.ಪ್ರತಾಪ್, ಎಂ.ಜಗನ್ನಾಥ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)