ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ವಿವಾಹದಲ್ಲಿ ಆಯನೂರು ಪುತ್ರಿ ಕಲ್ಯಾಣ

Last Updated 11 ಡಿಸೆಂಬರ್ 2019, 10:30 IST
ಅಕ್ಷರ ಗಾತ್ರ

ಶಿವಮೊಗ್ಗ:ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮಂಜುಳಾ ದಂಪತಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ತಮ್ಮ ಪುತ್ರಿಯ ವಿವಾಹ ನಡೆಸಲು ನಿರ್ಧಿಸಿದ್ದಾರೆ.

ಪೆಸಿಟ್‌ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಜ.30ರಂದು ಧರ್ಮಶ್ರೀ ಸೇವಾ ಟ್ರಸ್ಟ್ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಿದೆ. ಆಯನೂರು ದಂಪತಿ ಈ ಮಹೋತ್ಸವದಲ್ಲಿಮಹೇಂದ್ರ ಜೊತೆ ತಮ್ಮ ಪುತ್ರಿ ಶಮಾತ್ಮಿಕ ಅವರ ವಿವಾಹ ಮಾಡುವ ಜತೆಗೆ, ಇತರೆ 100 ಜೋಡಿಗಳ ಮದುವೆಯ ಎಲ್ಲ ಖರ್ಚು ವೆಚ್ಚು ವೆಚ್ಚಗಳನ್ನೂ ಭರಿಸುತ್ತಿದ್ದಾರೆ. ವರನಿಗೆ ಪಂಚೆ, ಶರ್ಟ್, ವಧುವಿಗೆ ತಾಳಿ, ಕಾಲುಂಗುರ ಮತ್ತು ವಧು–ವರರ ತಂದೆ, ತಾಯಿಗಳಿಗೆ ಬಟ್ಟೆ ನೀಡಲಾಗುತ್ತಿದೆ. 5 ಸಾವಿರ ಜನರಿಗೆ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗವಹಿಸುವವರು ಡಿ.30ರ ಒಳಗೆ ಹೆಸರು ನೋಂದಾಯಿಸಬಹುದು. ಅರ್ಜಿ ಸಲ್ಲಿಸುವವರು, ವಿಧಾನ ಪರಿಷತ್ ಸದಸ್ಯರು, ಸಹಕಾರ ಭವನ, ಆರ್‌ಟಿಒ ಕಚೇರಿ ರಸ್ತೆ, ಶಿವಮೊಗ್ಗ– ಈ ವಿಳಾಸಕ್ಕೆಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 94481 05059, 94481 27254, ಸಂಪರ್ಕಿಸಬಹುದು ಎಂದರು.

ಸರಳ ಮದುವೆಗೆ ಪ್ರೋತ್ಸಾಹ ನೀಡಲು,ಬಡವರಿಗೆನೆರವಾಗಲು ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಈ ನಡೆ ಇತರೆ ಎಲ್ಲ ರಾಜಕಾರಣಿಗಳು, ಶ್ರೀಮಂತರಿಗೆ ಮಾದರಿಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಚ್.ಸಿ.ಬಸವರಾಜಪ್ಪ, ಬಿ.ಆರ್.ಮಧುಸೂದನ್, ಬಿ.ಎಸ್.ನಾಗರಾಜ್, ಹಿರಣ್ಣಯ್ಯ, ಲಕ್ಷ್ಮಣಪ್ಪ, ಕೆ.ವಿ.ಅಣ್ಣಪ್ಪ, ಉಪೇಂದ್ರ, ವೆಂಕಟೇಶ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT