ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ‘ಸಮರ ಬೈರವಿ’ ಪುಸ್ತಕ ಬಿಡುಗಡೆ

Last Updated 10 ಅಕ್ಟೋಬರ್ 2019, 12:44 IST
ಅಕ್ಷರ ಗಾತ್ರ

ಶಿವಮೊಗ್ಗ: ವಿನಾಯಕ ನಗರದ ನವ್ಯಶ್ರೀ ಸಭಾಂಗಣದಲ್ಲಿ ಅ.11ರ ಸಂಜೆ 6ಕ್ಕೆ ಸಂತೋಷ್ ತಮ್ಮಯ್ಯ ಅವರ ‘ಸಮರ ಬೈರವಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಲೆನಾಡು ವನ್ಯಜೀವಿ, ಸಾಂಸ್ಕೃತಿಕ ಪ್ರತಿಷ್ಠಾನ, ಭದ್ರಾವತಿಯ ವಿಶ್ವ ಭೂಷಣ ವಿಶ್ವಸ್ಥ ಮಂಡಳಿಯ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಸೈನಿಕರ ಕುರಿತು ಬರೆದ ಪುಸ್ತಕ. ಅವರನ್ನು ನೆನಪಿಸುವ, ಅವರ ಹೋರಾಟಗಳನ್ನು ಬಿಂಬಿಸಲಾಗಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥ ದಿಲೀಪ್ ನಾಡಿಗ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ.ಭಾನುಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ.ವಿದ್ಯಾಶಂಕರ್, ಮಧುಕರ ಕಾನಿಟ್ಕರ್, ಡಾ.ವೀಣಾಭಟ್ ಉಪಸ್ಥಿತರಿರುವರು. ಯುವ ಬರಹಗಾರ ಅರ್ಜುನ್ ದೇವಲಾದಕೆರೆ ಪುಸ್ತಕ ಕುರಿತು ಮಾತನಾಡುವರು. ನಂತರ ಸಂವಾದ ಕಾರ್ಯಕ್ರಮ ಇರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಸುನಿಲ್, ಮಹದೇವಸ್ವಾಮಿ, ಅಜಯ್ ಕುಮಾರ್ ಶಮರ್ಾ, ಅಜಿತ್, ಬಿ.ವಿ.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT